Site icon Vistara News

IPL 2024: ಹಾಲಿ ಚಾಂಪಿಯನ್​ ಚೆನ್ನೈ ತಂಡಕ್ಕೆ ಆತಂಕ; ಗಾಯಗೊಂಡ ಸ್ಟಾರ್​ ಆಟಗಾರ ಐಪಿಎಲ್​ಗೆ ಅನುಮಾನ

chennai super kings

ಮುಂಬಯಿ: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿ ಮಾರ್ಚ್​ 22ರಿಂದ ಆರಂಭಗೊಳ್ಳುವ ಸಾಧ್ಯತೆ ಇದೆ ಎಂದು ಈಗಾಗಲೇ ವರದಿಯಾಗಿದೆ. ಆದರೆ ಟೂರ್ನಿ ಆರಂಭಕ್ಕೂ ಮುನ್ನವೇ ಹಾಲಿ ಚಾಂಪಿಯನ್​ ಚೆನ್ನೈ ಸೂಪರ್​ ಕಿಂಗ್ಸ್(Chennai Super Kings)​ ತಂಡಕ್ಕೆ ಆತಂಕವೊಂದು ಎದುರಾಗಿದೆ. ತಂಡದ ಸ್ಟಾರ್​ ಆಟಗಾರ ಶಿವಂ ದುಬೆ(Shivam Dube) ಗಾಯಗೊಂಡಿದ್ದಾರೆ.

ಪ್ರಸಕ್ತ ಸಾಗುತ್ತಿರುವ ರಣಜಿ ಟ್ರೋಫಿ ಟೂರ್ನಿಯಲ್ಲಿ ಆಡುತ್ತಿದ್ದ ಶಿವಂ ದುಬೆ ಗಾಯಗೊಂಡು ಕಾರ್ಟರ್​ ಫೈನಲ್​ ಪಂದ್ಯದಿಂದ ಹೊರಗುಳಿದಿದ್ದಾರೆ. ಹೀಗಾಗಿ ಚೆನ್ನೈ ತಂಡಕ್ಕೆ ಆತಂಕ ಎದುರಾಗಿದೆ. ಒಂದೊಮ್ಮೆ ಅವರ ಗಾಯದ ಪ್ರಮಾಣ ಗಂಭೀರವಾಗಿದ್ದರೆ ಅವರು ಐಪಿಎಲ್​ನಿಂದ ಹೊರ ಬೀಳುವ ಅನಿವಾರ್ಯತೆ ಉಂಟಾಗಬಹುದು.

ರಣಜಿ ಟೂರ್ನಿಯಲ್ಲಿ ಶಿವಂ ದುಬೆ ಭರ್ಜರಿ ಫಾರ್ಮ್​ನಲ್ಲಿದ್ದರು. ಆಡಿದ ಐದು ಪಂದ್ಯಗಳಲ್ಲಿ ಎರಡು ಶತಕಗಳು ಮತ್ತು 2 ಅರ್ಧ ಶತಕಗಳನ್ನು ಬಾರಿಸಿ 67.83 ಸರಾಸರಿಯಲ್ಲಿ 407 ರನ್ ಹಾಗೂ 12 ವಿಕೆಟ್​ಗಳನ್ನು ಕಬಳಿಸಿದ್ದಾರೆ. ಕಳೆದ ಸೀಸನ್​ನಲ್ಲಿ ಚೆನ್ನೈ ಸೂಪರ್ ಕಿಂಗ್ಸ್​ ಪರ ಅದ್ಭುತ ಪ್ರದರ್ಶನ ನೀಡಿದ ಶಿವಂ ದುಬೆ 418 ರನ್ ಬಾರಿಸಿದ್ದ ತಂಡವನ್ನು ಚಾಂಪಿಯನ್ ಪಟ್ಟಕ್ಕೇರಿಸುವಲ್ಲಿ ಪ್ರಮುಖ ಪಾತ್ರವಹಿಸಿದ್ದರು.

ಇದೇ ವರ್ಷಾರಂಭದಲ್ಲಿ ನಡೆದಿದ್ದ ಅಫಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ದುಬೆ ಅತ್ಯುತ್ತಮ ಆಲ್​ರೌಂಡರ್​ ಪ್ರದರ್ಶನ ತೋರುವ ಮೂಲಕ ಆಯ್ಕೆ ಸಮಿತಿಯ ಗಮನ ಸೆಳೆದಿದ್ದರು. ಟಿ20 ವಿಶ್ವಕಪ್​ ತಂಡದಲ್ಲಿಯೂ ಸ್ಥಾನ ಪಡೆಯುವ ನಿರೀಕ್ಷೆಯಲ್ಲಿದ್ದಾರೆ. ಇದೀಗ ಅವರ ಗಾಯ ಚೆನ್ನೈ ತಂಡಕ್ಕೆ ಆತಂಕವೊಂದನ್ನು ಸೃಷ್ಟಿಸಿದೆ.

ಇದನ್ನೂ ಓದಿ IND vs ENG: ನಾಲ್ಕನೇ ಪಂದ್ಯಕ್ಕೆ ಭಾರತ ತಂಡದ ಸ್ಟಾರ್​ ವೇಗಿಗೆ ವಿಶ್ರಾಂತಿ!

ಕಳೆದ ಆವೃತ್ತಿಯಲ್ಲಿ ಯಾವುದೇ ಸ್ಟಾರ್​ ಬೌಲರ್​ಗಳನ್ನು ಒಳಗೊಳ್ಳದೆ ಬಹುತೇಕ ಅನ್​ಕ್ಯಾಪ್ಡ್​ ಬೌಲರ್​ಗಳನ್ನೇ ಬಳಸಿಕೊಂಡು ಚಾಂಪಿಯನ್​ ಆಗಿದ್ದ ಧೋನಿ ಪಡೆ ಈ ಬಾರಿ ಬಲಿಷ್ಠ ತಂಡವನ್ನು ರೂಪಿಸಿದ್ದು ಕಪ್​ ತಮ್ಮ ಬಳಿಯೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದೆ. ಅಚ್ಚರಿ ಎಂದರೆ ಚೆನ್ನೈ ತಂಡದಲ್ಲಿ ಬಹುತೇಕ ನ್ಯೂಜಿಲ್ಯಾಂಡ್​ ತಂಡದ ಆಟಗಾರರೇ ಕಾಣಿಸಿಕೊಂಡಿದ್ದಾರೆ.

ಸಿಎಸ್​ಕೆ ಹರಾಜಿನಲ್ಲಿ ಖರೀದಿಸಿದ ಆಟಗಾರರು

ರಚಿನ್ ರವೀಂದ್ರ- 1.80 ಕೋಟಿ (ಮೂಲ ಬೆಲೆ 50 ಲಕ್ಷ ರೂ.)

ಶಾರ್ದೂಲ್ ಠಾಕೂರ್- 4 ಕೋಟಿ (ಮೂಲ ಬೆಲೆ 2 ಕೋಟಿ ರೂ.)

ಡೇರಿಲ್ ಮಿಚೆಲ್- 14 ಕೋಟಿ (ಮೂಲ ಬೆಲೆ 1 ಕೋಟಿ ರೂ.)

ಸಮೀರ್ ರಿಝ್ವಿ- 8.40 ಕೋಟಿ (ಮೂಲ ಬೆಲೆ 20 ಲಕ್ಷ ರೂ.)

ಮುಸ್ತಫಿಜುರ್ ರೆಹಮಾನ್- 2 ಕೋಟಿ (ಮೂಲ ಬೆಲೆ 2 ಕೋಟಿ ರೂ.)

ಅವಿನಾಶ್- 20 ಲಕ್ಷ (ಮೂಲ ಬೆಲೆ 20 ಲಕ್ಷ ರೂ.)

ಚೆನ್ನೈ ತಂಡ

ಎಂ.ಎಸ್ ಧೋನಿ (ನಾಯಕ), ಡೆವೊನ್ ಕಾನ್ವೇ, ಋತುರಾಜ್ ಗಾಯಕ್ವಾಡ್, ಅಜಿಂಕ್ಯ ರಹಾನೆ, ಶೇಕ್ ರಶೀದ್, ರವೀಂದ್ರ ಜಡೇಜಾ, ಮಿಚೆಲ್ ಸ್ಯಾಂಟ್ನರ್, ಮೊಯೀನ್ ಅಲಿ, ಶಿವಂ ದುಬೆ, ನಿಶಾಂತ್ ಸಿಂಧು, ಅಜಯ್ ಮಂಡಲ್, ರಾಜವರ್ಧನ್ ಹಂಗರ್ಗೇಕರ್, ದೀಪಕ್ ಚಹರ್, ಮಹೇಶ್ ದೀಕ್ಷಾನಾ, ಮುಖೇಶ್ ಚೌಧರಿ, ಪ್ರಶಾಂತ್ ಸೋಲಂಕಿ, ಸಿಮರ್ಜೀತ್ ಸಿಂಗ್, ತುಷಾರ್ ದೇಶಪಾಂಡೆ, ಮಥೀಶಾ ಪತಿರಾನಾ, ಶಾರ್ದೂಲ್ ಠಾಕೂರ್, ರಚಿನ್ ರವೀಂದ್ರ, ಡ್ಯಾರಿಲ್ ಮಿಚೆಲ್, ಸಮೀರ್ ರಿಜ್ವಿ.

Exit mobile version