Site icon Vistara News

IPL 2024 Points Table: ಚೆನ್ನೈಗೆ ಹೀನಾಯವಾಗಿ ಸೋಲುಣಿಸಿ ಅಂಕಪಟ್ಟಿಯಲ್ಲಿ 4ನೇ ಸ್ಥಾನಕ್ಕೇರಿದ ಲಕ್ನೋ

IPL 2024 Points Table

ಚೆನ್ನೈ: ಬೃಹತ್​ ಮೊತ್ತದ, ಅತ್ಯಂತ ರೋಚಕವಾಗಿ ನಡೆದ ಮಂಗಳವಾರದ ಐಪಿಎಲ್​(IPL 2024) ಪಂದ್ಯದಲ್ಲಿ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತವರಿನಲ್ಲಿಯೇ ಸೋಲಿನ ಮುಖಭಂಗ ಎದುರಿಸಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್(Lucknow Super Giants)​ ತಂಡ 6 ವಿಕೆಟ್​ಗಳಿಂದ ಗೆದ್ದು ಚೆನ್ನೈ ತಂಡದ ಸೊಕ್ಕಡಗಿಸಿದೆ. ಜತೆಗೆ ಈ ಗೆಲುವಿನೊಂದಿಗೆ ಚೆನ್ನೈ ಹಿಂದಿಕ್ಕಿ ಅಂಕಪಟ್ಟಿಯಲ್ಲಿ ನಾಲ್ಕನೇ ಸ್ಥಾನಕ್ಕೇರಿದೆ. ಸೋಲು ಕಂಡ ಚೆನ್ನೈ 5ನೇ ಸ್ಥಾನಕ್ಕೆ ಕುಸಿದಿದೆ.

ಇಂದು ನಡೆಯುವ ಗುಜರಾತ್​ ಮತ್ತು ಡೆಲ್ಲಿ ನಡುವಣ ಪಂದ್ಯದಲ್ಲಿ ಶುಭಮನ್​ ಗಿಲ್​ ಸಾರಥ್ಯದ ಗುಜರಾತ್​ ತಂಡ ಗೆದ್ದರೆ 10 ಅಂಕದೊಂದಿಗೆ 5ನೇ ಸ್ಥಾನಕ್ಕೇರುತ್ತದೆ. ಚೆನ್ನೈ ಮತ್ತೆ ಒಂದು ಸ್ಥಾನ ಕುಸಿದು 6ನೇ ಸ್ಥಾನ ಪಡೆಯಲಿದೆ. ಡೆಲ್ಲಿ ಗೆದ್ದರೆ 6ನೇ ಸ್ಥಾನಕ್ಕೇರಲಿದೆ. ಪ್ಲೇ ಆಫ್​ ಪ್ರವೇಶಕ್ಕೆ 8 ತಂಡಗಳ ಮಧ್ಯೆ ಭಾರೀ ಪೈಪೋಟಿ ಏರ್ಪಟ್ಟಿದ್ದು, ಪಂದ್ಯಗಳು ರೋಚಕವಾಗಿ ಸಾಗುತ್ತಿದೆ.

ಇದನ್ನೂ ಓದಿ IPL 2024 : ಸ್ಟೊಯ್ನಿಸ್​​ ಶತಕ, ಚೆನ್ನೈ ವಿರುದ್ಧ 6 ವಿಕೆಟ್​ ಗೆಲವು ಸಾಧಿಸಿದ ಲಕ್ನೊ

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಲಕ್ನೋ85310 (+0.148)
ಚೆನ್ನೈ8448 (+0.415)
ಗುಜರಾತ್8448 (-1.055)
ಮುಂಬೈ8356 (-0.227)
ಡೆಲ್ಲಿ8356 (-0.477)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)

ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಇತ್ತಂಡಗಳ ನಡುವಿನ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ ಚೆನ್ನೈ 20 ಓವರ್‌ಗಳಲ್ಲಿ 4 ವಿಕೆಟ್‌ಗಳಿಗೆ 210 ರನ್‌ ಗಳಿಸಿತು. ಇದನ್ನು ಬೆನ್ನತ್ತಿದ ಲಕ್ನೋ 19.3 ಓವರ್‌ ಗಳಲ್ಲಿ 4 ವಿಕೆಟ್‌ಗೆ 213 ರನ್‌ ಗಳಿಸಿ, 6 ವಿಕೆಟ್‌ ಗಳಿಂದ ಜಯಭೇರಿ ಬಾರಿಸಿತು.

ಚೇಸಿಂಗ್​ ವೇಳೆ ಸ್ಫೋಟಕ ಬ್ಯಾಟಿಂಗ್​ ನಡೆಸಿದ ಮಾರ್ಕಸ್‌ ಸ್ಟಾಯಿನಿಸ್‌ 63 ಎಸೆತಗಳಲ್ಲಿ 13 ಬೌಂಡರಿ, 6 ಸಿಕ್ಸರ್‌ಗಳ ಸಮೇತ ಅಜೇಯ 124 ರನ್‌ ಚಚ್ಚಿ ತಂಡಕ್ಕೆ ಸ್ಮರಣೀಯ ಗೆಲುವು ತಂದು ಕೊಟ್ಟರು. ಅಂತಿಮ ಓವರ್​ ತನಕ ಪಂದ್ಯ ಚೆನ್ನೈ ತಂಡದ ಕೈಯಲ್ಲಿತ್ತು. ಮುಸ್ತಫಿಜುರ್‌ ಎಸೆದ ಈ ಓವರ್​ನಲ್ಲಿ 20 ರನ್‌ ಹರಿದು ಬಂತು. ಇದು ಚೆನ್ನೈ ಸೋಲಿಗೆ ಪ್ರಮುಖ ಕಾರಣ. ಋತುರಾಜ್‌ 60 ಎಸೆತ ಎದುರಿಸಿ, 12 ಬೌಂಡರಿ , 3 ಸಿಕ್ಸರ್‌ಗಳೊಂದಿಗೆ 108 ರನ್‌ ಚಚ್ಚಿ ಶತಕ ಬಾರಿಸಿದರು. ಆದರೆ ಸೋಲಿನಿಂದ ಅವರ ಶತಕ ವ್ಯರ್ಥಗೊಂಡಿತು.

Exit mobile version