Site icon Vistara News

IPL 2024: ರಣಜಿ ಆಡಲು ಅಸಡ್ಡೆ ತೋರಿದ್ದ ಶ್ರೇಯಸ್​,ಇಶಾನ್​ ಐಪಿಎಲ್​ನಲ್ಲಿ ಡಕೌಟ್​; ಫುಲ್​ ಟ್ರೋಲ್​

Ishan Kishan

ಅಹಮದಾಬಾದ್​: ಹಲವು ಬಾರಿ ದೇಶಿಯ ಕ್ರಿಕೆಟ್​ನಲ್ಲಿ ಭಾಗಿಯಾಗುವಂತೆ ಬಿಸಿಸಿಐ(BCCI) ನೀಡಿದ ಸೂಚನೆಯನ್ನು ಗಂಭೀರವಾಗಿ ಪರಿಗಣಿಸಿದ ಕಾರಣ ಕೇಂದ್ರ ಗುತ್ತಿಗೆ(BCCI Annual Contract) ಪಟ್ಟಿಯಿಂದ ಹೊರಬಿದ್ದ ಇಶಾನ್‌ ಕಿಶನ್​(Ishan Kishan) ಹಾಗೂ ಶ್ರೇಯಸ್‌ ಅಯ್ಯರ್​(shreyas iyer) 17ನೇ ಆವೃತ್ತಿಯ ಐಪಿಎಲ್​(IPL 2024) ಟೂರ್ನಿಯಲ್ಲಿ ಆಡಿದ ಮೊದಲ ಪಂದ್ಯದಲ್ಲೇ ಶೂನ್ಯಕ್ಕೆ ಔಟಾಗಿ ಟ್ರೋಲ್​ ಆಗಿದ್ದಾರೆ.

ಇಶಾನ್​ ಕಿಶನ್​ ಅವರು ಭಾನುವಾರದ ಪಂದ್ಯದಲ್ಲಿ ಗುಜರಾತ್​ ಟೈಟಾನ್ಸ್​ ಎದುರು ನಾಲ್ಕು ಎಸೆತ ಎದುರಿಸಿ ಡಕೌಟ್​ ಆದರೆ, ಶ್ರೇಯಸ್​ ಅಯ್ಯರ್​ ನಿನ್ನೆ ನಡೆದಿದ್ದ ಹೈದರಾಬಾದ್​ ವಿರುದ್ಧದ ಪಂದ್ಯಲ್ಲಿ ಶೂನ್ಯ ಸುತ್ತಿದ್ದರು. ಇದೀಗ ಉಭಯ ಆಟಗಾರರನ್ನು ಕೂಡ ನೆಟ್ಟಿಗರು ಟ್ರೋಲ್​ ಮಾಡಲಾರಂಭಿಸಿದ್ದಾರೆ. ತಪ್ಪಿಗೆ ತಕ್ಕ ಶಿಕ್ಷೆಯಾಗಿದೆ ಎಂದು ಕಮೆಂಟ್​ ಮಾಡಿದ್ದಾರೆ. ಇನ್ನು ಕೆಲವರು ಇದಕ್ಕೆ ಹೇಳುವುದು ಹಿರಿಯರ ಮಾತು ಕಡೆಗಣಿಸಬಾರಂದೆ ಕಾಲೆಳೆದಿದ್ದಾರೆ.

ಇಶಾನ್​ ಅವರು ಮುಂದಿನ ಪಂದ್ಯಗಳಲ್ಲಿಯೂ ಕಳಪೆ ಬ್ಯಾಟಿಂಗ್​ ಪ್ರದರ್ಶನ ತೋರಿದ್ದೇ ಆದರೆ ಟಿ20 ವಿಶ್ವಕಪ್​ನಲ್ಲಿಯೂ ಸ್ಥಾನ ಪಡೆಯುವುದು ಅನುಮಾನ. ರಣಜಿ ಆಡುವಂತೆ ಟೀಮ್​ ಇಂಡಿಯಾ ಕೋಚ್​ ರಾಹುಲ್​ ದ್ರಾವಿಡ್​ ಸಲಹೆ ನೀಡಿದ್ದರೂ ಕೂಡ ಇದನ್ನು ಲೆಕ್ಕಿಸದೆ ಇತ್ತೀಚೆಗೆ ಬರೋಡಾದಲ್ಲಿ ಇಶಾನ್​ ಕಿಶನ್​ ಐಪಿಎಲ್​ ಟೂರ್ನಿಗಾಗಿ ಅಭ್ಯಾಸ ನಡೆಸಿದ್ದರು. ಇದೇ ವೇಳೆ ಬಿಸಿಸಿಐ ಕಾರ್ಯದರ್ಶಿ ಎಚ್ಚರಿಕೆ ನೀಡಿದ್ದರು. ಆದರೂ ಕೂಡ ಇಶಾನ್​ ಇದಕ್ಕೆ ಕ್ಯಾರೆ ಎಂದಿರಲಿಲ್ಲ. ಭಾರತದ ದಕ್ಷಿಣ ಆಫ್ರಿಕಾ ಪ್ರವಾಸದ ಸಮಯದಲ್ಲಿ ಇಶಾನ್ ತಮ್ಮ ಮಾನಸಿಕ ಯೋಗಕ್ಷೇಮಕ್ಕಾಗಿ ವಿರಾಮವನ್ನು ಬಯಸಿ, ಬಳಿಕ ಅವರು ರಾಷ್ಟ್ರೀಯ ತಂಡಕ್ಕೆ ಹಿಂತಿರುಗದೆ ಹಾರ್ದಿಕ್ ಪಾಂಡ್ಯ ಅವರೊಂದಿಗೆ ಬರೋಡದಲ್ಲಿ ಐಪಿಎಲ್​ ತರಬೇತಿ ನಡೆಸಿ ಬಿಸಿಸಿಐ ಕೆಂಗಣ್ಣಿಗೂ ಗುರಿಯಾಗಿದ್ದರು.

ಇದನ್ನೂ ಓದಿ IPL 2024: ಪಂದ್ಯದ ವೇಳೆ ತುಂಡಾಗಿ ಬಿದ್ದ ಸ್ಪೈಡರ್‌ಕ್ಯಾಮ್ ಕೇಬಲ್​; ತಪ್ಪಿದ ಭಾರಿ ಅನಾಹುತ

ಬಿಹಾರ ಮೂಲದ ಇಶಾನ್​ ಜಾರ್ಖಂಡ್ ಪರ ಆಡುವ ವೇಳೆ ತನ್ನ ತಂದೆಯ ಕಾರನ್ನು ಅಪಾಯಕಾರಿ ರೀತಿಯಲ್ಲಿ ಚಾಲನೆ ಮಾಡಿಕೊಂಡು ಹೋಗಿ ಆಟೋರಿಕ್ಷಾಗೆ ಡಿಕ್ಕಿ ಹೊಡೆದಿದ್ದರು. ಪರಿಣಾಮ ಅದರಲ್ಲಿದ್ದವರು ಗಾಯಗೊಂಡಿದ್ದರು. ಪ್ರಕರಣ ದಾಖಲಾಗದಿದ್ದರೂ, ಕೋಪಗೊಂಡ ಸ್ಥಳೀಯರು ಕಿಶನ್ ಮೇಲೆ ಹಲ್ಲೆ ನಡೆಸಿದ್ದರಿಂದ ಪರಿಸ್ಥಿತಿ ಉಲ್ಬಣಗೊಂಡಿತ್ತು. ಕಿಶನ್ ಅವರ ತಂದೆ ಗಾಯಗೊಂಡವರ ವೈದ್ಯಕೀಯ ವೆಚ್ಚವನ್ನು ಭರಿಸುವುದಾಗಿ ಮತ್ತು ಆಟೋ ರಿಕ್ಷಾ ದುರಸ್ತಿ ಮಾಡುವುದಾಗಿ ಭರವಸೆ ನೀಡಿದ ಬಳಿಕ ಜಗಳ ಕೊನೆಗೊಂಡಿತ್ತು. ಆದರೆ ಪೊಲೀಸರು ಇಶಾನ್ ಕಿಶನ್ ಅವರನ್ನು ಬಂಧಿಸಿ ಜೈಲಿನಲ್ಲಿ ಇರಿಸಿದ್ದರು. ಅವರು ಒಂದು ರಾತ್ರಿ ಜೈಲಿನಲ್ಲಿ ಕಳೆಯುವಂತಾಗಿತ್ತು.

Exit mobile version