ಮುಂಬಯಿ: 2024ರ ಐಪಿಎಲ್ ಟೂರ್ನಿಯ(IPL 2024) ವೇಳಾಪಟ್ಟಿ ಈಗಾಗಲೇ ಅನೌನ್ಸ್ ಆಗಿದೆ. ಲೋಕಸಭೆ ಚುನಾವಣೆ(lok sabha elections 2024) ಹಿನ್ನೆಲೆಯಲ್ಲಿ ಮೊದಲ 21 ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಪ್ರಕಟಿಸಲಾಗಿದೆ. ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(CSK) ಮತ್ತು ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB) ತಂಡ ಸೆಣಸಾಟ ನಡೆಸಲಿದೆ. ಇದೀಗ ದ್ವಿತೀಯ ಹಂತದ ವೇಳಾಪಟ್ಟಿ ಬಗ್ಗೆ ಐಪಿಎಲ್ ಆಡಳಿತ ಮಂಡಳಿ ಅಧ್ಯಕ್ಷ ಅರುಣ್ ಧುಮಾಲ್(IPL chairman Arun Dhumal) ಮಹತ್ವ ಮಾಹಿತಿ ನೀಡಿರುವುದಾಗಿ ವರದಿಯಾಗಿದೆ.
“ಲೋಕಸಭೆ ಚುನಾವಣೆಯಿಂದಾಗಿ ಈ ಬಾರಿ ಖಂಡಿತವಾಗಿಯೂ ನಮಗೆ ಸವಾಲು ಇದೆ. ಇನ್ನೊಂದೆಡೆ ಜೂನ್ ಮೊದಲ ವಾರದಲ್ಲಿ ಟಿ20 ವಿಶ್ವಕಪ್ ಇರುವುದರಿಂದ ಐಪಿಎಲ್ ಟೂರ್ನಿಯನ್ನು ಮೇ 26ರೊಳಗೆ ಕೊನೆಗೊಳಿಸಲು ನಾವು ಯೋಜನೆಯೊಂದನ್ನು ರೂಪಿಸಿದ್ದು, ಪಂದ್ಯಗಳ ಸ್ಥಳಗಳು ಸಂಪೂರ್ಣವಾಗಿ ವಿಭಿನ್ನವಾಗಿರಲಿವೆ” ಎಂದು ಅರುಣ್ ಧುಮಾಲ್(Arun Dhumal) ಹೇಳಿರುವುದಾಗಿ ಸ್ಪೋರ್ಟ್‌ಸ್ಟಾರ್ ವರದಿ ಮಾಡಿದೆ.
Sound 🔛
— IndianPremierLeague (@IPL) March 8, 2024
It's THAT time of the year 😉 #TATAIPL starts 22nd March onwards 🗓️ pic.twitter.com/018q7jxlcT
ಹೆಚ್ಚಿನ ಡಬಲ್-ಹೆಡರ್ ಪಂದ್ಯ
ಮೊದಲ ಹಂತದ ಪಂದ್ಯಾವಳಿಗಳು ನಡೆದ ಬಳಿಕ ಚುನಾವಣೆಗಾಗಿ ಪಂದ್ಯಗಳನ್ನು ಕೆಲವು ದಿನಗಳ ಕಾಲ ಸ್ಥಗಿತಗೊಳಿಸಲಾಗುತ್ತದೆ. ಇಲ್ಲಿ ನಷ್ಟವಾದ ದಿನಗಳ ಪಂದ್ಯಗಳನ್ನು ಸರಿದೂಗಿಸಲು ನಾವು ಡಬಲ್-ಹೆಡರ್ ಪಂದ್ಯಗಳನ್ನು ಹೆಚ್ಚಿಸಬೇಕಾಗಬಹುದು ಎಂದು ಅರುಣ್ ಧುಮಾಲ್ ಹೇಳಿರುವುದಾಗಿ ವರದಿಯಾಗಿದೆ. ಒಟ್ಟಾರೆ ಈ ವರದಿಯನ್ನು ಗಮನಿಸುವಾಗ ಕ್ರಿಕೆಟ್ ಪ್ರೇಮಿಗಳಿಗೆ ದಿನದಲ್ಲಿ ಎರಡು ಪಂದ್ಯಗಳನ್ನು ನೋಡುವ ಭಾಗ್ಯ ಸಿಗುವ ಸೂಚನೆಯೊಂದು ಲಭಿಸಿದೆ.
ಇದನ್ನೂ ಓದಿ IPL 2024 : ಐಪಿಎಲ್ನಲ್ಲಿ ರೋಹಿತ್ ಶರ್ಮಾ ಆಡುವುದಿಲ್ಲವೇ? ಧರ್ಮಶಾಲಾದಿಂದ ಬಂದಿದೆ ಹೊಸ ಅಪ್ಡೇಟ್
ಮೊದಲ ಹಂತದ ವೇಳಾಪಟ್ಟಿ
ಮಾ.22: ರಾತ್ರಿ 7:30: ಆರ್ಸಿಬಿ vsಚೆನ್ನೈ ಸೂಪರ್ ಕಿಂಗ್ಸ್ -ಚೆನ್ನೈ
ಮಾ.23: ಮಧ್ಯಾಹ್ನ 3:30: ಪಂಜಾಬ್ vsಡೆಲ್ಲಿ – ಮೊಹಾಲಿ
ಮಾ.23: ರಾತ್ರಿ 7:30 : ಕೆಕೆಆರ್ vs ಸನ್ರೈಸರ್ಸ್, – ಕೋಲ್ಕತ್ತಾ
ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್ vs ಲಕ್ನೋ, ಜೈಪುರ್
ಮಾ. 24 ರಾತ್ರಿ 7:30: ಗುಜರಾತ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್
ಮಾ.25 ರಾತ್ರಿ 7:30:ಆರ್ಸಿಬಿ vs ಪಂಜಾಬ್, ಬೆಂಗಳೂರು
ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್ ,ಚೆನ್ನೈ
ಮಾ.27: ರಾತ್ರಿ 7:30: ಸನ್ರೈಸರ್ಸ್vs ಮುಂಬೈ , ಹೈದರಾಬಾದ್
ಮಾ.28: ರಾತ್ರಿ 7:30: ರಾಜಸ್ಥಾನ್ vs ಡೆಲ್ಲಿ, ಜೈಪುರ್
ಮಾ.29: ರಾತ್ರಿ 7:30 ಆರ್ಸಿಬಿ vs ಕೆಕೆಆರ್ ,ಬೆಂಗಳೂರು
ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್ ,ಲಕ್ನೋ
ಮಾ.31 ಮಧ್ಯಾಹ್ನ 3:30: ಗುಜರಾತ್ vs ಸನ್ರೈಸರ್ಸ್ ,ಅಹಮದಬಾದ್
ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ
ಎಪ್ರಿಲ್ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
ಎಪ್ರಿಲ್ 2 ಆರ್ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
ಎಪ್ರಿಲ್ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
ಎಪ್ರಿಲ್ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
ಎಪ್ರಿಲ್ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
ಎಪ್ರಿಲ್ 6 ರಾಜಸ್ಥಾನ್ vs ಆರ್ಸಿಬಿ ಸಂಜೆ 7:30 ಜೈಪುರ
ಎಪ್ರಿಲ್ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
ಎಪ್ರಿಲ್ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ