ಮುಂಬಯಿ: ಟೀಮ್ ಇಂಡಿಯಾದ ಮಧ್ಯಮ ಕ್ರಮಾಂಕದ ಆಟಗಾರ, ಐಪಿಎಲ್‌ನಲ್ಲಿ(IPL 2024) ಕೆಕೆಆರ್(KKR) ತಂಡದ ನಾಯಕನಾಗಿರುವ ಶ್ರೇಯಸ್ ಅಯ್ಯರ್(Shreyas Iyer) ಅವರು ತಮ್ಮ ಮೊದಲ ಕ್ರಶ್ ಬಗ್ಗೆ ಮುಕ್ತವಾಗಿ ಮಾತನಾಡಿದ್ದಾರೆ. ಅಲ್ಲದೆ ಆಕೆಯ ಮೆಸೇಜ್ಗಾಗಿ ಕಾದು ಕುಳಿತಿದ್ದ ವಿಚಾರವನ್ನು ಕೂಡ ಬಹಿರಂಗಪಡಿಸಿದ್ದಾರೆ.
ಕಪಿಲ್ ಶರ್ಮ(Kapil Sharma) ಅವರ ಕಾರ್ಯಕ್ರಮದಲ್ಲಿ ಮಾತನಾಡುವ ವೇಳೆ ಶ್ರೇಯಸ್ ಅಯ್ಯರ್ ಅವರು ಈ ವಿಚಾರವನ್ನು ಹೇಳಿದ್ದದಾರೆ. ಕಪಿಲ್ ಶರ್ಮ ಅವರು ಅಯ್ಯರ್ ಬಳಿಕ ನೀವು ಬೌಂಡರಿ ಬಾರಿಸುವಾಗ ಕ್ಯಾಮೆರಾಮೆನ್ಗಳು ಗ್ಯಾಲರಿಯಲ್ಲಿದ್ದ ಸುಂದರ ಹುಡುಗಿಯರನ್ನು ತೋರಿಸುತ್ತಾರೆ ಈ ವೇಳೆ ನಿಮ್ಮಗೆ ಏನನಿಸುತ್ತದೆ ಎಂದು ಕೇಳಿದರು. ಇದಕ್ಕೆ ಉತ್ತರಿಸಿದ ಅಯ್ಯರ್, ಐಪಿಎಲ್‌ನಲ್ಲಿ ಆಡಿದ ಮೊದಲ ವರ್ಷ ನಾನು ತುಂಬಾ ಸುಂದರವಾದ ಹುಡುಗಿಯೊಬ್ಬಳು ಸ್ಟ್ಯಾಂಡ್‌ನಲ್ಲಿ ಕುಳಿತಿರುವುದನ್ನು ಗಮನಿಸಿದೆ ಮತ್ತು ನಾನು ಅವಳಿಗೆ ಹಾಯ್ ಎಂದು ಸನ್ನೆ ಮಾಡಿದೆ. ಇದು ಹಲವು ವರ್ಷಗಳ ಹಿಂದೆ ಸಂಭವಿಸಿದ ಘಟನೆ. ಆ ಸಮಯದಲ್ಲಿ ಫೇಸ್‌ಬುಕ್ ತುಂಬಾ ಜನಪ್ರಿಯವಾಗಿತ್ತು. ನಾನು ಆಕೆಯಿಂದ ಸಂದೇಶಗಳು ಬರಬಹುದೆಂದು ಭಾರೀ ನಿರೀಕ್ಷೆಯಲ್ಲಿದೆ. ಮತ್ತು ಪದೇಪದೆ ನನ್ನ ಫೇಸ್‌ಬುಕ್ ಪರಿಶೀಲಿಸುತ್ತಿದ್ದೆ. ಆದರೆ ಆಕೆಯಿಂದ ಮೆಸೇಜ್ ಬರಲೇ ಇಲ್ಲ” ಎಂದು ಹೇಳುವ ಮೂಲಕ ಅವರ ಮೊದಲ ಕ್ರಶ್ ಬಗ್ಗೆ ಹೇಳಿದರು.
👀WATCH : The MAGICIAN Shreyas Iyer sweeping hearts with his magic trick♥️pic.twitter.com/G5h57g3ri5
— KKR Vibe (@KnightsVibe) April 7, 2024
ಇತ್ತೀಚೆಗೆ ಅಯ್ಯರ್ ಅವರು ಸಂದರ್ಶನವೊಂದರಲ್ಲಿ ಮಾತನಾಡುವ ವೇಳೆ ಐಪಿಎಲ್ ದುಡ್ಡು ಸಿಗೋ ಮೊದಲು ಹೆಣ್ಣು ಮಕ್ಕಳು ಕ್ಯಾರೇ ಮಾಡುತ್ತಿರಲಿಲ್ಲ ಎಂದು ಹೇಳಿದ್ದರು. 2015 ರ ಇಂಡಿಯನ್ ಪ್ರೀಮಿಯರ್ ಲೀಗ್ (ಐಪಿಎಲ್) ಹರಾಜಿನಲ್ಲಿ ಅದ್ಭುತ ಪ್ರದರ್ಶನ ನೀಡಿದ ನಂತರ ಮುಂಬೈನ ಕ್ರಿಕೆಟ್ ಪ್ರತಿಭೆ ಶ್ರೇಯಸ್ ಅಯ್ಯರ್ ಖ್ಯಾತಿ ಮತ್ತು ಅದೃಷ್ಟವನ್ನು ಜತೆಗೆ ಕಂಡುಕೊಂಡಿದ್ದರು. ಡೆಲ್ಲಿ ಡೇರ್ ಡೆವಿಲ್ಸ್ 2.6 ಕೋಟಿ ರೂ.ಗೆ ಖರೀದಿಸಿದ ಯುವ ಬ್ಯಾಟರ್ ಜನಪ್ರಿಯಗೊಂಡಿದ್ದರು. ಈ ವೇಳೆ ತಮ್ಮ ಸುತ್ತಲಿನ ಜನರು ಹೇಗೆ ವರ್ತನೆ ಬದಲಿಸಿಕೊಂಡರು ಎಂಬುದನ್ನು ಶ್ರೇಯಸ್ ವಿವರಿಸಿದ್ದಾರೆ. ವಿಶೇಷವಾಗಿ ಪರಿಚಿತ ಹುಡುಗಿಯರು ಹೇಗೆ ನಡೆದುಕೊಂಡರು ಎಂಬದನ್ನು ಹೇಳಿಕೊಂಡಿದ್ದರು.
ಇದನ್ನೂ ಓದಿ IPL 2024: ಕ್ಯಾಚ್ಗಳ ಶತಕ ಪೂರ್ತಿಗೊಳಿಸಿದ ಜಡೇಜಾ; ಈ ಸಾಧಕರ ಪಟ್ಟಿಯಲ್ಲಿ ಅಗ್ರಸ್ಥಾನ ಯಾರಿಗೆ?
ಓಪನ್ ಹೌಸ್ ವಿತ್ ರೆನಿಲ್” ಟಾಕ್ ಶೋನ ಸೀಸನ್ 1 ಫಿನಾಲೆಯಲ್ಲಿ ಮಾತನಾಡಿದ ಅಯ್ಯರ್, ಸಂಬಂಧಗಳ ಮೇಲೆ ಹಣದ ಪ್ರಭಾವವನ್ನು ಬಹಿರಂಗಪಡಿಸಿದರು. ಐಪಿಎಲ್ ಯಶಸ್ಸಿಗೆ ಮೊದಲು ಪರಿಚಿತ ಯುವತಿಯೊಬ್ಬಳು ನನ್ನ ಜತೆ ಮಾತೇ ಆಡುತ್ತಿರಲಿಲ್ಲ. ಆದರೆ ಹರಾಜಿನ ನಂತರ ನನ್ನೊಂದಿಗೆ ಅತಿಯಾದ ಸ್ನೇಹ ಬೆಳೆಸಿಕೊಳ್ಳಲು ಯತ್ನಿಸಿದ್ದಳು ಎಂದು ಅವರು ನೆನಪಿಸಿಕೊಂಡರು. ದುಡ್ಡು ಸಿಗುವ ಮೊದಲು ಅವರು ಕ್ಯಾರೇ ಮಾಡುತ್ತಿರಲಿಲ್ಲ ಎಂಬುದಾಗಿ ಹೇಳಿಕೊಂಡಿದ್ದಾರೆ. ಹೆಣ್ಣು ಮಕ್ಕಳು ತಮ್ಮ ಪರಿಚಯಕ್ಕಿಂತ ಹೆಚ್ಚಾಗಿ ನನ್ನ ಸಂಪತ್ತಿಗೆ ಆಕರ್ಷಿತಗೊಂಡರು ಎಂದೂ ನುಡಿದಿದ್ದರು.
ಐಪಿಎಲ್ಗೆ ಮುನ್ನ ನಾನು ಮೆಸೇಜ್ ಕಳುಹಿಸುತ್ತಿದ್ದ ಹುಡುಗಿಯರು ಉತ್ತರಿಸುತ್ತಲೇ ಇರಲಿಲ್ಲ. ಐಪಿಎಲ್ ನಂತರ, ಅದೇ ಹುಡುಗಿಯರು ಪ್ರತಿದಿನ ನನಗೆ ಸಂದೇಶ ಕಳುಹಿಸಲು ಪ್ರಾರಂಭಿಸಿದರು. ನಂತರ ನಾನು ಅವರೊಂದಿಗೆ ಮಾತನಾಡುವುದನ್ನು ನಿಲ್ಲಿಸಿದೆ ಎಂದು ಅಯ್ಯರ್ ಹೇಳಿದ್ದರು.