Site icon Vistara News

IPL 2024: ಇಂಪ್ಯಾಕ್ಟ್ ಪ್ಲೇಯರ್ ನಿಯಮದ ಬಗ್ಗೆ ಆಕ್ಷೇಪ ವ್ಯಕ್ತಪಡಿಸಿದ ರೋಹಿತ್​ ಶರ್ಮ

IPL 2024

ಮುಂಬಯಿ: ಐಪಿಎಲ್​ನಲ್ಲಿ(IPL 2024) ಕಳೆದ ವರ್ಷ ಜಾರಿಗೆ ತಂದ ವಿನೂತನ ಇಂಪ್ಯಾಕ್ಟ್ ಪ್ಲೇಯರ್(Impact Player) ನಿಯಮದ ಬಗ್ಗೆ ಟೀಮ್​ ಇಂಡಿಯಾದ ನಾಯಕ, ಮುಂಬೈ ಇಂಡಿಯನ್ಸ್​ನ ಆಟಗಾರ ರೋಹಿತ್​ ಶರ್ಮ(Rohit Sharma) ಶರ್ಮ ​ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಈ ನಿಯಮದಿಂದ ಭಾರತೀಯ ಕ್ರಿಕೆಟ್‌ಗೆ ದೊಡ್ಡ ನಷ್ಟವಾಗುತ್ತಿದೆ ಎಂದು ಹೇಳಿದ್ದಾರೆ.

ಯೂಟ್ಯೂಬ್ ಸಂದರ್ಶನವೊಂದರಲ್ಲಿ ಮಾತನಾಡಿದ ರೋಹಿತ್​, ‘ಕ್ರಿಕೆಟ್ 11 ಜನ ಆಡುವ ಆಟ, 12 ಜನರಿಂದಲ್ಲ, ಇಂಪ್ಯಾಕ್ಟ್ ಆಟಗಾರ ನಿಯಮದಿಂದಾಗಿ ನೈಜ ಕ್ರಿಕೆಟ್​ಗೆ ಹಾನಿಯಾಗಿದೆ. ಇದು ಮನರಂಜನೆ ಒದಗಿಸಬಹುದೇ ಹೊರತು ಕ್ರಿಕೆಟ್​ ಬೆಳವಣಿಗೆಗೆ ಅಪಾಯಕಾರಿ” ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ಇಂಪ್ಯಾಕ್ಟ್ ನಿಯಮದಿಂದ ಓರ್ವ ಆಟಗಾರನಿಗೆ ತನ್ನ ಸಾಮರ್ಥ್ಯವನ್ನು ತೋರ್ಪಡಿಸುವ ಅವಕಾಶ ಸಿಗುತಿಲ್ಲ. ಉದಾಹರಣೆಗೆ ಶಿವಂ ದುಬೆ, ವಾಷಿಂಗ್ಟನ್ ಸುಂದರ್ ಸೇರಿದಂತೆ ಅನೇಕ ಆಲ್ರೌಂಡರ್‌ಗಳಿಗೆ ಬ್ಯಾಟಿಂಗ್​ ಸಿಕ್ಕರೆ ಬೌಲಿಂಗ್​ ಸಿಗುತ್ತಿಲ್ಲ. ಬೌಲಿಂಗ್​ ಸಿಕ್ಕರೆ ಬ್ಯಾಟಿಂಗ್​ ಸಿಗುತ್ತಿಲ್ಲ ಎಂದು ರೋಹಿತ್ ಬೇಸರ ವ್ಯಕ್ತಪಡಿಸಿದ್ದಾರೆ.

ಇದನ್ನೂ ಓದಿ IPL 2024: ಕೆಕೆಆರ್​ ವಿರುದ್ಧ ಹಸಿರು ಜೆರ್ಸಿಯಲ್ಲಿ ಆಡಲಿದೆ ಆರ್​ಸಿಬಿ; ಈ ಬಾರಿಯ ಉದ್ದೇಶವೇನು?

ಇಂಪ್ಯಾಕ್ಟ್ ನಿಯಮ ಎಂದರೇನು?

ಇಂಪ್ಯಾಕ್ಟ್ ಪ್ಲೇಯರ್ ನಿಯಮವು ಆಟದ ಸಮಯದಲ್ಲಿ ಯುದ್ಧತಂತ್ರದ ಬದಲಾವಣೆಯನ್ನು ಮಾಡಲು ತಂಡಕ್ಕೆ ಅವಕಾಶವನ್ನು ನೀಡುತ್ತದೆ. ಟಾಸ್ ಸಮಯದಲ್ಲಿ, ನಾಯಕನು ಆರಂಭಿಕ 11 ಆಟಗಾರರ ಜೊತೆಗೆ ನಾಲ್ಕು ಬದಲಿ ಆಟಗಾರರನ್ನು ಉಲ್ಲೇಖಿಸಬೆಕು. ಈ ಬದಲಿ ಆಟಗಾರನು (ಇಂಪ್ಯಾಕ್ಟ್ ಪ್ಲೇಯರ್) ಇನ್ನಿಂಗ್ಸ್‌ ನ 14 ನೇ ಓವರ್‌ ನ ಮುಕ್ತಾಯದ ಮೊದಲು ಯಾವುದೇ ನಿರ್ದಿಷ್ಟ ಹಂತದಲ್ಲಿ ಆರಂಭಿಕ 11 ನ ಸದಸ್ಯರನ್ನು ಬದಲಾಯಿಸಬಹುದು. ಆಟಗಾರನು ಬ್ಯಾಟಿಂಗ್ ಮಾಡಲು ಹಾಗೂ ತನ್ನ ಸಂಪೂರ್ಣ ಕೋಟಾದ (ನಾಲ್ಕು) ಓವರ್‌ಗಳನ್ನು ಪೂರ್ಣಗೊಳಿಸಲು ಅವಕಾಶವಿದೆ.

ಮತ್ತೊಂದು ವಿಶೇಷವೆಂದರೆ ಇಂಪ್ಯಾಕ್ಟ್ ಪ್ಲೇಯರ್ ಈಗಾಗಲೇ ಔಟ್ ಆಗಿರುವ ಆಟಗಾರನ ಬದಲಿಯಾಗಿ ಬಂದು ಮತ್ತೊಮ್ಮೆ ಬ್ಯಾಟಿಂಗ್ ಮಾಡಬಹುದು. ಆದರೆ ತಂಡದಲ್ಲಿ ಕೇವಲ 11 ಬ್ಯಾಟರ್‌ ಗಳಿಗೆ ಬ್ಯಾಟಿಂಗ್ ಗೆ ಅವಕಾಶವಿದೆ. ಮತ್ತೊಂದೆಡೆ, ಈಗಾಗಲೇ ಕೆಲವು ಓವರ್‌ ಗಳನ್ನು ಬೌಲ್ ಮಾಡಿದ ಬೌಲರ್ ಬದಲಿಗೆ ಬಂದು ನಾಲ್ಕು ಓವರ್‌ ಗಳ ಪೂರ್ಣ ಕೋಟಾ ಬೌಲ್ ಮಾಡಬಹುದು.

ಡಕ್​ವರ್ತ್​ ನಿಯದಲ್ಲಿ ಇದು ಅನ್ವಯವಾಗುದಿಲ್ಲ


ಇಂಪ್ಯಾಕ್ಟ್ ಪ್ಲೇಯರ್ ಸೇರ್ಪಡೆಯಿಂದ ಆಟಕ್ಕೆ ಹೊಸತನ ಬಂದಂತಾದರೂ ಈ ನಿಯಮವು ಕೆಲವು ಮಿತಿಗಳನ್ನು ಹೊಂದಿದೆ. 10 ಓವರ್‌ ಗಳಿಗಿಂತ ಕಡಿಮೆಯಿರುವ ಆಟದಲ್ಲಿ (ಮಳೆ ಸೇರಿದಂತೆ ಹಲವು ಕಾರಣದಿಂದ) ಈ ನಿಯಮ ಅನ್ವಯಿಸುವುದಿಲ್ಲ. ಅಲ್ಲದೆ, ಪ್ರತಿ ಪಂದ್ಯದಲ್ಲೂ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸಲೇ ಬೇಕು ಎಂಬ ಒತ್ತಾಯವಿಲ್ಲ. ಆದರೆ ಇಂಪ್ಯಾಕ್ಟ್ ಪ್ಲೇಯರ್ ನನ್ನು ಬಳಸುವ ಮೊದಲು ನಾಯಕ ಅಥವಾ ಮುಖ್ಯ ಕೋಚ್ ಅಥವಾ ಮ್ಯಾನೇಜರ್ ಅದನ್ನು ಆನ್-ಫೀಲ್ಡ್ ಅಂಪೈರ್‌ ಗೆ ತಿಳಿಸಬೇಕು.

ಓವರ್​ ಮುಕ್ತಾಯದ ಬಳಿಕವೇ ಜಾರಿ

ಇಂಪ್ಯಾಕ್ಟ್ ಪ್ಲೇಯರ್ ಓವರ್‌ ನಡುವಿನಲ್ಲಿ ಬರುವಂತಿಲ್ಲ. ಓವರ್ ಮುಗಿದ ಬಳಿಕವಷ್ಟೇ ಆಟಕ್ಕೆ ಬರಬಹುದು. ಆದಾಗ್ಯೂ, ಕೆಲವು ವಿನಾಯಿತಿಗಳಿದ್ದು, ಬ್ಯಾಟಿಂಗ್ ತಂಡವು ವಿಕೆಟ್ ಪತನದ ಸಮಯದಲ್ಲಿ ಅದರ ಇಂಪ್ಯಾಕ್ಟ್ ಪ್ಲೇಯರ್ ಕಾರ್ಡ್ ಅನ್ನು ಓವರ್ ನಡುವೆ ಬಳಸಿಬಹುದು, ಫೀಲ್ಡಿಂಗ್ ತಂಡದಲ್ಲಿ ಗಾಯಗೊಂಡ ಫೀಲ್ಡರ್ ಬದಲು ಓವರ್ ನ ನಡುವೆ ಇಂಪ್ಯಾಕ್ಟ್ ಪ್ಲೇಯರ್‌ ನನ್ನು ಆಟಕ್ಕೆ ಕರೆಯಬಹುದು

Exit mobile version