Site icon Vistara News

IPL 2024 Points Table: ಹ್ಯಾಟ್ರಿಕ್​ ಗೆಲುವಿನೊಂದಿಗೆ ಅಗ್ರಸ್ಥಾನ ಪಡೆದ ರಾಜಸ್ಥಾನ್​; ಉಳಿದ ತಂಡದ ಸ್ಥಿತಿ ಹೇಗಿದೆ?

IPL 2024 Points Table

ಮುಂಬಯಿ: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿಯಲ್ಲಿ 14 ಪಂದ್ಯಗಳು ಮುಕ್ತಾಯ ಕಂಡಿದೆ. ರಾಜಸ್ಥಾನ್​ ರಾಯಲ್ಸ್​ ಹ್ಯಾಟ್ರಿಕ್​​ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಅಗ್ರಸ್ಥಾನ ಕಾಯ್ದುಕೊಂಡಿದೆ. ಉಳಿದ ತಂಡಗಳ ಸ್ಥಿತಿ ಹೇಗಿದೆ ಎಂಬ ಮಾಹಿತಿ ಇಂತಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​3306 (+1.249)
ಕೋಲ್ಕೊತಾ ನೈಟ್‌ ರೈಡರ್ಸ್2204 (+1.047)
​ಚೆನ್ನೈ ಸೂಪರ್​ ಕಿಂಗ್ಸ್​3214 (+0.976)
ಗುಜರಾತ್‌ ಟೈಟಾನ್ಸ್3214(-0.738)
ಸನ್​ರೈಸರ್ಸ್​ ಹೈದರಾಬಾದ್​3122‌ (+0.204)
ಲಕ್ನೋ ಸೂಪರ್​ ಜೈಂಟ್ಸ್​2112 (+0.025)
ಡೆಲ್ಲಿ ಕ್ಯಾಪಿಟಲ್ಸ್​3122 (-0.016)
ಪಂಜಾಬ್​ ಕಿಂಗ್ಸ್​3122 (-0.337)
ಆರ್​ಸಿಬಿ3122 (-0.711)
ಮುಂಬೈ ಇಂಡಿಯನ್ಸ್​3030 (-1.423)

ಮುಂಬೈಗೆ ಹ್ಯಾಟ್ರಿಕ್​ ಸೋಲು


ಹಾರ್ದಿಕ್ ಪಾಂಡ್ಯ (Hardik Pandya) ನೇತೃತ್ವದ ಮುಂಬಯಿ ಇಂಡಿಯನ್ಸ್ (Mumbai Indians) ತಂಡ ತವರಿನ ಮೈದಾನ ಮುಂಬಯಿನಲ್ಲೂ ವೈಫಲ್ಯ ಕಂಡಿದೆ. ರಾಜಸ್ಥಾನ್ ರಾಯಲ್ಸ್ (Rajasthan Royals) ವಿರುದ್ಧದ ಐಪಿಎಲ್​ 2024ನೇ ಆವೃತ್ತಿಯ (IPL 2024) 14ನೇ ಪಂದ್ಯದಲ್ಲಿ 6 ವಿಕೆಟ್​ ಸೋಲಿಗೆ ಒಳಗಾಯಿತು. ಇದು ಹಾರ್ದಿಕ್ ಪಾಂಡ್ಯ ನೇತೃತ್ವದ ಮುಂಬಯಿ ಇಂಡಿಯನ್ಸ್ ಬಳಗಕ್ಕೆ ಹಾಲಿ ಆವೃತ್ತಿಯಲ್ಲಿ ಸತತ ಮೂರನೇ ಸೋಲು. ಹೀಗಾಗಿ ಅಂಕಪಟ್ಟಿಯಲ್ಲಿ ಕೊನೇ ಸ್ಥಾನ (10) ಪಡೆಯುವಂತಾಯಿತು. ಪಾಂಡ್ಯ ನಾಯಕತ್ವದ ಬಗ್ಗೆ ಮುಂಬಯಿ ಇಂಡಿಯನ್ಸ್​ ಅಭಿಮಾನಿಗಳು ಆಕ್ರೋಶ ವ್ಯಕ್ತಪಡಿಸುತ್ತಿರುವ ನಡುವೆಯೇ ಸತತ ಸೋಲುಗಳು ಅವರ ಆಸೆಯನ್ನು ನುಚ್ಚು ನೂರು ಮಾಡಿದೆ.

ಇದನ್ನೂ ಓದಿ IPL 2024 : 250 ​ ಪಂದ್ಯಗಳನ್ನಾಡಿದ ಮುಂಬಯಿ ಇಂಡಿಯನ್ಸ್​, ಉಳಿದ ತಂಡಗಳದ್ದೆಷ್ಟು?

ಇಲ್ಲಿ ವಾಂಖೆಡೆ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಿದ ಮುಂಬಯಿ ಇಂಡಿಯನ್ಸ್ ತಂಡ ಕಳಪೆ ಬ್ಯಾಟಿಂಗ್ ಪ್ರದರ್ಶನ ನೀಡಿ ನಿಗದಿತ 20 ಓವರ್​ಗಳಲ್ಲಿ 9 ವಿಕೆಟ್ ನಷ್ಟಕ್ಕೆ 125 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ರಾಜಸ್ಥಾನ್ ರಾಯಲ್ಸ್ ತಂಡ 15.3 ಓವರ್​ಗಳಲ್ಲಿ 4 ವಿಕೆಟ್​ ಕಳೆದುಕೊಂಡು 127 ರನ್ ಬಾರಿಸಿ ಭರ್ಜರಿ ವಿಜಯ ಸಾಧಿಸಿತು. 39 ಎಸೆತಗಳಲ್ಲಿ 54 ರನ್ ಬಾರಿಸಿದ ರಿಯಾನ್ ಪರಾಗ್​ ಬ್ಯಾಟಿಂಗ್​ನಲ್ಲಿ ತಂಡಕ್ಕೆ ನೆರವು ಕೊಟ್ಟರೆ, ಬೌಲಿಂಗ್​ನಲ್ಲಿ ಟ್ರೆಂಟ್ ಬೌಲ್ಟ್​ ಹಾಗೂ ಯಜ್ವೇಂದ್ರ ಚಹಲ್​ ತಲಾ 3 ವಿಕೆಟ್​ ಪಡೆದುಕೊಂಡು ಮಿಂಚಿದರು. ಇದು ರಾಜಸ್ಥಾನ್​ ತಂಡಕ್ಕೆ ಹಾಲಿ ಆವೃತ್ತಿಯಲ್ಲಿ ಹ್ಯಾಟ್ರಿಕ್ ವಿಜಯವಾಗಿದೆ.

Exit mobile version