ಚೆನ್ನೈ: ಬುಧವಾರ ರಾತ್ರಿ ನಡೆದ ಐಪಿಎಲ್ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ತಂಡ ಪಂಜಾಬ್ ಕಿಂಗ್ಸ್ ವಿರುದ್ಧ 7 ವಿಕೆಟ್ ಅಂತರದ ಹೀನಾಯ ಸೋಲು ಕಂಡಿತು. ಗೆಲುವು ಸಾಧಿಸಿದ ಪಂಜಾಬ್ ಅಂಕಪಟ್ಟಿಯಲ್ಲಿ(IPL 2024 Points Table) ಗುಜರಾತ್ ಟೈಟಾನ್ಸ್ ತಂಡವನ್ನು ಹಿಂದಿಕ್ಕಿ 7ನೇ ಸ್ಥಾನಕ್ಕೇರಿತು. ಜತೆಗೆ ಪ್ಲೇ ಆಫ್ ಆಸೆಯನ್ನು ಇನ್ನೂ ಜೀವಂತವಿರಿಸಿತು. ಚೆನ್ನೈ ಸೋಲು ಕಂಡರೂ ಕೂಡ ಈ ಹಿಂದಿನಂತೆ 4ನೇ ಸ್ಥಾನದಲ್ಲೇ ಮುಂದುವರಿಯಿತು.
ಇಂದು ನಡೆಯುವ ಪಂದ್ಯದಲ್ಲಿ ಸನ್ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ಮುಖಾಮುಖಿಯಾಗಲಿವೆ. ರಾಜಸ್ಥಾನ್ ಗೆದ್ದರೆ ಮೊದಲ ತಂಡವಾಗಿ ಪ್ಲೇ ಆಫ್ಗೆ ಪ್ರವೇಶಿಸಲಿದೆ. ಸನ್ರೈಸರ್ಸ್ ಗೆದ್ದರೆ ಚೆನ್ನೈ ನಾಲ್ಕನೇ ಸ್ಥಾನಕ್ಕೆ ಕುಸಿಯಲಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 9 | 8 | 1 | 16 (+0.694) |
ಕೆಕೆಆರ್ | 9 | 6 | 3 | 12 (+1.096) |
ಲಕ್ನೋ | 10 | 6 | 4 | 12 (+0.094) |
ಚೆನ್ನೈ | 10 | 5 | 5 | 10 (+0.627) |
ಹೈದರಾಬಾದ್ | 9 | 5 | 4 | 10 (+0.075) |
ಡೆಲ್ಲಿ | 11 | 5 | 6 | 10 (-0.442) |
ಪಂಜಾಬ್ | 10 | 4 | 8 | 8 (-0.062) |
ಗುಜರಾತ್ | 10 | 4 | 6 | 8 (-1.113) |
ಮುಂಬೈ | 10 | 3 | 7 | 6 (-0.272) |
ಆರ್ಸಿಬಿ | 10 | 3 | 7 | 6 (-0.415) |
ಎಂ.ಎ ಚಿದಂಬರಂ ಸ್ಟೇಡಿಯಂನಲ್ಲಿ ನಡೆದ ಐಪಿಎಲ್ನ(IPL 2024) 49 ಪಂದ್ಯದಲ್ಲಿ ಟಾಸ್ ಗೆದ್ದು ಬೌಲಿಂಗ್ ಆಯ್ದುಕೊಂಡ ಪಂಜಾಬ್ ಇದಕ್ಕೆ ತಕ್ಕ ಪ್ರದರ್ಶನ ನೀಡುವು ಮೂಲಕ ಚೆನ್ನೈ ತಂಡವನ್ನು 162 ರನ್ಗೆ ಕಟ್ಟಿಹಾಕಿತು. ಸಾಧಾರಣ ಮೊತ್ತದ ಗುರಿಯನ್ನು ಅಷ್ಟೇ ಸೊಗಸಾಗಿ ಬೆನ್ನಟ್ಟಿದ ಪಂಜಾಬ್ ಬ್ಯಾಟರ್ಗಳು 17.5 ಓವರ್ಗಳಲ್ಲಿ ಕೇವಲ 3 ವಿಕೆಟ್ಗೆ 163 ರನ್ ಬಾರಿಸಿ ಗೆಲುವಿನ ಪತಾಕೆ ಹಾರಿಸಿದರು.
ಇದನ್ನೂ ಓದಿ IPL 2024: ನಾಯಕ ಹಾರ್ದಿಕ್ ಪಾಂಡ್ಯ ಸೇರಿ ಮುಂಬೈ ತಂಡದ ಆಟಗಾರರಿಗೆ ಬಿತ್ತು ಭಾರೀ ದಂಡ
Third away win of the season for #PBKS as they ease past #CSK by 7 wickets 👏
— IndianPremierLeague (@IPL) May 1, 2024
The comprehensive win keeps their hopes alive for a spot in the 🔝4️⃣
Scorecard ▶️ https://t.co/EOUzgkMFN8 #TATAIPL | #CSKvPBKS pic.twitter.com/OUIEajRVgO
ಚೇಸಿಂಗ್ ವೇಳೆ ಕಳೆದ ಪಂದ್ಯದ ಶತಕ ವೀರ ಜಾನಿ ಬೇರ್ಸ್ಟೋ 46 ರನ್ ಬಾರಿಸಿ ಈ ಪಂದ್ಯದಲ್ಲಿಯೂ ತಮ್ಮ ಬ್ಯಾಟಿಂಗ್ ಪ್ರತಾಪ ತೋರಿದರು. ಆರಂಭದಿಂದಲೇ ಬಿರುಸಿನ ಬ್ಯಾಟಿಂಗ್ಗೆ ಒತ್ತು ಕೊಟ್ಟ ಅವರು ಪ್ರತಿ ಓವರ್ನಲ್ಲಿಯೂ ಕನಿಷ್ಠ ಒಂದು ಬೌಂಡರಿ ಅಥವಾ ಸಿಕ್ಸರ್ ಬಾರಿಸುತ್ತಲೇ ಮುನ್ನುಗಿದರು. ಇವರಿಗೆ 2ನೇ ಕ್ರಮಾಂಕದಲ್ಲಿ ಆಡಲಿಳಿದ ದಕ್ಷಿಣ ಆಫ್ರಿಕಾದ ಹಾರ್ಡ್ ಹಿಟ್ಟರ್ ರೀಲಿ ರೂಸೊ ಉತ್ತಮ ಸಾಥ್ ನೀಡಿದರು. ಬೇರ್ಸ್ಟೋ ವಿಕೆಟ್ ಪತನದ ಬಳಿಕ ಇವರು ತಂಡವನ್ನು ಆಧರಿಸಿದರು. 23 ಎಸೆತ ಎದುರಿಸಿ 43(5 ಬೌಂಡರಿ, 2 ಸಿಕ್ಸರ್) ರನ್ ಬಾರಿಸಿದರು. ಅಂತಿಮವಾಗಿ ಶಶಾಂಕ್ ಸಿಂಗ್(25) ಮತ್ತು ಹಂಗಾಮಿ ನಾಯಕ ಸ್ಯಾಮ್ ಕರನ್(26) ಅಜೇಯರಾಗಿ ಉಳಿದು ತಂಡವನ್ನು ಗೆಲುವಿನ ದಡ ಸೇರಿಸಿದರು. ಇದೇ ವೇಳೆ ಶಶಾಂಕ್ ಟಿ20 ಕ್ರಿಕೆಟ್ನಲ್ಲಿ 2 ಸಾವಿರ ರನ್ಗಳ ಗಡಿ ದಾಡಿದರು.