Site icon Vistara News

IPL 2024 Points Table: ರೋಚಕ ಗೆಲುವಿನೊಂದಿಗೆ ಅಂಕಪಟ್ಟಿಯಲ್ಲಿ ಪ್ರಗತಿ ಸಾಧಿಸಿದ ಪಂಜಾಬ್​

IPL 2024 Points Table

ಅಹಮದಾಬಾದ್​: ಗುರುವಾರ ನಡೆದ ಅತ್ಯಂತ ರೋಚಕ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ತಂಡ ಗುಜರಾತ್​ ಟೈಟಾನ್ಸ್(​Gujarat Titans) ತಂಡವನ್ನು ಮಣಿಸಿ ಅಂಕಪಟ್ಟಿಯಲ್ಲಿ 5ನೇ ಸ್ಥಾನಕ್ಕೇರಿದೆ. ಈ ಪಂದ್ಯಕ್ಕೂ ಮುನ್ನ ಶಿಖರ್​ ಧವನ್​ ಪಡೆ 7ನೇ ಸ್ಥಾನಿಯಾಗಿತ್ತು. ಇದೀಗ ಗೆಲುವಿನೊಂದಿಗೆ 2 ಸ್ಥಾನಗಳ ಪ್ರಗತಿ ಸಾಧಿಸಿದೆ. ಸೋಲು ಕಂಡ ಗುಜರಾತ್​ ಒಂದು ಸ್ಥಾನ ಕುಸಿತ ಕಂಡು 6ನೇ ಸ್ಥಾನ ಪಡೆದಿದೆ.

ನೂತನ ಅಂಕಪಟ್ಟಿ ಹೀಗಿದೆ

ತಂಡಪಂದ್ಯಗೆಲುವುಸೋಲುಅಂಕ
ಕೋಲ್ಕೊತಾ ನೈಟ್‌ ರೈಡರ್ಸ್​3306 (+2.518)
ರಾಜಸ್ಥಾನ್​ ರಾಯಲ್ಸ್​3306 (+1.249)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಪಂಜಾಬ್​ ಕಿಂಗ್ಸ್​4224 (-0.220)
ಗುಜರಾತ್​ ಟೈಟಾನ್ಸ್​4224 (-0.580)
ಹೈದರಾಬಾದ್​​3122 (+0.204)
ಆರ್​ಸಿಬಿ4132 (-0.876)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)

ರೋಚಕ ಪಂದ್ಯ ಗೆದ್ದ ಪಂಜಾಬ್​


ಶಶಾಂಕ್ ಸಿಂಗ್​ ಬಾರಿಸಿದ ಅಬ್ಬರದ ಅರ್ಧ ಶತಕದ (29 ಎಸೆತ, 6 ಫೋರ್​, 4 ಸಿಕ್ಸರ್​) ನೆರವು ಪಡೆದ ಪಂಜಾಬ್ ಕಿಂಗ್ಸ್ ತಂಡದ ಐಪಿಎಲ್​ನ 2024ನೇ ಆವೃತ್ತಿಯ 17ನೇ ಪಂದ್ಯದಲ್ಲಿ (IPL 2024z) ಗುಜರಾತ್ ಟೈಟಾನ್ಸ್ ವಿರುದ್ಧ 3 ವಿಕೆಟ್ ರೋಚಕ ಗೆಲುವು ಸಾಧಿಸಿತು. ಇದರೊಂದಿಗೆ ಗುಜರಾತ್​ ತಂಡದ ನಾಯಕ ಶುಭ್​ಮನ್​ ಗಿಲ್​ (89) ಅವರ ಅರ್ಧ ಶತಕ ವ್ಯರ್ಥಗೊಂಡಿತು. ಅದೇ ರೀತಿ ಸ್ಥಳೀಯ ಗುಜರಾತ್ ತಂಡದ ಅಭಿಮಾನಿಗಳಿಗೆ ನಿರಾಸೆ ಮೂಡಿತು. ಗುಜರಾತ್ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಆಡಿರುವ ನಾಲ್ಕರಲ್ಲಿ ಇದು ಎರಡನೇ ಸೋಲು. ಟೈಟಾನ್ಸ್ ಬಳಗ ಎಸ್ಆರ್​ಎಚ್ ಮತ್ತು ಮುಂಬಯಿ ವಿರುದ್ಧ ಗೆದ್ದಿದ್ದರೆ, ಸಿಎಸ್​ಕೆ ಹಾಗೂ ಪಂಜಾಬ್ ವಿರುದ್ಧ ಸೋತಿತು.

ಇದನ್ನೂ ಓದಿ IPL 2024 : ಗುಜರಾತ್ ತಂಡವನ್ನು 3 ವಿಕೆಟ್​ಗಳಿಂದ ಮಣಿಸಿದ ಪಂಜಾಬ್​ ಕಿಂಗ್ಸ್​​

ಇಲ್ಲಿನ ನರೇಂದ್ರ ಮೋದಿ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್​ ಸೋತು ಮೊದಲು ಬ್ಯಾಟ್ ಮಾಡಿದ ಗುಜರಾತ್​ ತಂಡ ನಿಗದಿತ 20 ಓವರ್​ಗಳು ಪೂರ್ಣಗೊಂಡಾಗ 4 ವಿಕೆಟ್​ಗೆ 199 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್​ 19.5 ಓವರ್​ಗಳಲ್ಲಿ 200 ರನ್ ಬಾರಿಸಿ ಗೆಲುವು ಸಾಧಿಸಿತು. ಇದರೊಂದಿಗೆ ಕಳೆದ ಎರಡು ಪಂದ್ಯಗಳಲ್ಲಿ ಸತತವಾಗಿ ಸೋಲು ಕಂಡಿದ್ದ ಪಂಜಾಬ್ ತಂಡಕ್ಕೆ ಚೈತನ್ಯ ದೊರಕಿತು. ಪಂಜಾಬ್ ಮೊದಲ ಪಂದ್ಯದಲ್ಲಿ ಡೆಲ್ಲಿ ವಿರುದ್ದ ಗೆದ್ದ ಬಳಿಕ ಎರಡು ಪಂದ್ಯಗಳನ್ನು ಸೋತು ಇದೀಗ ನಾಲ್ಕನೇ ಪಂದ್ಯವನ್ನು ಗೆದ್ದಿದೆ.

Exit mobile version