Site icon Vistara News

IPL 2024 Points Table: ಕನ್ನಡಿಗ ರಾಹುಲ್​ ಸಾರಥ್ಯದ ಲಕ್ನೋಗೆ ಗೆಲುವು; ಅಂಕಪಟ್ಟಿಯಲ್ಲಿ ಭಾರೀ ಕುಸಿತ ಕಂಡ ಆರ್​ಸಿಬಿ

IPL 2024 Points Table

ಲಕ್ನೋ: ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ ಜೈಂಟ್ಸ್​(Lucknow Super Giants) ತಂಡ ನಿನ್ನೆ(ಶನಿವಾರ) ನಡೆದ ಐಪಿಎಲ್​ ಪಂದ್ಯದಲ್ಲಿ ಪಂಜಾಬ್​ ಕಿಂಗ್ಸ್(Punjab Kings)​ ವಿರುದ್ಧ ಗೆಲುವು ಸಾಧಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಬರೋಬ್ಬರಿ 5 ಸ್ಥಾನಗಳ ಪ್ರಗತಿ ಸಾಧಿಸಿದೆ. ಆರ್​ಸಿಬಿ 2 ಸ್ಥಾನಗಳ ಕುಸಿತ ಕಂಡು 7ನೇ ಸ್ಥಾನದಲ್ಲಿ ಕಾಣಿಸಿಕೊಂಡಿದೆ. ಈ ಗೆಲುವಿಗೂ ಮುನ್ನ ಲಕ್ನೋ ಕೊನೆಯ ಸ್ಥಾನಿಯಾಗಿತ್ತು. ಆದರೆ, ಒಂದೇ ಒಂದು ಗೆಲುವಿನಿಂದ ಈಗ 5ನೇ ಸ್ಥಾನ ಪಡೆದಿದೆ. ಜತೆಗೆ ರನ್​ ರೇಟ್​ ಕೂಡ ಉತ್ತಮವಾಗಿಸಿಕೊಂಡಿದೆ. ಸೋಲು ಕಂಡ ಪಂಜಾಬ್​ ಕೂಡ ಒಂದು ಸ್ಥಾನ ಕುಸಿತ ಕಂಡಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
​ ಚೆನ್ನೈ ಸೂಪರ್​ ಕಿಂಗ್ಸ್​2204 (+1.979)
ಕೋಲ್ಕೊತಾ ನೈಟ್‌ ರೈಡರ್ಸ್2204 (+1.047)
ರಾಜಸ್ಥಾನ್​ ರಾಯಲ್ಸ್​​2204 (+0.800)
ಸನ್​ರೈಸರ್ಸ್​ ಹೈದರಾಬಾದ್2102(+0.675)
ಲಕ್ನೋ ಸೂಪರ್​ ಜೈಂಟ್ಸ್​2112‌ (+0.025)
ಪಂಜಾಬ್​3122 (-0.337)
ಆರ್​ಸಿಬಿ3122 (-0.711)
ಗುಜರಾತ್‌ ಟೈಟಾನ್ಸ್2022 (-1.425)
ಡೆಲ್ಲಿ ಕ್ಯಾಪಿಟಲ್ಸ್​2020 (0.528)
ಮುಂಬೈ ಇಂಡಿಯನ್ಸ್​2020 (-0.925)

ಬ್ಯಾಟಿಂಗ್ ಹಾಗೂ ಬೌಲಿಂಗ್​ನಲ್ಲಿ ಸಂಘಟಿತ ಪ್ರದರ್ಶನ ನೀಡಿದ ಲಕ್ನೊ ಸೂಪರ್ ಜೈಂಟ್ಸ್ (Lacknow Supre Gainst)​ ತಂಡ ಐಪಿಎಲ್​ 17ನೇ ಆವೃತ್ತಿಯ (IPL 2024) 11ನೇ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ (Punjab Kinsg) ವಿರುದ್ಧ ಅಮೋಘ 21 ರನ್​ಗಳ ಗೆಲುವು ದಾಖಲಿಸಿದೆ. ತನ್ನ ಮೊದಲ ಪಂದ್ಯದಲ್ಲಿ ರಾಜಸ್ಥಾನ್ ವಿರುದ್ಧ ಸೋತಿದ್ದ ಲಕ್ನೊ ತಂಡ ಈ ಮೂಲಕ ಗೆಲುವಿನ ಹಳಿಗೆ ಮರಳಿದೆ. ಅತ್ತ ಪಂಜಾಬ್ ತಂಡ ಸತತ ಎರಡು ಸೋಲಿನ ಸುಳಿಗೆ ಸಿಲುಕಿತು. 

ಇದನ್ನೂ ಓದಿ IPL 2024 : ಪಂಜಾಬ್​ ವಿರುದ್ಧ 21 ರನ್​ಗಳ ಭರ್ಜರಿ ಜಯ ದಾಖಲಿಸಿದ ಲಕ್ನೊ

ಇಲ್ಲಿನ ಭಾರತ ರತ್ನ ಅಟಲ್​ ಬಿಹಾರಿ ವಾಜಪೇಯಿ ಏಕನಾ ಸ್ಟೇಡಿಯಮ್​ನಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಗೆದ್ದ ಲಕ್ನೊ ತಂಡ ಮೊದಲು ಬ್ಯಾಟ್ ಮಾಡಿ ನಿಗದಿತ 20 ಓವರ್​ಗಳಲ್ಲಿ 8 ವಿಕೆಟ್​ಗೆ 199 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಪಂಜಾಬ್ ತಂಡ ತನ್ನ ಪಾಲಿನ ಓವರ್​ಗಳು ಮುಕ್ತಾಯಗೊಂಡಾಗ 5 ವಿಕೆಟ್​ಗೆ 178 ರನ್ ಬಾರಿಸಿ ಸೋಲೊಪ್ಪಿಕೊಂಡಿತು.

ಬೃಹತ್​ ಮೊತ್ತದ ಗುರಿಯನ್ನು ಪಡೆದ ಪಂಜಾಬ್ ತಂಡ ಉತ್ತಮ ಪ್ರದರ್ಶನ ನೀಡಿತು. ನಾಯಕ ಶಿಖರ್ ಧವನ್​ (70) ಹಾಗೂ ಜಾನಿ ಬೈರ್​ಸ್ಟೋವ್​ (42) ಮೊದಲ ವಿಕೆಟ್​ಗೆ 102 ನ್ ಬಾರಿಸಿದರು. ಅವರಿಬ್ಬರು ಕ್ರೀಸ್​ನಲ್ಲಿ ಇರುವ ತನಕ ಗೆಲುವು ಪಂಜಾಬ್​ಗೆ ಎಂದು ನಿರೀಕ್ಷಿಸಲಾಗಿತ್ತು. ಆದರೆ, ಆ ಬಳಿಕ ಸತತವಾಗಿ ವಿಕೆಟ್​ ಕಳೆದುಕೊಂಡ ಪಂಜಾಬ್ ಸೋಲಿನ ಸುಳಿಗೆ ಸಿಲುಕಿತು. ಆ ಬಳಿಕ ಪ್ರಭ್​ಸಿಮ್ರಾನ್ ಸಿಂಗ್​ (19) ಹಾಗೂ ಕೊನೆಯಲ್ಲಿ ಲಿವಿಂಗ್ ಸ್ಟನ್​ (ಅಜೇಯ 28 ರನ್​) ಬಾರಿಸಿದರು.

Exit mobile version