ಜೈಪುರ: ವಿಶ್ವದ ಕ್ಯಾಶ್ ರಿಚ್ ಕ್ರಿಕೆಟ್ ಲೀಗ್ ಆಗಿರುವ ಐಪಿಎಲ್(IPL 2024) ಬಗ್ಗೆ ಟೀಮ್ ಇಂಡಿಯಾದ ಹಿರಿಯ ಹಾಗೂ ಅನುಭವಿ ಆಟಗಾರ ಆರ್.ಅಶ್ವಿನ್(R Ashwin) ಅವರು ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದಾರೆ. ಐಪಿಎಲ್ ನಿಜಕ್ಕೂ ಕ್ರಿಕೆಟ್ಟಾ? ಎಂದು ಪ್ರಶ್ನೆ ಮಾಡಿದ್ದಾರೆ.
ಡೆಲ್ಲಿ ಕ್ಯಾಪಿಟಲ್ಸ್ ಪಂದ್ಯಕ್ಕೂ ಮುನ್ನ ನಡೆದ ಸಂದರ್ಶನವೊಂದರಲ್ಲಿ ಮಾತನಾಡಿದ ರಾಜಸ್ಥಾನ್ ರಾಯಲ್ಸ್ ತಂಡದ ಆಟಗಾರನಾಗಿರುವ ಅಶ್ವಿನ್, ‘ಐಪಿಎಲ್ ಟೂರ್ನಿ ಒಂದು ದೊಡ್ಡ ಹೆಮ್ಮರವಾಗಿ ಬೆಳೆದು ನಿಂತಿದೆ, ಅದೆಷ್ಟೋ ಯುವ ಆಟಗಾರರಿಗೆ ತಮ್ಮ ಸಾಮರ್ಥ್ಯವನ್ನು ತೋರ್ಪಡಿಸಲು ಉತ್ತಮ ವೇದಿಕೆಯಾಗಿದೆ. ಈ ಟೂರ್ನಿಯಿಂದ ಅನೇಕ ಪ್ರತಿಭಾನ್ವಿತ ಆಟಗಾರರು ಬೆಳಕಿಗೆ ಬಂದಿದ್ದಾರೆ. ಆದರೂ ಕೂಡ ಕೆಲವೊಮ್ಮೆ ನನಗೆ ಐಪಿಎಲ್ ಕ್ರಿಕೆಟ್ ಹೌದಾ ಎಂದು ಅನುಮಾನ ಮೂಡುತ್ತದೆ” ಎಂದು ಹೇಳಿದರು.
“ಯುವಕನಾಗಿ ಐಪಿಎಲ್ ಟೂರ್ನಿಗೆ ಕಾಲಿಟ್ಟ ವೇಳೆ ಹಿರಿಯ ಆಟಗಾರರಿಂದ ಕಲಿಯಲು ಬಯಸುತ್ತಿದ್ದೆ. ಈಗ ನಾವು ಜಾಹೀರಾತು ಶೂಟಿಂಗ್‌ಗಾಗಿ ಅಭ್ಯಾಸ ಮಾಡುತ್ತ ನಮ್ಮ ಸಮಯವನ್ನು ಕಳೆದುಬಿಡುತ್ತೇವೆ. ಹೀಗಾಗಿ ಐಪಿಎಲ್ ಕ್ರಿಕೆಟ್ ಹೌದಾ ಎಂದು ಅಚ್ಚರಿಯಾಗುತ್ತದೆ” ಎಂದು ಆರ್.ಅಶ್ವಿನ್ ಹೇಳಿದ್ದಾರೆ. ಇತ್ತೀಚೆಗೆ ಭಾರತದಲ್ಲಿ ನಡೆದಿದ್ದ ಇಂಗ್ಲೆಂಡ್ ವಿರುದ್ಧದ ಟೆಸ್ಟ್ ಸರಣಿಯಲ್ಲಿ ಅಶ್ವಿನ್ ಅಮೋಘ ಬೌಲಿಂಗ್ ಪ್ರದರ್ಶನದೊಂದಿಗೆ ಟೆಸ್ಟ್ ಕ್ರಿಕೆಟ್ನಲ್ಲಿ 500 ವಿಕೆಟ್ ಪೂರ್ತಿಗೊಳಿಸಿದ ಸಾಧನೆ ಮಾಡಿದ್ದರು.
ಇದನ್ನೂ ಓದಿ Rishabh Pant: ಕಮ್ಬ್ಯಾಕ್ ಪಂದ್ಯದಲ್ಲೇ ದಾಖಲೆ ಬರೆದ ರಿಷಭ್ ಪಂತ್
2009ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಅಶ್ವಿನ್ ಇದುವರೆಗೆ 199 ಪಂದ್ಯಗಳಲ್ಲಿ ಆಡಿದ್ದಾರೆ. 172 ವಿಕೆಟ್ ಮತ್ತು 743 ರನ್ ಬಾರಿಸಿದ್ದಾರೆ. ಚೆನ್ನೈ ಸೂಪರ್ ಕಿಂಗ್ಸ್ ಪರ ಆರಂಭವಾದ ಇವರ ಐಪಿಎಲ್ ಜರ್ನಿ ಬಳಿಕ ಡೆಲ್ಲಿ ಕ್ಯಾಪಿಟಲ್ಸ್, ಪಂಜಾಬ್ ಕಿಂಗ್ಸ್ ತಂಡವನ್ನು ಪ್ರತಿನಿಧಿಸಿದ್ದರು. ಪ್ರಸ್ತುತ ರಾಜಸ್ಥಾನ್ ಪರ ಆಡುತ್ತಿದ್ದಾರೆ. ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ ನಿನ್ನೆ(ಗುರುವಾರ) ನಡೆದ ಪಂದ್ಯದಲ್ಲಿ ಸ್ಫೋಟಕ ಬ್ಯಾಟಿಂಗ್ ನಡೆಸಿ ಗಮನಸೆಳೆದಿದ್ದರು. ಕೇವಲ 19 ಎಸೆತಗಳಿಂದ 3 ಸಿಕ್ಸರ್ ಸಿಡಿಸಿ 29 ರನ್ ಬಾರಿಸಿದ್ದರು. ಆದರೆ, ಬೌಲಿಂಗ್ನಲ್ಲಿ ಯಶಸ್ಸು ಕಾಣಲಿಲ್ಲ. ಓವರ್ಗೆ 10ರ ಸರಾಸರಿಯಲ್ಲಿ ರನ್ ಬಿಟ್ಟು ಕೊಟ್ಟು ವಿಕೆಟ್ ಲೆಸ್ ಎನಿಸಿಕೊಂಡರು.
ಅಂಕಪಟ್ಟಿಯಲ್ಲಿ ಮಹತ್ವದ ಬದಲಾವಣೆ
ಪ್ರಸಕ್ತ ಸಾಗುತ್ತಿರುವ ಐಪಿಎಲ್ (IPL 2024) ಟೂರ್ನಿಯಲ್ಲಿ 9 ಪಂದ್ಯಗಳು ಮುಕ್ತಾಯಕಂಡಿದೆ. ಅಚ್ಚರಿ ಎಂದರೆ ಈ 9 ಪಂದ್ಯಗಳಲ್ಲಿಯೂ ತವರಿನ ತಂಡವೇ ಗೆಲುವು ಸಾಧಿಸಿದ್ದು. ಗುರುವಾರ ನಡೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್(Rajasthan Royals) ಸತತ 2 ಗೆಲುವು ದಾಖಲಿಸಿ ಅಂಕಪಟ್ಟಿಯಲ್ಲಿ(IPL 2024 Points Table) ಮತ್ತೆ ಹಿಡಿತ ಸಾಧಿಸಿದೆ. ಡೆಲ್ಲಿ(Delhi Capitals) ಸತತ 2 ಸೋಲು ಕಂಡರೂ ಕೂಡ 8ನೇ ಸ್ಥಾನದಲ್ಲಿದೆ.
ನೂತನ ಅಂಕಪಟ್ಟಿ
ತಂಡ | ಪಂದ್ಯ | ಗೆಲುವು | ಸೋಲು | ಅಂಕ |
ಚೆನ್ನೈ ಸೂಪರ್ ಕಿಂಗ್ಸ್ | 2 | 2 | 0 | 4 (+1.979) |
ರಾಜಸ್ಥಾನ್ ರಾಯಲ್ಸ್ | 2 | 2 | 0 | 4 (+0.800) |
ಸನ್ರೈಸರ್ಸ್ ಹೈದರಾಬಾದ್ | 2 | 1 | 1 | 2 (+0.675) |
ಕೋಲ್ಕೊತಾ ನೈಟ್ ರೈಡರ್ಸ್ | 1 | 1 | 0 | 2(+200) |
ಪಂಜಾಬ್ ಕಿಂಗ್ಸ್ | 2 | 1 | 1 | 2 (+0.025) |
ಆರ್‌ಸಿಬಿ | 2 | 1 | 1 | 2 (-0.180) |
ಗುಜರಾತ್ ಟೈಟಾನ್ಸ್ | 2 | 1 | 1 | 2 (-1.425) |
ಡೆಲ್ಲಿ ಕ್ಯಾಪಿಟಲ್ಸ್ | 2 | 0 | 2 | 0 (–0.528) |
ಮುಂಬೈ ಇಂಡಿಯನ್ಸ್ | 2 | 0 | 2 | 0 (-1000) |
ಲಕ್ನೋ ಸೂಪರ್ ಜೈಂಟ್ಸ್ | 1 | 0 | 1 | 0 (-1.000) |