ಚೆನ್ನೈ: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿ ಆರಂಭವಾಗಲು ಇನ್ನು ಕೇವಲ 3 ದಿನ ಮಾತ್ರ ಬಾಕಿ ಉಳಿದಿದೆ. ಮಾರ್ಚ್ 22ರಂದು ಲೀಗ್‌ನ ಸಾಂಪ್ರದಾಯಿಕ ಬದ್ದ ಎದುರಾಳಿಗಳಾದ ಆರ್‌ಸಿಬಿ(Royal Challengers Bangalore) ಮತ್ತು ಸಿಎಸ್‌ಕೆ(rcb vs csk) ಮುಖಾಮುಖಿಯಾಗುವ ಮೂಲಕ ಟೂರ್ನಿಗೆ ಚಾಲನೆ ಸಿಗಲಿದೆ. ಈ ಪಂದ್ಯಕ್ಕೆ ಚೆನ್ನೈನ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಪಂದ್ಯವನ್ನು ಕಣ್ತುಂಬಿಕೊಳ್ಳಲು ಈಗಾಗಲೇ ಉಭಯ ತಂಡಗಳ ಅಭಿಮಾನಿಗಳು ದುಬಾರಿ ಬೆಲೆ ನೀಡಿ ಟಿಕೆಟ್ ಖರೀದಿಸಿದ್ದಾರೆ. ಎಲ್ಲ ಟಿಕೆಟ್ ಕೂಡ ಸೋಲ್ಡ್ ಔಟ್ ಆಗಿದೆ. ಭಾರತ ತಂಡದ ಅನುಭವಿ ಆಫ್ ಸ್ಪಿನ್ನರ್ ಹಾಗೂ ಸಿಎಸ್‌ಕೆ(Chennai Super Kings) ತಂಡ ಮಾಜಿ ಆಟಗಾರ ರವಿಚಂದ್ರನ್ ಅಶ್ವಿನ್(Ravichandran Ashwin) ಕೂಡ ಈ ಹೈ-ವೋಲ್ಟೇಜ್ ಪಂದ್ಯವನ್ನು ನೋಡಲು ಟಿಕೆಟ್ಗಾಗಿ ಸಹಾಯ ಕೋರಿದ್ದಾರೆ.
ಅಶ್ವಿನ್ ತಮ್ಮ ಟ್ವಿಟ್ಟರ್ ಎಕ್ಸ್ ಖಾತೆಯಲ್ಲಿ ಟಿಕೆಟ್ಗಾಗಿ ಬೇಡಿಕೆ ಇಟ್ಟಿದ್ದಾರೆ. ‘ನನ್ನ ಇಬ್ಬರು ಮಕ್ಕಳು ಆರ್‌ಸಿಬಿ ಮತ್ತು ಸಿಎಸ್‌ಕೆ ನಡುವೆ ತವರಿನಲ್ಲಿ ನಡೆಯುವ 2024ರ ಐಪಿಎಲ್‌ನ ಉದ್ಘಾಟನಾ ಪಂದ್ಯವನ್ನು ನೋಡಲು ಬಯಸಿದ್ದಾರೆ. ಆದರೆ, ನನಗೆ ಟಿಕೆಟ್ ಸಿಕ್ಕಿಲ್ಲ. ನನ್ನ ಮಕ್ಕಳ ಬಯಕೆಯನ್ನು ಈಡೇರಿಸಲು ಟಿಕೆಟ್ಗಳನ್ನು ನೀಡಬಹುದೇ’ ಎಂದು ಅಶ್ವಿನ್ ಸಿಎಸ್‌ಕೆ ತಂಡದ ಸಹಾಯ ಕೋರಿದ್ದಾರೆ. ಅಶ್ವಿನ್ ಅವರು ಚೆನ್ನೈ ತಂಡದ ಪರ 7 ವರ್ಷಗಳ ಕಾಲ ಆಡಿದ್ದಾರೆ. 2008ರಿಂದ 2015ರವರೆಗೆ ಸಿಎಸ್‌ಕೆ ತಂಡವನ್ನು ಪ್ರತಿನಿಧಿಸಿ 70 ವಿಕೆಟ್‌ಗಳನ್ನು ಪಡೆದ ಸಾಧನೆ ಮಾಡಿದ್ದಾರೆ.
Unreal ticket demand for the #CSKvRCB #IPL2024 opener at Chepauk.
— Ashwin 🇮🇳 (@ashwinravi99) March 18, 2024
My kids want to the see opening ceremony and the game.@ChennaiIPL pls help🥳
ಇಂಗ್ಲೆಂಡ್ ವಿರುದ್ಧ ಕೆಲವು ದಿನಗಳ ಹಿಂದಷ್ಟೇ ಮುಕ್ತಾಯ ಕಂಡ ತವರಿನ ಟೆಸ್ಟ್ನಲ್ಲಿ ಅಶ್ವಿನ್ ಅವರು ಅಮೋಘ ಬೌಲಿಂಗ್ ಪ್ರದರ್ಶನ ತೋರಿದ್ದರು. ಜತೆಗೆ ಟೆಸ್ಟ್ನಲ್ಲಿ 500 ವಿಕೆಟ್‌ಗಳನ್ನು ಪೂರ್ತಿಗೊಳಿಸಿದ್ದರು. ಈ ಸಾಧನೆ ಮಾಡಿದ 2ನೇ ಭಾರತೀಯ ಬೌಲರ್ ಎನ್ನುವ ಹಿರಿಮೆಗೂ ಪಾತ್ರರಾಗಿದ್ದರು. ಪ್ರಸಕ್ತ ಐಪಿಎಲ್ನಲ್ಲಿ ಅಶ್ವಿನ್ ರಾಜಸ್ಥಾನ್ ತಂಡದ ಪರ ಆಡುತ್ತಿದ್ದಾರೆ.
ಇದನ್ನೂ ಓದಿ IPL 2024: ಐಪಿಎಲ್ಗೆ ಕನ್ನಡಿಗ ರಾಹುಲ್ ಫಿಟ್; ಆದರೆ…
ಮೊದಲ ಹಂತದ ವೇಳಾಪಟ್ಟಿ
ಮಾ.22: ರಾತ್ರಿ 7:30: ಆರ್‌ಸಿಬಿ vsಚೆನ್ನೈ ಸೂಪರ್ ಕಿಂಗ್ಸ್ -ಚೆನ್ನೈ
ಮಾ.23: ಮಧ್ಯಾಹ್ನ 3:30: ಪಂಜಾಬ್ vsಡೆಲ್ಲಿ – ಮೊಹಾಲಿ
ಮಾ.23: ರಾತ್ರಿ 7:30 : ಕೆಕೆಆರ್ vs ಸನ್ರೈಸರ್ಸ್, – ಕೋಲ್ಕತ್ತಾ
ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್ vs ಲಕ್ನೋ, ಜೈಪುರ್
ಮಾ. 24 ರಾತ್ರಿ 7:30: ಗುಜರಾತ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್
ಮಾ.25 ರಾತ್ರಿ 7:30:ಆರ್‌ಸಿಬಿ vs ಪಂಜಾಬ್, ಬೆಂಗಳೂರು
ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್ ,ಚೆನ್ನೈ
ಮಾ.27: ರಾತ್ರಿ 7:30: ಸನ್ರೈಸರ್ಸ್vs ಮುಂಬೈ , ಹೈದರಾಬಾದ್
ಮಾ.28: ರಾತ್ರಿ 7:30: ರಾಜಸ್ಥಾನ್ vs ಡೆಲ್ಲಿ, ಜೈಪುರ್
ಮಾ.29: ರಾತ್ರಿ 7:30 ಆರ್‌ಸಿಬಿ vs ಕೆಕೆಆರ್ ,ಬೆಂಗಳೂರು
ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್ ,ಲಕ್ನೋ
ಮಾ.31 ಮಧ್ಯಾಹ್ನ 3:30: ಗುಜರಾತ್ vs ಸನ್ರೈಸರ್ಸ್ ,ಅಹಮದಬಾದ್
ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ
ಎಪ್ರಿಲ್ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
ಎಪ್ರಿಲ್ 2 ಆರ್‌ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
ಎಪ್ರಿಲ್ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
ಎಪ್ರಿಲ್ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
ಎಪ್ರಿಲ್ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
ಎಪ್ರಿಲ್ 6 ರಾಜಸ್ಥಾನ್ vs ಆರ್‌ಸಿಬಿ ಸಂಜೆ 7:30 ಜೈಪುರ
ಎಪ್ರಿಲ್ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
ಎಪ್ರಿಲ್ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ