ಬೆಂಗಳೂರು: ಕ್ನನಡಿಗರ ನೆಚ್ಚಿನ ತಂಡವಾದ ಆರ್ಸಿಬಿ(RCB) 17ನೇ ಆವೃತ್ತಿಯ ಐಪಿಎಲ್(IPL 2024) ಟೂರ್ನಿಯಲ್ಲಿ ಗೆಲುವಿನ ಶುಭಾರಂಭ ಕಂಡಿದೆ. ಸೋಮವಾರ ತವರಿನ ಪಂದ್ಯದಲ್ಲಿ ಪಂಜಾಬ್ ಕಿಂಗ್ಸ್ ವಿರುದ್ಧ 4 ವಿಕೆಟ್ ಜಯ ಸಾಧಿಸಿತು. ಈ ಗೆಲುವಿನೊಂದಿಗೆ ಫಾಫ್ ಡು ಪ್ಲೆಸಿಸ್ ಪಡೆ ಅಂಕಪಟ್ಟಿಯಲ್ಲಿ(IPL 2024 Points Table) ಖಾತೆ ತೆರೆದಿದೆ.
ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ರಾಜಸ್ಥಾನ್ ರಾಯಲ್ಸ್ | 1 | 1 | 0 | 2(+1.000) |
ಚೆನ್ನೈ ಸೂಪರ್ ಕಿಂಗ್ಸ್ | 1 | 1 | 0 | 2 (+0.779) |
ಗುಜರಾತ್ ಟೈಟಾನ್ಸ್ | 1 | 1 | 0 | 2 (+0.300) |
ಕೋಲ್ಕತ್ತಾ ನೈಟ್ ರೈಡರ್ಸ್ | 1 | 1 | 0 | 2(+0.200) |
ಪಂಜಾಬ್ | 2 | 1 | 1 | 2+0.025 |
ಆರ್ಸಿಬಿ | 2 | 1 | 1 | 2 (-0.180) |
ಸನ್ರೈಸರ್ಸ್ ಹೈದರಾಬಾದ್ | 1 | 0 | 1 | 0 (-0.200) |
ಮುಂಬೈ ಇಂಡಿಯನ್ಸ್ | 1 | 0 | 1 | 0 (-0.300) |
ಡೆಲ್ಲಿ ಕ್ಯಾಪಿಟಲ್ಸ್ | 1 | 0 | 1 | 0 (-0.455) |
ಲಕ್ನೋ ಸೂಪರ್ ಜೈಂಟ್ಸ್ | 1 | 0 | 1 | 0 (-1.000) |
ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಟಾಸ್ ಸೋತು ಮೊದಲು ಬ್ಯಾಟ್ ಮಾಡಲು ಆಹ್ವಾನ ಪಡೆದ ಪಂಜಾಬ್ ಕಿಂಗ್ಸ್ ತಂಡ ನಿಗದಿತ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 176 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಆರ್ಸಿಬಿ 19.2 ಓವರ್ಗಳಲ್ಲಿ 6 ವಿಕೆಟ್ ಕಳೆದುಕೊಂಡು 178 ರನ್ ಬಾರಿಸಿ ಗೆಲುವು ಸಾಧಿಸಿತು. ಕೊನೇ ಹಂತದಲ್ಲಿ ಆರ್ಸಿಬಿ ವಿಕೆಟ್ಗಳನ್ನು ಕಳೆದುಕೊಳ್ಳುವ ಮೂಲಕ ಆತಂಕ್ಕೆ ಸಿಲುಕಿತು. ದಿನೇಶ್ ಕಾರ್ತಿಕ್ 3 ಫೋರ್ ಹಾಗೂ 2 ಸಿಕ್ಸರ್ ಸಮೇತ 10 ಎಸೆತದಲ್ಲಿ 28 ರನ್ ಹಾಗೂ ಮಹಿಪಾಲ್ ಲಾಮ್ರೋರ್ 8 ಎಸೆತದಲ್ಲಿ 2 ಫೋರ್ ಹಾಗೂ 1 ಸಿಕ್ಸರ್ ಸಮೇತ 17 ರನ್ ಬಾರಿಸಿ ಗೆಲುವು ತಂದುಕೊಟ್ಟರು.
ಇದನ್ನೂ ಓದಿ IPL 2024 : ಡೆಲ್ಲಿ ತಂಡಕ್ಕೆ ಸಮಾಧಾನ; ತಂಡ ಸೇರಿದ ದ. ಆಫ್ರಿಕಾದ ವೇಗಿ
ಆರಂಭಿಕರಾಗಿ ಆಡಲು ಇಳಿದ ವಿರಾಟ್ ಕೊಹ್ಲಿ ಉತ್ತಮವಾಗಿ ಬ್ಯಾಟ್ ಬೀಸಿದರು. ಹಿಂದಿನ ಪಂದ್ಯದಲ್ಲಿ ನಿಧಾನಗತಿಯಲ್ಲಿ ಆಡಿದ ಅವರು ಈ ಪಂದ್ಯದಲ್ಲಿ ಅಬ್ಬರಿಸಿದರು. ಆದರೆ, ವಿಕೆಟ್ ಪತನವಾದ ಕಾರಣ ಅವರ ಸ್ಟ್ರೈಕ್ ರೇಟ್ ನಿಧಾನವಾಗಿ ಕುಸಿಯಿತು. ಆದಾಗ್ಯೂ ಅವರು 49 ಎಸೆತಕ್ಕೆ 77 ರನ್ ಬಾರಿಸಿ ತಂಡದ ಮರ್ಯಾದೆ ಕಾಪಾಡಿದರು. ಹಿಂದಿನ ಪಂದ್ಯದಲ್ಲಿ ಮಿಂಚಿದ್ದ ಅನುಜ್ ರಾವತ್ 11 ರನ್ಗೆ ಸೀಮಿತಗೊಂಡರು. ಅಲ್ಲದೆ ಅವರು 14 ಎಸೆತಗಳನ್ನು ತೆಗೆದುಕೊಂಡರು. ಹೀಗಾಗಿ ಕೊನೇ ಹಂತದಲ್ಲಿ ಆರ್ಸಿಬಿಗೆ ರನ್ರೇಟ್ ಕಾಪಾಡಿಕೊಳ್ಳಲು ಸಾಧ್ಯವಾಗದೇ ಒತ್ತಡಕ್ಕೆ ಬಿತ್ತು. ಆದರೆ, ದಿನೇಶ್ ಕಾರ್ತಿಕ್ ಹಾಗೂ ಮಹಿಪಾಲ್ ಲಾಮ್ರೋರ್ ಆರ್ಸಿಬಿ ಅಭಿಮಾನಿಗಳ ಮುಖದಲ್ಲಿ ನಗು ಮೂಡಿಸಿದರು. ಕಗಿಸೊ ರಬಾಡ ಹಾಗೂ ಹರ್ಪ್ರೀತ್ ಬ್ರಾರ್ ತಲಾ 2 ವಿಕೆಟ್ ಪಡೆದರು.