Site icon Vistara News

IPL 2024 Points Table: ಡೆಲ್ಲಿ ಗೆಲುವಿನ ಬಳಿಕ ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ

IPL 2024 Points Table

ನವದೆಹಲಿ: ಗುಜರಾತ್​ ಟೈಟಾನ್ಸ್(Gujarat Titans)​ ವಿರುದ್ಧ ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ಗೆಲುವು ಸಾಧಿಸಿದ ಕಾರಣ ಅಂಕಪಟ್ಟಿಯಲ್ಲಿ(IPL 2024 Points Table) ಭಾರೀ ಬದಲಾವಣೆ ಸಂಭವಿಸಿದ್ದು, ಪ್ಲೇ ಆಫ್​ ರೇಸ್​ ಕೂಟ ತೀವ್ರ ಪೈಪೋಟಿ ಏರ್ಪಟ್ಟಿದೆ. 7ನೇ ಸ್ಥಾನಿಯಾಗಿದ್ದ ಡೆಲ್ಲಿ ಈ ಗೆಲುವಿನೊಂದಿಗೆ 6ನೇ ಸ್ಥಾನಕ್ಕೆ ಬಂದು ನಿಂತಿದೆ. 6ನೇ ಸ್ಥಾನದಲ್ಲಿದ್ದ ಗುಜರಾತ್ 7ಕ್ಕೆ ಕುಸಿದಿದೆ.

​ಇಂದು ನಡೆಯುವ ಪಂದ್ಯದಲ್ಲಿ ಹೈದರಾಬಾದ್​ ಮತ್ತು ಆರ್​ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯದಲ್ಲಿ ಹೈದರಾಬಾದ್​ ಗೆದ್ದರೆ ಕೆಕೆಆರ್​ ತಂಡವನ್ನು ಹಿಂದಿಕ್ಕಿ 2ನೇ ಸ್ಥಾನಕ್ಕೇರಲಿದೆ. ಕೆಕೆಆರ್​ 2ನೇ ಸ್ಥಾನದಿಂದ ಮೂರನೇ ಸ್ಥಾನಕ್ಕೆ ಕುಸಿಯಲಿದೆ. ಆರ್​ಸಿಬಿ ಗೆದ್ದರೂ ಕೂಡ ಕೊನೆಯ ಸ್ಥಾನದಲ್ಲೇ ಮುಂದುವರಿಯಲಿದೆ.

ಅಂಕಪಟ್ಟಿ

ತಂಡಪಂದ್ಯಗೆಲುವುಸೋಲುಅಂಕ
ರಾಜಸ್ಥಾನ್​ ರಾಯಲ್ಸ್​87114 (+0.698)
ಕೆಕೆಆರ್​​75210 (+1.206)
ಹೈದರಾಬಾದ್​​75210 (+0.914)
ಲಕ್ನೋ85310 (+0.148)
ಚೆನ್ನೈ8448 (+0.415)
ಡೆಲ್ಲಿ9458 (-0.386)
ಗುಜರಾತ್​9458 (-0.974)
ಮುಂಬೈ8356 (-0.227)
ಪಂಜಾಬ್​8264 (-0.292)
ಆರ್​ಸಿಬಿ8172 (-1.046)

ಇಲ್ಲಿನ ಅರುಣ್​ ಜೇಟ್ಲಿ ಅಂತಾರಾಷ್ಟ್ರೀಯ ಕ್ರಿಕೆಟ್​ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್​ ಸೋತು ಬ್ಯಾಟಿಂಗ್​ಗೆ ಇಳಿಸಲ್ಪಟ್ಟ ಡೆಲ್ಲಿ ಕ್ಯಾಪಿಟಲ್ಸ್​ ರಿಷಭ್​ ಪಂತ್​(88*) ಮತ್ತು ಅಕ್ಷರ್​ ಪಟೇಲ್​(66) ಅವರ ಸಮಯೋಚಿತ ಬ್ಯಾಟಿಂಗ್​ ನೆರವಿನಿಂದ ನಿಗದಿತ 20 ಓವರ್​ಗಳಲ್ಲಿ 4 ವಿಕೆಟ್​ಗೆ 224 ರನ್​ ಪೇರಿಸಿತು. ಜವಾಬಿತ್ತ ಗುಜರಾತ್ ದಿಟ್ಟ ಹೋರಾಟ ನಡೆಸಿದರೂ 8 ವಿಕೆಟ್​ಗೆ 220 ರನ್​ ಬಾರಿಸಿ ಸಣ್ಣ ಅಂತರದಿಂದ ​ಸೋಲೊಪ್ಪಿಕೊಂಡಿತು.

ಇದನ್ನೂ ಓದಿ IPL 2024: ಬ್ಲಾಕ್​ ಟಿಕೆಟ್ ಮಾರಾಟ ಜಾಲ ಭೇದಿಸಿದ ಚೆನ್ನೈ ಪೊಲೀಸರು; 12 ಮಂದಿ ಸೆರೆ

ಕೆಲ ಕ್ರಮಾಂಕದಲ್ಲಿ ಶಕ್ತಿ ಮೀರಿ ಬ್ಯಾಟಿಂಗ್​ ನಡೆಸಿದ ಡೇವಿಡ್​ ಮಿಲ್ಲರ್​ ಅರ್ಧಶತಕ ಬಾರಿಸುವ ಮೂಲಕ ಒಂದು ಹಂತದಲ್ಲಿ ಗುಜರಾತ್​ ಪಾಳಯದಲ್ಲಿ ಗೆಲುವಿನ ಆಸೆ ಚಿಗುರೊಡೆಯುವಂತೆ ಮಾಡಿದರು. ಆದರೆ ಉಳಿದ ಆಟಗಾರರಿಂದ ಉತ್ತಮ ಸಾಥ್​ ಸಿಗದ ಕಾರಣ ದೊಡ್ಡ ಹೊಡೆತಗಳಿಗೆ ಕೈ ಹಾಕಿ ರಾಸಿಖ್ ಸಲಾಂ ಅವರಿಗೆ ಕ್ಯಾಚ್​ ನೀಡಿ ವಿಕೆಟ್​ ಕೈಚೆಲ್ಲಿದರು. ಈ ವಿಕೆಟ್​ ಪತನದ ಬಳಿಕ ರಶೀದ್​ ಖಾನ್​ ಮತ್ತು ಸಾಯಿ ಕಿಶೋರ್​ ಸಿಡಿದು ನಿಂತರು. ಅಂತಿಮ ಓವರ್​ನಲ್ಲಿ ಗೆಲುವಿಗೆ 19 ರನ್​ ತೆಗೆಯುವ ಸವಾಲಿನಲ್ಲಿ ರಶೀದ್​ ಅವರು ಮುಕೇಶ್​ ಕುಮಾರ್​ಗೆ ಸತತ 2 ಬೌಂಡರಿ ಮತ್ತು ಒಂದು ಸಿಕ್ಸರ್​ ಬಾರಿಸಿ ಪಂದ್ಯವನ್ನು ರೋಚಕ ಹಂತಕ್ಕೆ ತಂದು ನಿಲ್ಲಿಸಿದರು. ಅಂತಿಮ ಎಸೆತದಲ್ಲಿ ಗೆಲುವಿಗೆ 5 ರನ್​ ಬೇಕಿದ್ದಾಗ ಇದನ್ನು ಬಾರಿಸುವಲ್ಲಿ ರಶೀದ್​ ಎಡವಿದರು. ಡೆಲ್ಲಿ ರೋಚಕ 4 ರನ್​ಗಳ ಗೆಲುವು ಸಾಧಿಸಿತು.

Exit mobile version