Site icon Vistara News

IPL 2024 Points Table: ಮತ್ತೆ ಅಂಕಪಟ್ಟಿಯಲ್ಲಿ ಅಗ್ರಸ್ಥಾನಕ್ಕೇರಿದ ರಾಜಸ್ಥಾನ್​; ಆರ್​ಸಿಬಿಗೆ ಎಷ್ಟನೇ ಸ್ಥಾನ?

IPL 2024 Points Table

ಜೈಪುರ: ಆರ್​ಸಿಬಿ(Royal Challengers Bengaluru) ವಿರುದ್ಧ ಭರ್ಜರಿ ಗೆಲುವು ಸಾಧಿಸಿದ ರಾಜಸ್ಥಾನ್​ ರಾಯಲ್ಸ್(Rajasthan Royals)​ ತಂಡ ಕೆಕೆಆರ್​ ತಂಡವನ್ನು ಹಿಂದಿಕ್ಕಿ ಅಂಕಪಟ್ಟಿಯಲ್ಲಿ(IPL 2024 Points Table) ಮತ್ತೆ(IPL 2024) ಅಗ್ರಸ್ಥನಾವನ್ನು ವಶಪಡಿಸಿಕೊಂಡಿದೆ. ಸೋಲು ಕಂಡರೂ ಕೂಡ ಆರ್​ಸಿಬಿ ಈ ಹಿಂದೆ ಇದ್ದ 8ನೇ ಸ್ಥಾನದಲ್ಲೇ ಮುಂದುವರಿದಿದೆ. ಇಂದು ನಡೆಯುವ ಮುಂಬೈ ಮತ್ತು ಡೆಲ್ಲಿ ಪಂದ್ಯದಲ್ಲಿ ಡೆಲ್ಲಿ ಗೆದ್ದರೆ ಆರ್​ಸಿಬಿ 9ನೇ ಸ್ಥಾನಕ್ಕೆ ಕುಸಿಯಲಿದೆ. ರಾಜಸ್ಥಾನ್​ ಗೆಲುವಿನಿಂದ ಕೆಕೆಆರ್​ ದ್ವಿತೀಯ ಸ್ಥಾನಕ್ಕೆ ಜಾರಿದೆ.

ಇಂದಿನ ಪಂದ್ಯಗಳು


ಇಂದು 2 ಪಂದ್ಯಗಳು ನಡೆಯಲಿದೆ. ಮೊದಲ ಪಂದ್ಯದಲ್ಲಿ ಡೆಲ್ಲಿ ಮತ್ತು ಮುಂಬೈ ಕಣಕ್ಕಿಳಿದರೆ, ರಾತ್ರಿಯ ಪಂದ್ಯದಲ್ಲಿ ಲಕ್ನೋ ಮತ್ತು ಗುಜರಾತ್​ ಸೆಣಸಾಡಲಿದೆ. ಹ್ಯಾಟ್ರಿಕ್​ ಸೋಲು ಕಂಡಿರುವ ಮುಂಬೈ ಗೆಲುವಿನ ಖಾತೆ ತೆರೆಯುವ ವಿಶ್ವಾಸದಲ್ಲಿದೆ.

ನೂತನ ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​4408 (+1.120)
ಕೆಕೆಆರ್​​3306 (+2.518)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಲಕ್ನೋ ಸೂಪರ್​ ಜೈಂಟ್ಸ್​3214(+0.483)
ಹೈದರಾಬಾದ್​​4224 (+0.409)
ಪಂಜಾಬ್​4224 (-0.220)
ಗುಜರಾತ್​​​4224 (-0.580)
ಆರ್​ಸಿಬಿ5142 (-0.843)
ಡೆಲ್ಲಿ ಕ್ಯಾಪಿಟಲ್ಸ್​4132 (-1.347)
ಮುಂಬೈ ಇಂಡಿಯನ್ಸ್​3030 (-1.423)

ಆರ್​ಸಿಬಿಗೆ ಹೀನಾಯ ಸೋಲು

ವಿರಾಟ್​ ಕೊಹ್ಲಿಯ ದಾಖಲೆಯ 8ನೇ ಐಪಿಎಲ್ ಶತಕದ ಹೊರತಾಗಿಯೂ ಬೌಲರ್​​ಗಳ ಕೆಟ್ಟ ಪ್ರದರ್ಶನದಿಂದ ಸೊರಗಿದ ರಾಯ್ ಚಾಲೆಂಜರ್ಸ್​ ಬೆಂಗಳೂರು ತಂಡ (Royal Challengers Bangalore) ಹಾಲಿ ಆವೃತ್ತಿಯ ಐಪಿಎಲ್​ನಲ್ಲಿ (IPL 2024) ಮತ್ತೊಂದು ಸೋಲಿಗೆ ಒಳಗಾಗಿದೆ. ರಾಜಸ್ಥಾನ್ ರಾಯಲ್ಸ್ ವಿರುದ್ಧದ ಐಪಿಎಲ್​ನ 19ನೇ ಪಂದ್ಯದಲ್ಲಿ 6 ವಿಕೆಟ್​ಗಳ ಮುಖಭಂಗ ಎದುರಿಸಿತು. ಇದು ಆರ್​ಸಿಬಿ ಪಾಲಿಗೆ ಹಾಲಿ ಆವೃತ್ತಿಯಲ್ಲಿ ಸತತ ಮೂರನೇ ಸೋಲು. ಅಂತೆಯ ಆಡಿರುವ ಒಟ್ಟು ಐದು ಪಂದ್ಯಗಳಲ್ಲಿ ನಾಲ್ಕನೇ ಪರಾಜಯ. ಕೇವಲ ಒಂದು ಜಯ ಗಳಿಸಿ 2 ಅಂಕ ಪಡೆದಿರುವ ಆರ್​ಸಿಬಿ ಈ ಬಾರಿ ಪ್ಲೇಆಫ್​ ಹಂತಕ್ಕೇರುವುದು ಬಹುತೇಕ ಸಂಶಯ.

ಇದನ್ನೂ ಓದಿ IPL 2024 : ಬಟ್ಲರ್​ ಸೆಂಚುರಿ, ಆರ್​ಸಿಬಿಗೆ ಹೀನಾಯ ಸೋಲು; ಕೊಹ್ಲಿ ಶತಕದ ಸಾಧನೆ ವ್ಯರ್ಥ

ಸವಾಯ್​ ಮಾನ್​ ಸಿಂಗ್ ಕ್ರಿಕೆಟ್​ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ರಾಜಸ್ಥಾನ್ ತಂಡ ಮೊದಲು ಫೀಲ್ಡಿಂಗ್ ಆಯ್ಕೆ ಮಾಡಿಕೊಂಡಿತು. ಅಂತೆಯೇ ಮೊದಲು ಬ್ಯಾಟ್ ಮಾಡಿದ ಆರ್​ಸಿಬಿ ನಿಗದಿತ 20 ಓವರ್​ಗಳಲ್ಲಿ 3 ವಿಕೆಟ್ ನಷ್ಟ ಮಾಡಿಕೊಂಡರು 183 ರನ್​ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ತಂಡ 19.1 ಓವರ್​ಗಳಲ್ಲಿ 4 ವಿಕೆಟ್ ಗೆ 189 ರನ್ ಬಾರಿಸಿ ಸುಲಭ ವಿಜಯ ತನ್ನದಾಗಿಸಿಕೊಂಡಿತು. 58 ಎಸೆತಗಳಲ್ಲಿ ಶತಕ ಬಾರಿಸಿದ ಜೋಸ್ ಬಟ್ಲರ್​ ಗೆಲುವಿನ ರೂವಾರಿ ಎನಿಸಿಕೊಂಡರು. ಅವರದ್ದು ಕೂಡ ಐಪಿಎಲ್​ನಲ್ಲಿ 6ನೇ ಶತಕವಾಗಿದೆ. ಈ ಮೂಲಕ ಕ್ರಿಸ್​ಗೇಲ್ ಅವರ ಸಾಧನೆಯನ್ನು ಸರಿಗಟ್ಟಿದ್ದಾರೆ.

Exit mobile version