ಮುಂಬಯಿ: ಚುಟುಕು ಕ್ರಿಕೆಟ್ನ ಮಹಾಸಮರ ಇಂಡಿಯನ್ ಪ್ರೀಮಿಯರ್ ಲೀಗ್‌ನ (IPL 2024) 17ನೇ ಆವೃತ್ತಿಗೆ ನಾಳೆ(ಶುಕ್ರವಾರ) ಅಧಿಕೃತ ಚಾಲನೆ ಸಿಗಲಿದೆ. 10 ತಂಡಗಳು ಪ್ರಶಸ್ತಿಗಾಗಿ ಕಾದಾಟ ನಡೆಸಲಿದೆ. ಒಟ್ಟು 74 ಪಂದ್ಯಗಳನ್ನು ಕಣ್ತುಂಬಿಕೊಳ್ಳಲು ಕ್ರಿಕೆಟ್ ಪ್ರೇಮಿಗಳು ಕಾದು ಕುಳಿತಿದ್ದಾರೆ. ಲೋಕಸಭಾ ಸಾರ್ವತ್ರಿಕ ಚುನಾವಣೆಯ(2024 General Elections) ಕಾರಣದಿಂದ ಬಿಸಿಸಿಐ(BCCI ) ಮೊದಲಾರ್ಧದ ಪಂದ್ಯಗಳ ವೇಳಾಪಟ್ಟಿಯನ್ನು ಮಾತ್ರ ಘೋಷಿಸಿದೆ. ಏ. 7 ರಂದು ಲಕ್ನೋ ಸೂಪರ್ ಜೈಂಟ್ಸ್ ಹಾಗೂ ಗುಜರಾತ್ ಟೈಟಾನ್ಸ್ ನಡುವೆ ಮೊದಲಾರ್ಧದ ಕೊನೆಯ ಪಂದ್ಯ ನಡೆಯಲಿದೆ. ಒಟ್ಟು 21 ಪಂದ್ಯಗಳ ವೇಳಾಪಟ್ಟಿ ಹೀಗಿದೆ.
ಟೂರ್ನಿಯ ಉದ್ಘಾಟನ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್ ಮತ್ತು ಆರ್ಸಿಬಿ ಮುಖಾಮುಖಿಯಾಗಲಿವೆ. ಈ ಪಂದ್ಯಕ್ಕೆ ಎಂ.ಎ. ಚಿದಂಬರಂ ಸ್ಟೇಡಿಯಂ ಅಣಿಯಾಗಿದೆ. ಟೂರ್ನಿಯ ಉದ್ಘಾಟನ ಸಮಾರಂಭದಲ್ಲಿ(IPL 2024 opening ceremony) ಎ.ಆರ್ ರೆಹಮಾನ್(AR Rahman), ಸೋನು ನಿಗಮ್(Sonu Nigam), ಟೈಗರ್ ಶ್ರಾಫ್(Tiger Shroff), ಅಕ್ಷಯ್ ಕುಮಾರ್(Akshay Kumar) ಪ್ರದರ್ಶನ ನೀಡಲಿದ್ದಾರೆ. ಸಂಜೆ 6.30ಕ್ಕೆ ಕಾರ್ಯಕ್ರಮ ಆರಂಭಗೊಳ್ಳಲಿದೆ.
The stage is set, the lights are bright, and the stars are ready to shine at the #TATAIPL 2024 Opening Ceremony! 🎉🥳
— IndianPremierLeague (@IPL) March 20, 2024
Get ready for an unforgettable fusion of cricket and entertainment ft. a stellar lineup! ✨
🗓22nd March
⏰6:30 PM onwards pic.twitter.com/7POPthFITx
ಹೆಚ್ಚಿನ ಐಪಿಎಲ್ ಪಂದ್ಯಗಳು ರಾತ್ರಿ 7:30 ಕ್ಕೆ ಪ್ರಾರಂಭವಾಗುತ್ತವೆ. ಮಧ್ಯಾಹ್ನ ಪಂದ್ಯಗಳಿರುವ ದಿನಗಳಲ್ಲಿ, 3:30ಕ್ಕೆ ಪಂದ್ಯ ಪ್ರಾರಂಭವಾಗುತ್ತವೆ. ಭಾರತದಲ್ಲಿನ ವೀಕ್ಷಕರು ಸ್ಟಾರ್ ನೆಟ್‌ವರ್ಕ್ ಟಿವಿ ಚಾನೆಲ್‌ಗಳಲ್ಲಿ ಪಂದ್ಯಾವಳಿಯನ್ನು ವೀಕ್ಷಿಸಬಹುದು. ಆನ್‌ಲೈನ್ ಲೈವ್-ಸ್ಟ್ರೀಮಿಂಗ್ ಆದ್ಯತೆ ನೀಡುವವರಿಗೆ, ಜಿಯೋಸಿನೆಮಾ ಆ್ಯಪ್ ಮತ್ತು ಅದರ ವೆಬ್‌ಸೈಟ್‌ನಲ್ಲಿ ಪಂದ್ಯಗಳು ಲಭ್ಯವಿರುತ್ತವೆ.
ಇದನ್ನೂ ಓದಿ IPL 2024: ಗೋ ಗ್ರೀನ್ ಅಭಿಯಾನದ ಜೆರ್ಸಿ ಬಿಡುಗಡೆಗೊಳಿಸಿದ ಆರ್ಸಿಬಿ
ಮೊದಲ ಹಂತದ ವೇಳಾಪಟ್ಟಿ
ಮಾ.22: ರಾತ್ರಿ 7:30: ಆರ್ಸಿಬಿ vsಚೆನ್ನೈ ಸೂಪರ್ ಕಿಂಗ್ಸ್ -ಚೆನ್ನೈ
ಮಾ.23: ಮಧ್ಯಾಹ್ನ 3:30: ಪಂಜಾಬ್ vsಡೆಲ್ಲಿ – ಮೊಹಾಲಿ
ಮಾ.23: ರಾತ್ರಿ 7:30 : ಕೆಕೆಆರ್ vs ಸನ್ರೈಸರ್ಸ್, – ಕೋಲ್ಕತ್ತಾ
ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್ vs ಲಕ್ನೋ, ಜೈಪುರ್
ಮಾ. 24 ರಾತ್ರಿ 7:30: ಗುಜರಾತ್ vs ಮುಂಬೈ ಇಂಡಿಯನ್ಸ್, ಅಹಮದಾಬಾದ್
ಮಾ.25 ರಾತ್ರಿ 7:30:ಆರ್ಸಿಬಿ vs ಪಂಜಾಬ್, ಬೆಂಗಳೂರು
ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್ ,ಚೆನ್ನೈ
ಮಾ.27: ರಾತ್ರಿ 7:30: ಸನ್ರೈಸರ್ಸ್vs ಮುಂಬೈ , ಹೈದರಾಬಾದ್
ಮಾ.28: ರಾತ್ರಿ 7:30: ರಾಜಸ್ಥಾನ್ vs ಡೆಲ್ಲಿ, ಜೈಪುರ್
ಮಾ.29: ರಾತ್ರಿ 7:30 ಆರ್ಸಿಬಿ vs ಕೆಕೆಆರ್ ,ಬೆಂಗಳೂರು
ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್ ,ಲಕ್ನೋ
ಮಾ.31 ಮಧ್ಯಾಹ್ನ 3:30: ಗುಜರಾತ್ vs ಸನ್ರೈಸರ್ಸ್ ,ಅಹಮದಬಾದ್
ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ
ಎಪ್ರಿಲ್ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ
ಎಪ್ರಿಲ್ 2 ಆರ್ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು
ಎಪ್ರಿಲ್ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್
ಎಪ್ರಿಲ್ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್
ಎಪ್ರಿಲ್ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್
ಎಪ್ರಿಲ್ 6 ರಾಜಸ್ಥಾನ್ vs ಆರ್ಸಿಬಿ ಸಂಜೆ 7:30 ಜೈಪುರ
ಎಪ್ರಿಲ್ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ
ಎಪ್ರಿಲ್ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ