ಮುಂಬಯಿ: ಸನ್ರೈಸರ್ಸ್ ಹೈದರಾಬಾದ್(Sunrisers Hyderabad) ವಿರುದ್ಧ 7 ವಿಕೆಟ್ಗಳ ಗೆಲುವು ಸಾಧಿಸಿದ 5 ಬಾರಿಯ ಚಾಂಪಿಯನ್ ಮುಂಬೈ ಇಂಡಿಯನ್ಸ್(Mumbai Indians ) ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಿಂದ ಮೇಲೆದ್ದು 9ನೇ ಸ್ಥಾನಿಯಾಗಿದೆ. ಹಾಲಿ ರನ್ನರ್ ಅಪ್ ಗುಜರಾತ್ ಟೈಟಾನ್ಸ್ ಕೊನೆಯ ಸ್ಥಾನಕ್ಕೆ ಕುಸಿದಿದೆ. ಹೈದರಾಬಾದ್ ಸೋಲು ಕಂಡರೂ ಈ ಹಿಂದಿನಂತೆ ನಾಲ್ಕನೇ ಸ್ಥಾನದಲ್ಲೇ ಮುಂದುವರಿದಿದೆ.
ಇಂದು ನಡೆಯುವ ಪಂದ್ಯಲ್ಲಿ ರಾಜಸ್ಥಾನ್ ರಾಯಲ್ಸ್ ಮತ್ತು ಡೆಲ್ಲಿ ಕ್ಯಾಪಿಟಲ್ಸ್ ಮುಖಾಮುಖಿಯಾಗಲಿದೆ. ಡೆಲ್ಲಿಗೆ ಪ್ಲೇ ಆಫ್ ರೇಸ್ನಲ್ಲಿ ಉಳಿಯಬೇಕಿದ್ದರೆ ಈ ಪಂದ್ಯದಲ್ಲಿ ಗೆಲುವು ಅತ್ಯಗತ್ಯ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಅಧಿಕೃತ ಎಂಟ್ರಿ ಕೊಡಲಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಕೆಕೆಆರ್ | 11 | 8 | 3 | 16 (+1.453) |
ರಾಜಸ್ಥಾನ್ ರಾಯಲ್ಸ್ | 10 | 8 | 2 | 16 (+0.622) |
ಚೆನ್ನೈ | 11 | 6 | 5 | 14 (+0.700) |
ಹೈದರಾಬಾದ್ | 11 | 6 | 5 | 12 (-0.065) |
ಲಕ್ನೋ | 11 | 6 | 5 | 12 (-0.371) |
ಡೆಲ್ಲಿ | 11 | 5 | 6 | 10 (-0.442) |
ಆರ್ಸಿಬಿ | 11 | 4 | 7 | 8 (-0.049) |
ಪಂಜಾಬ್ | 10 | 4 | 6 | 8 (-0.062) |
ಮುಂಬೈ | 12 | 4 | 8 | 8 (-0.212) |
ಗುಜರಾತ್ | 11 | 4 | 7 | 8 (-1.320) |
ಸೂರ್ಯಕುಮಾರ್ ಯಾದವ್ (Suryakumar Yadav) ಬಾರಿಸಿದ ಸ್ಫೋಟಕ ಶತಕ (102,51 ಎಸೆತ, 12 ಫೋರ್, 6 ಸಿಕ್ಸರ್) ಹಾಗೂ ಬೌಲರ್ಗಳ ಸಂಘಟಿತ ಹೋರಾಟದಿಂದ ಮಿಂಚಿದ ಮುಂಬೈ ಇಂಡಿಯನ್ಸ್ (Mumbai Indians) ತಂಡ ಐಪಿಎಲ್ 17ನೇ ಆವೃತ್ತಿಯ (IPL 2024) 55ನೇ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ (Sunrisers Hyderabad) ವಿರುದ್ಧ 7 ವಿಕೆಟ್ ಸುಲಭ ವಿಜಯ ದಾಖಲಿಸಿದೆ. ಈ ಮೂಲಕ ಸೂರ್ಯನ ಪ್ರತಾಪಕ್ಕೆ ಸನ್ ಮಂಕಾಗಿ ಹೋಯಿತು.
ಇದನ್ನೂ ಓದಿ IPL 2024 : ಸೂರ್ಯನ ಪ್ರತಾಪಕ್ಕೆ ಮಂಕಾದ ಸನ್; ಮುಂಬೈಗೆ 7 ವಿಕೆಟ್ ಭರ್ಜರಿ ಗೆಲುವು
ವಾಂಖೆಡೆ ಕ್ರಿಕೆಟ್ ಸ್ಟೇಡಿಯಮ್ನಲ್ಲಿ ನಡೆದ ಹಣಾಹಣಿಯಲ್ಲಿ ಟಾಸ್ ಗೆದ್ದ ಮುಂಬಯಿ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಸನ್ ರೈಸರ್ಸ್ ತಂಡ ತನ್ನ ಪಾಲಿನ 20 ಓವರ್ಗಳಲ್ಲಿ 8 ವಿಕೆಟ್ಗೆ 173 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಮುಂಬೈ ತಂಡ ಆರಂಭಿಕ ಹಿನ್ನಡೆ ಹೊರತಾಗಿಯೂ ಸೂರ್ಯಕುಮಾರ್ ಯಾದವ್ ಅವರ ಅದ್ಭುತ್ ಇನಿಂಗ್ಸ್ ನೆರವಿನಿಂದ ಇನ್ನೂ 7 ಎಸೆತಗಳು ಬಾಕಿ ಇರುವಂತೆಯೇ 3 ವಿಕೆಟ್ ಕಳೆದುಕೊಂಡು 174 ರನ್ ಬಾರಿಸಿ ಗೆಲುವು ಸಾಧಿಸಿತು.