Site icon Vistara News

IPL 2024: ಐಪಿಎಲ್‌ನಲ್ಲಿ ಸ್ಮಾರ್ಟ್‌ ರಿಪ್ಲೆ; ಹೊಸ ಟೆಕ್ನಾಲಜಿಯಿಂದ ಏನು ಲಾಭ?

Smart Replay System

ಬೆಂಗಳೂರು: ಬಹುನಿರೀಕ್ಷಿತ 2024ರ ಇಂಡಿಯನ್ ಪ್ರೀಮಿಯರ್ ಲೀಗ್(IPL 2024) ಟೂರ್ನಿ ಆರಂಭಕ್ಕೆ ಕ್ಷಣಗಣನೆ ಶುರುವಾಗಿದೆ. ಪಂದ್ಯಾವಳಿ ಆರಂಭಕ್ಕೆ ಇನ್ನು ಕೇವಲ 2 ದಿನ ಮಾತ್ರ ಬಾಕಿ(ipl 2024 schedule) ಉಳಿದಿದೆ. ಮಾರ್ಚ್ 22ರಂದು ಚೆನ್ನೈನ ಚೆಪಾಕ್ ಮೈದಾನದಲ್ಲಿ ನಡೆಯಲಿರುವ ಉದ್ಘಾಟನಾ ಪಂದ್ಯದಲ್ಲಿ ಹಾಲಿ ಚಾಂಪಿಯನ್ ಚೆನ್ನೈ ಸೂಪರ್ ಕಿಂಗ್ಸ್(royal challengers bangalore vs chennai super kings) ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು(RCB vs CSK) ತಂಡಗಳು ಮುಖಾಮುಖಿಯಾಗುವುದರೊಂದಿಗೆ ಟೂರ್ನಿಗೆ ಅಧಿಕೃತ ಚಾಲನೆ ಸಿಗಲಿದೆ. ಈ ಬಾರಿಯ ಟೂರ್ನಿಯಲ್ಲಿ ಬಿಸಿಸಿಐ ಹೊಸ ಪ್ರಯೋಗವೊಂದನ್ನು ನಡೆಸಲು ಮುಂದಾಗಿದೆ.

ಕಳೆದ ಬಾರಿ ಐಪಿಎಲ್‌ನಲ್ಲಿ ಇಂಪ್ಯಾಕ್ಟ್​ ಪ್ಲೇಯರ್​ ಸೇರಿ ಇನ್ನು ಹಲವು ನಿಯಮಗಳನ್ನು ಜಾರಿಗೆ ತಂದಿದ್ದ ಬಿಸಿಸಿಐ ಈ ಬಾರಿ ಅಂಪೈರ್‌ ತೀರ್ಪು ಮೇಲ್ಮನವಿ ವ್ಯವಸ್ಥೆ(ಡಿಆರ್‌ಎಸ್‌)ಯನ್ನು ಇನ್ನಷ್ಟು ಪರಿಣಾಮಕಾರಿಗೊಳಿಸಲು ಯೋಜನೆ ರೂಪಿಸಿದೆ. ಟೂರ್ನಿಯು ನಿಖರತೆ ಹಾಗೂ ರೋಚಕತೆಯಿಂದ ಕೂಡಿರಲು ಸ್ಮಾರ್ಟ್‌ ರಿಪ್ಲೆ(ipl smart replay system) ವ್ಯವಸ್ಥೆ ಜಾರಿಗೊಳಿಸಲಿದೆ.

ಇದನ್ನೂ ಓದಿ IPL 2024: ಇದುವರೆಗಿನ 16 ಐಪಿಎಲ್​ ಫೈನಲ್​ ಪಂದ್ಯಗಳ ಹಿನ್ನೋಟ ಕುತೂಹಲಕರ!

ಏನಿದು ಸ್ಮಾರ್ಟ್‌ ರಿಪ್ಲೆ?


ಸ್ಮಾರ್ಟ್‌ ರಿಪ್ಲೆ ವ್ಯವಸ್ಥೆಯಿಂದ ಯಾವುದೇ ಔಟ್​ ಅಥವಾ ನಾಟೌಟ್​ ನಿರ್ಧಾರ ವೇಗದ ಜತೆಗೆ ನಿಖರವಾಗಿ ತೀರ್ಪನ್ನು ಪ್ರಕಟಿಸಲು ಸಹಕಾರಿಯಾಗಲಿದೆ. ಸ್ಮಾರ್ಟ್‌ ರಿಪ್ಲೆನಲ್ಲಿ ಹಾಕ್‌-ಐ ವ್ಯವಸ್ಥೆ ನೋಡಿಕೊಳ್ಳುವವರು ಟಿವಿ ಅಂಪೈರ್‌ಗಳಿಂದ ನೇರವಾಗಿ ಮಾಹಿತಿ ಪಡೆದುಕೊಳ್ಳಲಿದ್ದಾರೆ. ಈ ವ್ಯವಸ್ಥೆಗಾಗಿ ಮೈದಾನದ ವಿವಿಧೆಡೆ 8 ಹೈ ಸ್ಪೀಡ್‌ ಕ್ಯಾಮೆರಾಗಳನ್ನು ಅಳವಡಿಸಲಾಗುತ್ತದೆ. ಈ ಕ್ಯಾಮೆರಾದಲ್ಲಿ ಸೆರೆ ಹಿಡಿಯಲಾದ ಫೋಟೋಗಳನ್ನು ಮತ್ತು ವಿಡಿಯೊಗಳನ್ನು ಪರಿಶೀಲಿಸಿ ಕ್ಯಾಚ್‌, ಎಲ್‌ಬಿಡಬ್ಲ್ಯು, ಸ್ಟಂಪ್‌ ಔಟ್‌ಗಳ ತೀರ್ಪುಗಳನ್ನು ಪ್ರಕಟಿಸಲಾಗುತ್ತದೆ. ಈ ವ್ಯವಸ್ಥೆಯಿಂದ ಸಮಯದ ಅಭಾವವನ್ನು ಸರಿದೂಗಿಸಬಹುದು.

ಕ್ಯಾಮೆರಾಗಳ ಅಳವಡಿಕೆ ಹೇಗೆ?

ಎಂಟು ಹಾಕ್-ಐ ಕ್ಯಾಮೆರಾಗಳನ್ನು ಬೌಂಡರಿಗಳ ಬಳಿ ನಾಲ್ಕು ಮತ್ತು ವಿಕೆಟ್ ಸ್ಕ್ವೇರ್ ಬಳಿ ನಾಲ್ಕನ್ನು ಇಡಲಾಗುತ್ತದೆ. ಈ ಮೂಲಕ ಸ್ಟಂಪಿಂಗ್‌ಗಳು, ರನ್‌ಔಟ್‌ಗಳು, ಕ್ಯಾಚ್‌ಗಳು ಮತ್ತು ಓವರ್‌ಥ್ರೋಗಳ ದೃಶ್ಯಗಳನ್ನು ಈ ಕ್ಯಾಮೆರಾಗಳು ಸೆರೆ ಹಿಡಿಯಲಿದೆ.

ಮೊದಲ ಹಂತದ ವೇಳಾಪಟ್ಟಿ

ಮಾ.22: ರಾತ್ರಿ 7:30: ಆರ್​ಸಿಬಿ vsಚೆನ್ನೈ ಸೂಪರ್‌ ಕಿಂಗ್ಸ್‌ -ಚೆನ್ನೈ

ಮಾ.23: ಮಧ್ಯಾಹ್ನ 3:30: ಪಂಜಾಬ್​ vsಡೆಲ್ಲಿ – ಮೊಹಾಲಿ

ಮಾ.23: ರಾತ್ರಿ 7:30 : ಕೆಕೆಆರ್​ vs ಸನ್​ರೈಸರ್ಸ್​, – ಕೋಲ್ಕತ್ತಾ

ಮಾ. 24 ಮಧ್ಯಾಹ್ನ 3:30: ರಾಜಸ್ಥಾನ್​ vs ಲಕ್ನೋ, ಜೈಪುರ್‌

ಮಾ. 24 ರಾತ್ರಿ 7:30: ಗುಜರಾತ್‌ vs ಮುಂಬೈ ಇಂಡಿಯನ್ಸ್‌, ಅಹಮದಾಬಾದ್

ಮಾ.25 ರಾತ್ರಿ 7:30:ಆರ್​ಸಿಬಿ vs ಪಂಜಾಬ್​, ಬೆಂಗಳೂರು

ಮಾ.26: ರಾತ್ರಿ 7:30: ಸಿಎಸ್ ಕೆ vs ಗುಜರಾತ್‌ ,ಚೆನ್ನೈ

ಮಾ.27: ರಾತ್ರಿ 7:30: ಸನ್​ರೈಸರ್ಸ್vs ಮುಂಬೈ , ಹೈದರಾಬಾದ್‌

ಮಾ.28: ರಾತ್ರಿ 7:30: ರಾಜಸ್ಥಾನ್​ vs ಡೆಲ್ಲಿ, ಜೈಪುರ್

ಮಾ.29: ರಾತ್ರಿ 7:30 ಆರ್​ಸಿಬಿ vs ಕೆಕೆಆರ್​ ,ಬೆಂಗಳೂರು

ಮಾ.30: ರಾತ್ರಿ 7:30 ಲಕ್ನೋ vs ಪಂಜಾಬ್​ ,ಲಕ್ನೋ

ಮಾ.31 ಮಧ್ಯಾಹ್ನ 3:30: ಗುಜರಾತ್​ vs ಸನ್​ರೈಸರ್ಸ್ ,ಅಹಮದಬಾದ್‌

ಮಾ.31 ರಾತ್ರಿ: 7:30 : ಡೆಲ್ಲಿ vs ಚೆನ್ನೈ -ವಿಶಾಖಪಟ್ಟಣಂ

ಎಪ್ರಿಲ್​ 1 ಮುಂಬೈ vs ರಾಜಸ್ಥಾನ್ ಸಂಜೆ 7:30 ಮುಂಬೈ

ಎಪ್ರಿಲ್​ 2 ಆರ್​ಸಿಬಿ vs ಲಕ್ನೋ ಸಂಜೆ 7:30 ಬೆಂಗಳೂರು

ಎಪ್ರಿಲ್​ 3 ಡೆಲ್ಲಿ vs ಕೆಕೆಆರ್ ಸಂಜೆ 7:30 ವೈಜಾಗ್

ಎಪ್ರಿಲ್​ 4 ಗುಜರಾತ್ vs ಪಂಜಾಬ್ ಸಂಜೆ 7:30 ಅಹಮದಾಬಾದ್

ಎಪ್ರಿಲ್​ 5 ಹೈದರಾಬಾದ್ vs ಚೆನ್ನೈ ಸಂಜೆ 7:30 ಹೈದರಾಬಾದ್

ಎಪ್ರಿಲ್​ 6 ರಾಜಸ್ಥಾನ್ vs ಆರ್​ಸಿಬಿ ಸಂಜೆ 7:30 ಜೈಪುರ

ಎಪ್ರಿಲ್​ 7 ಮುಂಬೈ vs ಡೆಲ್ಲಿ ಮಧ್ಯಾಹ್ನ 3:30 ಮುಂಬೈ

ಎಪ್ರಿಲ್​ 7 ಲಕ್ನೋ vs ಗುಜರಾತ್ ಸಂಜೆ 7:30 ಲಕ್ನೋ

Exit mobile version