ವಿಶಾಖಪಟ್ಟಣಂ: ಡೆಲ್ಲಿ ಕ್ಯಾಪಿಟಲ್ಸ್(DC) ತಂಡದ ನಾಯಕ ರಿಷಭ್ ಪಂತ್(Rishabh Pant) ಅವರಿಗೆ ಈ ಬಾರಿಯ ಐಪಿಎಲ್ನಲ್ಲಿ(IPL 2024) ಸತತವಾಗಿ 2ನೇ ಬಾರಿ ದಂಡದ ಶಿಕ್ಷೆಗೆ ಒಳಗಾಗಿದ್ದಾರೆ. ಕೆಕೆಆರ್(KKR ) ವಿರುದ್ಧದ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡ ಕಾರಣ ಪಂತ್‌ಗೆ 24 ಲಕ್ಷ ರೂ. ದಂಡ(Pant fined Rs 24 Lakh) ವಿಧಿಸಲಾಗಿದೆ. ಜತೆಗೆ ಪ್ಲೇಯಿಂಗ್ ಇಲೆವೆನ್ನ ಎಲ್ಲ ಆಟಗಾರರಿಗೂ ದಂಡದ ಬರೆ ಬಿದ್ದಿದೆ.
ಪಂದ್ಯದಲ್ಲಿ ನಿಗದಿತ ಸಮಯಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಂಡು ಬೌಲಿಂಗ್ ನಡೆಸಿದ್ದಕ್ಕಾಗಿ ಇದೀಗ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ರಿಷಭ್ ಪಂತ್‌ಗೆ 24 ಲಕ್ಷ ರೂ. ದಂಡ ವಿಧಿಸಲಾಗಿದೆ. ಇದರ ಜತೆಗೆ ಬದಲಿ ಆಟಗಾರ ಸೇರಿದಂತೆ ತಂಡದ ಹನ್ನೊಂದು ಆಟಗಾರರಿಗೆ 6 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಇದು ಪಂದ್ಯ ಶುಲ್ಕದ ಶೇಕಡಾ 25 ರಷ್ಟು ಆಗಿದೆ. ಇನ್ನು ಐಪಿಎಲ್‌ನ ಕೋಡ್ ಆಫ್ ಕಂಡಕ್ಟ್ ಅಪರಾಧವನ್ನು ಪಂತ್ ಒಪ್ಪಿಕೊಂಡಿದ್ದಾರೆ. ಇದನ್ನು ಉಲ್ಲಂಸಿದರೆ, ಪಂದ್ಯದ ರೆಫ್ರಿ ನಿರ್ಧಾರವು ಅಂತಿಮ ಮತ್ತು ಅದಕ್ಕೆ ಆಟಗಾರರು ಬದ್ಧರಾಗಿರಬೇಕಾಗಿದೆ ಎಂದು ಐಪಿಎಲ್ ಹೇಳಿಕೆ ತಿಳಿಸಿದೆ. ಡೆಲ್ಲಿ ತಂಡ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ಪಂತ್‌ಗೆ ದಂಡ ವಿಧಿಸಲಾಗಿದೆ ಎಂದು ಬಿಸಿಸಿಐ ತನ್ನ ಅಧಿಕೃತ ಹೇಳಿಕೆಯಲ್ಲಿ ಪ್ರಕಟಿಸಿದೆ.
Rishabh Pant fined 24 Lakhs for maintaining slow overrate against KKR.
— Mufaddal Vohra (@mufaddal_vohra) April 4, 2024
– It's the 2nd offense of DC…!!! pic.twitter.com/wQuagE4F1w
ಕಳೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿಯೂ ಪಂತ್‌ಗೆ ನಿಧಾನಗತಿಯ ಓವರ್ ರೇಟ್ಗಾಗಿ 12 ಲಕ್ಷ ದಂಡ ವಿಧಿಸಲಾಗಿತ್ತು. ಇದೀಗ 2ನೇ ಬಾರಿಯ ತಪ್ಪಿಗಾಗಿ 24 ಲಕ್ಷ ರೂಪಾಯಿ ದಂಡ ವಿಧಿಸಲಾಗಿದೆ. ಸ್ಲೋ ಓವರ್ ರೇಟ್ ನಿಯಮದ ಪ್ರಕಾರ ಮೊದಲ ತಪ್ಪಿಗೆ ನಾಯಕನನ್ನು ದೋಷಿಯನ್ನಾಗಿ ಮಾಡಲಾಗುತ್ತದೆ. ಮೊದಲ ಬಾರಿಯ ತಪ್ಪಿಗೆ 12 ಲಕ್ಷ ರೂ. ದಂಡ ಹಾಕಲಾಗುತ್ತದೆ. ಇದು ಪುನರಾವರ್ತನೆಯಾದಲ್ಲಿ 24 ಲಕ್ಷ ರೂ. ದಂಡ ನಿಗದಿ ಮಾಡಲಾಗಿದೆ. ಅಲ್ಲದೆ ತಂಡದ ಇತರೆ ಆಟಗಾರರು ಪಂದ್ಯದ ಶುಲ್ಕದ ಶೇ.25 ರಷ್ಟು ಮೊತ್ತವನ್ನು ದಂಡವಾಗಿ ನೀಡಬೇಕು. ಒಂದೊಮ್ಮೆ ಮೂರನೇ ಬಾರಿ ಮತ್ತೆ ಇದೇ ತಪ್ಪು ಮರುಕಳಿಸಿದರೆ ಆಗ ನಾಯಕ ಒಂದು ಪಂದ್ಯದ ನಿಷೇಧಕ್ಕೆ ಗುರಿಯಾಗಲಿದ್ದಾರೆ.
ಇದನ್ನೂ ಓದಿ IPL 2024: ಇಶಾಂತ್ ಶರ್ಮ ಡೆಡ್ಲಿ ಯಾರ್ಕರ್ಗೆ ರಸೆಲ್ ಕ್ಲೀನ್ ಬೌಲ್ಡ್; ವಿಡಿಯೊ ವೈರಲ್
Rishabh Pant's 55 off 25 vs KKR yesterday..he is well and truly back. pic.twitter.com/ENegt5li1y
— Sourabh (@1handed6) April 4, 2024
ಪಂತ್ ಈಗಾಗಲೇ 2 ಬಾರಿ ತಪ್ಪು ಮಾಡಿದ್ದಾರೆ. ಇದೀಗ ಮುಂದಿನ ಪಂದ್ಯದಲ್ಲಿಯೂ ಇದೇ ತಪ್ಪು ನಡೆದರೆ. ಪಂತ್‌ಗೆ ಒಂದು ಪಂದ್ಯದ ನಿಷೇಧ ಶಿಕ್ಷೆ ಸಿಗಲಿದೆ. ಆದ್ದರಿಂದ ಡೆಲ್ಲಿ ಮುಂದಿನ ಪಂದ್ಯದಲ್ಲಿ ಎಚ್ಚರಿಕೆ ಆಟವಾಡುವುದು ಬಹುಮುಖ್ಯವಾಗಿದೆ. ಡೆಲ್ಲಿ ಮುಂದಿನ ಪಂದ್ಯವನ್ನು ಏಪ್ರಿಲ್ 7ರಂದು ಮುಂಬೈ ಇಂಡಿಯನ್ಸ್ ವಿರುದ್ಧ ಆಡಲಿದೆ.
ಆಕ್ರಮಣಕಾರಿ ಶೈಲಿಯಲ್ಲೇ ಬ್ಯಾಟಿಂಗ್ ನಡೆಸಿದ ಪಂತ್ ಕೇವಲ 23 ಎಸೆತಗಳಿಂದ ಅರ್ಧಶತಕ ಪೂರ್ತಿಗೊಳಿಸಿದರು. ಅದರಲ್ಲೂ ವೆಂಕಟೇಶ್ ಅಯ್ಯರ್ ಅವರಿಗೆ ಒಂದೇ ಓವರ್ನಲ್ಲಿ ಎಲ್ಲ ಎಸೆತಗಳನ್ನು ಸಿಕ್ಸರ್ ಮತ್ತು ಬೌಂಡರಿಗೆ ಬಡಿದಟ್ಟಿ 28 ರನ್ ಬಾರಿಸಿದರು. ಇದರಲ್ಲೊಂದು ಸಿಕ್ಸರ್ ‘ನೋ ಲುಕ್ ಸಿಕ್ಸ್'(ಚೆಂಡನ್ನು ನೋಡದೆಯೇ ಸಿಕ್ಸರ್ ಬಾರಿಸುವುದು) ಆಗಿತ್ತು.