Site icon Vistara News

IPL 2024: ಕೊಹ್ಲಿಯನ್ನು ಹಿಂದಿಕ್ಕಿ ಆರೆಂಜ್​ ಕ್ಯಾಪ್​ ಪಡೆದ ಗಾಯಕ್ವಾಡ್​; ಪರ್ಪಲ್​ ಕ್ಯಾಪ್​ ಹೋಲ್ಡರ್​ ಯಾರು?

IPL 2024

ಬೆಂಗಳೂರು: ಪ್ರಸಕ್ತ ಸಾಗುತ್ತಿರುವ 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯ ಲೀಗ್​ ಹಂತದ ಪಂದ್ಯಗಳು ಮುಕ್ತಾಯದ ಹಂತಕ್ಕೆ ಬಂದು ನಿಂತಿದೆ. ಇನ್ನು ಬೆರಳೆಣಿಕೆಯ ಪಂದ್ಯಗಳು ಮಾತ್ರ ಬಾಕಿ ಉಳಿದಿವೆ. ಎಲ್ಲ ತಂಡಗಳು ಪ್ಲೇ ಆಫ್​ ಪ್ರವೇಶಿಸಲು ಹರಸಾಹಸ ಪಡುತ್ತಿವೆ. ಜತೆಗೆ ಕೆಲವು ಆಟಗಾರರ ಮಧ್ಯೆ ಆರೆಂಜ್​ ಕ್ಯಾಚ್(Orange Cap)​ ಮತ್ತು ಪರ್ಪಲ್​ ಕ್ಯಾಪ್​ಗಾಗಿ(purple cap)​ ತೀವ್ರ ಪೈಪೋಟಿ ಏರ್ಪಟ್ಟಿದೆ.

ಈ ಆವೃತ್ತಿಯಲ್ಲಿ 48 ಪಂದ್ಯದ ಮುಕ್ತಾಯದ ವರೆಗೆ ರನ್​ಗಳಿಕೆಯಲ್ಲಿ ಅಗ್ರಸ್ಥಾನ ಪಡೆದು ಆರೆಂಜ್​ ಕ್ಯಾಪ್​ ಧರಿಸಿದ್ದ ವಿರಾಟ್​ ಕೊಹ್ಲಿ(500 ರನ್​​)ಯನ್ನು ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ನಾಯಕ ಋತುರಾಜ್​ ಗಾಯಕ್ವಾಡ್(509 ರನ್​)​ ಹಿಂದಿಕ್ಕಿದ್ದಾರೆ. ನಿನ್ನೆ(ಬುಧವಾರ) ನಡೆದ ಪಂಜಾಬ್​ ಕಿಂಗ್ಸ್​ ಎದುರಿನ ಪಂದ್ಯದಲ್ಲಿ 62 ರನ್​ ಬಾರಿಸುವ ಮೂಲಕ ಗಾಯಕ್ವಾಡ್(Ruturaj Gaikwad)​​ ಈ ಸಾಧನೆ ಮಾಡಿದರು. ಸದ್ಯ ಉಭಯ ಆಟಗಾರರ ಮಧ್ಯೆ ಆರೆಂಜ್​ ಕ್ಯಾಪ್​ಗಾಗಿ ತೀವ್ರ ಪೈಪೋಟಿ ಏರ್ಪಟ್ಟಿದೆ. ಟೂರ್ನಿಯ ಅಂತ್ಯದಲ್ಲಿ ಯಾರು ಅತ್ಯಧಿಕ ರನ್​ ಗಳಿಸಿರುತ್ತಾರೋ ಅವರಿಗೆ ಸರಣಿ ಶ್ರೇಷ್ಠ ಪ್ರಶಸ್ತಿಯಾಗಿ ಟಾಟಾ ಕಂಪೆನಿಯ ಎಲೆಕ್ಟ್ರಿಕ್​ ಕಾರ್​ ಸಿಗಲಿದೆ.

ಆರೆಂಜ್ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬ್ಯಾಟರ್​ಗಳು


ಋತುರಾಜ್​ ಗಾಯಕ್ವಾಡ್​-509 ರನ್​(10 ಇನಿಂಗ್ಸ್​)

ವಿರಾಟ್​ ಕೊಹ್ಕಿ-500 ರನ್​(10 ಇನಿಂಗ್ಸ್​)

ಸಾಯಿ ಸುದರ್ಶನ್​- 418 ರನ್​( 10 ಇನಿಂಗ್ಸ್​)

ಕೆ.ಎಲ್​ ರಾಹುಲ್​-406 ರನ್​( 10 ಇನಿಂಗ್ಸ್​)

ರಿಷಭ್​ ಪಂತ್​-398 ರನ್​(11 ಇನಿಂಗ್ಸ್​)

ಇದನ್ನೂ ಓದಿ Virat kohli : ಕಾಮೆಂಟ್ರಿ ಬಾಕ್ಸ್​​ನಲ್ಲಿ ಕುಳಿತು ವಿಮರ್ಶೆ ಮಾಡುವುದು ಸುಲಭ; ಕೊಹ್ಲಿ ತಿರುಗೇಟು ಕೊಟ್ಟಿದ್ದು ಯಾರಿಗೆ?

ಪರ್ಪಲ್​ ಕ್ಯಾಕ್​ಗೆ ಮೂರು ಮಂದಿಯ ಮಧ್ಯೆ ಫೈಟ್​


ಅತ್ಯಧಿಕ ವಿಕೆಟ್​ ಪಡೆದ ಬೌಲರ್​ಗೆ ನೀಡುವ ಪರ್ಪಲ್​ ಕ್ಯಾಪ್​ಗಾಗಿ ಮೂರು ಬೌಲರ್​ಗಳ ಮಧ್ಯೆ ಭಾರೀ ಜಿದ್ದಾಜಿದ್ದಿನ ಸ್ಪರ್ಧೆ ಏರ್ಪಟ್ಟಿದೆ. ಜಸ್​ಪ್ರೀತ್​ ಬುಮ್ರಾ, ಮುಸ್ತಫಿಜುರ್​ ರೆಹಮಾನ್​, ಹರ್ಷಲ್​ ಪಟೇಲ್​ ತಲಾ 14 ವಿಕೆಟ್​ ಕಿತ್ತು ಕ್ರಮವಾಗಿ ಮೊದಲ ಮೂರು ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಉತ್ತಮ ಬೌಲಿಂಗ್​ ಇಕಾನಮಿ ಹೊಂದಿರುವ ಕಾರಣ ಸದ್ಯ ಈ ಕ್ಯಾಪ್​ ಬುಮ್ರಾ ಬಳಿ ಇದೆ. ಇನ್ನುಳಿದಂತೆ ಆರು ಮಂದಿ ಬೌಲರ್​ಗಳು ತಲಾ 13 ವಿಕೆಟ್​ ಕಿತ್ತಿದ್ದಾರೆ. ಇವರಿಗೂ ಕೂಡ ಮುಂದಿನ ಪಂದ್ಯಗಳಲ್ಲಿ ಹೆಚ್ಚಿನ ವಿಕೆಟ್​ ಕಿತ್ತರೆ ಪರ್ಪಲ್​ ಕ್ಯಾಪ್​ ಪಡೆಯುವ ಅವಕಾಶವಿದೆ.

ಪರ್ಪಲ್​ ಕ್ಯಾಪ್​​ ರೇಸ್​ನಲ್ಲಿರುವ ಟಾಪ್​ 5 ಬೌಲರ್​ಗಳು


ಜಸ್​ಪ್ರೀತ್​ ಬುಮ್ರಾ-14 ವಿಕೆಟ್​(10 ಪಂದ್ಯ)

ಮುಸ್ತಫಿಜುರ್​ ರೆಹಮಾನ್​-14 ವಿಕೆಟ್​(9 ಪಂದ್ಯ​)

ಹರ್ಷಲ್​ ಪಟೇಲ್​-14 ವಿಕೆಟ್​(10 ಪಂದ್ಯ​)

ಮತೀಶ ಪತಿರಾಣ-13 ವಿಕೆಟ್​(6 ಪಂದ್ಯ)

ಟಿ ನಟರಾಜನ್​-13 ವಿಕೆಟ್​(7 ಪಂದ್ಯ)

Exit mobile version