ಬೆಂಗಳೂರು: ಭಾನುವಾರ ನಡೆದ ಐಪಿಎಲ್ನ ಡಬಲ್ ಹೆಡರ್ ಪಂದ್ಯದಲ್ಲಿ ಆರ್ಸಿಬಿ ತಂಡ ಗುಜರಾತ್(Gujarat Titans) ವಿರುದ್ಧ ಗೆಲುವು ಸಾಧಿಸಿದರೆ, ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(Chennai Super Kings) ಬಲಿಷ್ಠ ಸನ್ರೈಸರ್ಸ್(Sunrisers Hyderabad) ವಿರುದ್ಧ ಅಮೋಘ ಗೆಲುವು ಸಾಧಿಸಿತು. ಆರ್ಸಿಬಿ(Royal Challengers Bengaluru) ಗೆದ್ದರೂ ಈ ತಂಡಕ್ಕೆ ಯಾವುದೇ ಲಾಭವಾಗಲಿಲ್ಲ. ಅಂಕಪಟ್ಟಿಯಲ್ಲಿ(IPL 2024 Points Table) ಕೊನೆಯ ಸ್ಥಾನದಲ್ಲೇ ಮುಂದುವರಿಯಿತು. ಆದರೆ, ಚೆನ್ನೈ ತಂಡದ ಗೆಲುವಿನಿಂದ ಲಕ್ನೋ, ಹೈದರಾಬಾದ್ ಮತ್ತು ಡೆಲ್ಲಿ ತಂಡಗಳು ತಲಾ ಒಂದು ಸ್ಥಾನ ಕುಸಿತ ಕಂಡಿತು.
ಚೆನ್ನೈ ತಂಡ ಈ ಪಂದ್ಯಕ್ಕೂ ಮುನ್ನ 6ನೇ ಸ್ಥಾನಿಯಾಗಿತ್ತು. ಗೆಲುವಿನೊಂದಿಗೆ ಮೂರು ಸ್ಥಾನಗಳ ಜಿಗಿತ ಕಂಡು ಮೂರನೇ ಸ್ಥಾನಕ್ಕೇರಿದೆ. ಮೂರನೇ ಸ್ಥಾನದಲ್ಲಿದ್ದ ಹೈದರಾಬಾದ್ 4ನೇ ಸ್ಥಾನಕ್ಕೆ, 4ನೇ ಸ್ಥಾನದಲ್ಲಿದ್ದ ಲಕ್ನೋ 5ಕ್ಕೆ, 5ನೇ ಸ್ಥಾನದಲ್ಲಿದ್ದ ಡೆಲ್ಲಿ 6ನೇ ಸ್ಥಾನಕ್ಕೆ ಕುಸಿಯಿತು. ಆರ್ಸಿಬಿ ವಿರುದ್ಧ ಸೋತರೂ ಕೂಡ ಗುಜರಾತ್ 7ನೇ ಸ್ಥಾನದಲ್ಲೇ ಮುಂದುವರಿದಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 9 | 8 | 1 | 16 (+0.694) |
ಕೆಕೆಆರ್ | 8 | 5 | 3 | 10 (+0.972) |
ಚೆನ್ನೈ | 9 | 5 | 4 | 10 (+0.810) |
ಹೈದರಾಬಾದ್ | 9 | 5 | 4 | 10 (+0.075) |
ಲಕ್ನೋ | 9 | 5 | 4 | 10 (+0.059) |
ಡೆಲ್ಲಿ | 10 | 5 | 5 | 10 (-0.276) |
ಗುಜರಾತ್ | 10 | 4 | 6 | 8 (-1.113) |
ಪಂಜಾಬ್ | 9 | 3 | 6 | 8 (-0.187) |
ಮುಂಬೈ | 9 | 3 | 6 | 6 (-0.261) |
ಆರ್ಸಿಬಿ | 10 | 3 | 7 | 6 (-0.415) |
ಚೆನ್ನೈಗೆ ಅಮೋಘ ಗೆಲುವು
ಚೆನ್ನೈಯ ಚೆಪಾಕ್ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ದ್ವಿತೀಯ ಐಪಿಎಲ್(IPL 2024) ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ ಆಹ್ವಾನ ಪಡೆದ ಚೆನ್ನೈ(Chennai Super Kings) ತಂಡ ನಾಯಕ ಋತುರಾಜ್ ಗಾಯಕ್ವಾಡ್, ಡೇರಿಯಲ್ ಮಿಚೆಲ್ ಮತ್ತು ಶಿವಂ ದುಬೆ ಅವರ ಆಕ್ರಮಣಕಾರಿ ಬ್ಯಾಟಿಂಗ್ ಸಾಹಸದಿಂದ ನಿಗದಿತ 20 ಓವರ್ಗಳಲ್ಲಿ ಕೇವಲ 3 ವಿಕೆಟ್ ನಷ್ಟಕ್ಕೆ 212 ರನ್ ಬಾರಿಸಿತು. ಈ ಹಿಂದಿನ ಪಂದ್ಯಗಳಲ್ಲಿ ಸಲೀಸಾಗಿ ಮೂರು ಬಾರಿ 250ರ ಗಡಿ ದಾಟಿದ್ದ ಸನ್ರೈಸರ್ಸ್ ತಂಡಕ್ಕೆ ಈ ಮೊತ್ತ ಎಲ್ಲಿಂದಲೂ ಸಾಲದು ಎಂದು ನಿರೀಕ್ಷೆ ಮಾಡಿದ್ದವರಿಗೆ ಚೆನ್ನೈ ತಂಡದ ಮಧ್ಯಮ ವೇಗಿ ತುಷಾರ್ ದೇಶ್ಪಾಂಡೆ ಘಾತಕ ಸ್ಫೆಲ್ ಮೂಲಕ ಕಟ್ಟಿಹಾಕಿದರು. ಅಂತಿಮವಾಗಿ ಹೈದರಾಬಾದ್ 18.5 ಓವರ್ಗಳಲ್ಲಿ 134 ರನ್ಗೆ ಸರ್ವಪತನ ಕಂಡು ಹೀನಾಯವಾಗಿ ಸೋಲೊಪ್ಪಿಕೊಂಡಿತು.
ಇದನ್ನೂ ಓದಿ IPL 2024: ಗೆಲುವಿನಲ್ಲೂ ನೂತನ ದಾಖಲೆ ಬರೆದ ಆರ್ಸಿಬಿ
ಆರ್ಸಿಬಿಗೆ 9 ವಿಕೆಟ್ ಗೆಲುವು
ಇಲ್ಲಿನ ನರೇಂದ್ರ ಮೋದಿ ಕ್ರಿಕೆಟ್ ಸ್ಟೇಡಿಯಂನಲ್ಲಿ ನಡೆದ ಈ ಪಂದ್ಯದಲ್ಲಿ ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ಗುಜರಾತ್ ಟೈಟಾನ್ಸ್ ಸಾಯಿ ಸುದರ್ಶನ್(84*) ಮತ್ತು ಶಾರೂಖ್ ಖಾನ್(58) ಅರ್ಧಶತಕದ ಉಪಯುಕ್ತ ಬ್ಯಾಟಿಂಗ್ ನೆರವಿನಿಂದ 20 ಓವರ್ಗೆ 3 ವಿಕೆಟ್ ಕಳೆದುಕೊಂಡು ಭರ್ತಿ 200 ರನ್ ಪೇರಿಸಿತು. ಜವಾಬಿತ್ತ ಆರ್ಸಿಬಿ ಫುಲ್ ಬ್ಯಾಟಿಂಗ್ ಜೋಶ್ನೊಂದಿಗೆ ಕೇವಲ 16 ಓವರ್ಗಳಲ್ಲಿ 1 ವಿಕೆಟ್ನಷ್ಟಕ್ಕೆ 206 ರನ್ ಬಾರಿಸಿ ಭರ್ಜರಿ ಗೆಲುವು ತನ್ನದಾಗಿಸಿಕೊಂಡಿತು.