Site icon Vistara News

IPL 2024: ಸೋಲಿನ ಬೆನ್ನಲ್ಲೇ ಗುಜರಾತ್ ತಂಡದ ನಾಯಕನಿಗೆ ಬಿತ್ತು 12 ಲಕ್ಷ ರೂ. ದಂಡ

Shubman Gill

ಚೆನ್ನೈ: ಮುಂಬಯಿ ಇಂಡಿಯನ್ಸ್​ ವಿರುದ್ಧ ಗೆದ್ದು ಬೀಗಿದ್ದ ಗುಜರಾತ್​ ಟೈಟಾನ್ಸ್​ ನಿನ್ನೆ(ಮಂಗಳವಾರ) ನಡೆದ ಚೆನ್ನೈ ವಿರುದ್ಧದ ಪಂದ್ಯದಲ್ಲಿ ಹೀನಾಯ ಸೋಲು ಕಂಡಿದೆ. ಸೋಲಿನ ಆಘಾತದ ಬೆನ್ನಲ್ಲೇ ತಂಡದ ನಾಯಕ ಶುಭಮನ್​ ಗಿಲ್​ಗೆ(Shubman Gill) 12 ಲಕ್ಷ ರೂ. ದಂಡದ ಬಿಸಿ ಮುಟ್ಟಿದೆ. ಇದಕ್ಕೆ ಕಾರಣ ಪಂದ್ಯದಲ್ಲಿ ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡದ್ದು. ಇದು ಈ ಆವೃತ್ತಿಯಲ್ಲಿ ಆಟಗಾರಿಗೆ ವಿಧಿಸಿದ ಮೊದ ದಂಡದ ನಿದರ್ಶನ.

“ನಿಧಾನಗತಿಯ ಓವರ್ ರೇಟ್ ಕಾಯ್ದುಕೊಂಡಿದ್ದರಿಂದ ಗುಜರಾತ್ ಟೈಟಾನ್ಸ್ ನಾಯಕ ಶುಭಮನ್ ಗಿಲ್ ಅವರಿಗೆ ದಂಡ ವಿಧಿಸಲಾಗಿದೆ. ಕನಿಷ್ಠ ಓವರ್ ರೇಟ್ ಅಪರಾಧಗಳಿಗೆ ಸಂಬಂಧಿಸಿದಂತೆ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ಈ ಋತುವಿನ ಮೊದಲ ಅಪರಾಧ, ಗಿಲ್‌ಗೆ 12 ಲಕ್ಷ ದಂಡ ವಿಧಿಸಲಾಯಿತು” ಎಂದು ಐಪಿಎಲ್ ಅಧಿಕೃತ ಹೇಳಿಕೆಯಲ್ಲಿ ತಿಳಿಸಿದೆ.

ನಿಗದಿತ ಸಮಯಕ್ಕಿಂತಲೂ ಹೆಚ್ಚು ಅವಧಿ ತೆಗೆದುಕೊಂಡಲ್ಲಿ ಐಪಿಎಲ್‌ನ ನೀತಿ ಸಂಹಿತೆಯ ಅಡಿಯಲ್ಲಿ ನಾಯಕನಿಗೆ ದಂಡ ವಿಧಿಸಲಾಗುತ್ತದೆ. ಇದೀಗ ಈ ಶಿಕ್ಷೆಗೆ ಗಿಲ್​ ಒಳಗಾಗಿದ್ದಾರೆ. ಐಪಿಎಲ್​ನ ಕೋಡ್​ ಆಫ್​ ಕಂಡಕ್ಟ್​ನ ಮೊದಲ ಅಪರಾಧವನ್ನು(ipl code of conduct level 1 offence) ಶುಭಮನ್​ ಗಿಲ್​ ಒಪ್ಪಿಕೊಂಡಿದ್ದಾರೆ.

ಇದನ್ನೂ ಓದಿ IPL 2024 : ಮಿಂಚಿನ ವೇಗದಲ್ಲಿ ಹಾರಿ ಭರ್ಜರಿ ಕ್ಯಾಚ್ ಹಿಡಿದ ಧೋನಿ; ವಿಡಿಯೊ ಇದೆ

ಐಪಿಎಲ್​ ನಿಯಮದ ಪ್ರಕಾರ, ಪ್ರತಿ ತಂಡಗಳು 20 ಓವರ್​ಗಳನ್ನು 1 ಗಂಟೆ 30 ನಿಮಿಷಗಳಲ್ಲಿ ಪೂರ್ಣಗೊಳಿಸಬೇಕು. ಇದಕ್ಕಿಂತ ಹೆಚ್ಚಿನ ಸಮಯ ತೆಗೆದುಕೊಂಡರೆ ಬೌಂಡರಿ ಲೈನ್​ನಿಂದ ಒಬ್ಬ ಫೀಲ್ಡರ್​ 30ಯಾರ್ಡ್​ ಸರ್ಕಲ್​ನಲ್ಲಿ ಫೀಲ್ಡ್​ ಮಾಡಬೇಕು. ಇದೇ ತಪ್ಪನ್ನು 2ನೇ ಬಾರಿ ಪುನರಾವರ್ತಿಸಿದರೆ ನಾಯಕನಿಗೆ 24 ಲಕ್ಷ ರೂ. ದಂಡ ವಿಧಿಸಲಾಗುತ್ತದೆ. ಇದರ ಜತೆಗೆ ಪ್ಲೇಯಿಂಗ್ ಇಲೆವೆನ್​ನ 10 ಆಟಗಾರರಿಗೆ 6 ಲಕ್ಷ ಅಥವಾ ಪಂದ್ಯದ ಶುಲ್ಕದ 25% ದಂಡವನ್ನು ವಿಧಿಸಲಾಗುತ್ತದೆ.

ಗುಜರಾತ್​ಗೆ ಸೋಲು

ಇಲ್ಲಿನ ಚೆಪಾಕ್ ಕ್ರಿಕೆಟ್ ಸ್ಟೇಡಿಯಮ್​ನಲ್ಲಿ ನಡೆದ ಈ ಪಂದ್ಯದಲ್ಲಿ ಮೊದಲು ಬ್ಯಾಟ್ ಮಾಡಿದ ಚೆನ್ನೈ ತಂಡ ಭರ್ಜರಿಯಾಗಿ ಬ್ಯಾಟ್ ಬೀಸಿ ನಿಗದಿತ 20 ಓವರ್​ಗಳಲ್ಲಿ 6 ವಿಕೆಟ್​ಗೆ 206 ರನ್ ಬಾರಿಸಿತು. ಪ್ರತಿಯಾಗಿ ಬ್ಯಾಟ್ ಮಾಡಿದ ಗುಜರಾತ್ ತಂಡ ತನ್ನೆಲ್ಲಾ ಓವರ್​ಗಳು ಮುಕ್ತಾಯಗೊಂಡಾಗ 8 ವಿಕೆಟ್​ಗೆ 143 ರನ್ ಬಾರಿಸಿ ಸೋಲೊಪ್ಪಿಕೊಂಡಿತು. ಚೆನ್ನೈ ಪರ  ಶಿವಂ ದುಬೆ (23 ಎಸೆಕ್ಕೆ 52 ರನ್​) ಅರ್ಧ ಶತಕದೊಂದಿಗೆ ಮಿಂಚಿದರು ಹಾಗೂ ಗೆಲುವಿನಲ್ಲಿ ದೊಡ್ಡ ಪಾತ್ರ ವಹಿಸಿದರು.

Exit mobile version