Site icon Vistara News

Suryakumar Yadav: ಫಿಟ್ ಆದ ಸೂರ್ಯಕುಮಾರ್​​; ಈ ಪಂದ್ಯದಲ್ಲಿ ಕಣಕ್ಕೆ!

suryakumar yadav

ಬೆಂಗಳೂರು: ಐಪಿಎಲ್‌ನ 2024ರ(IPL 2024) ಆವೃತ್ತಿಯಲ್ಲಿ ಸತತ ಮೂರು ಸೋಲು ಕಂಡು ಕಂಗಾಲಾಗಿರುವ 5 ಬಾರಿಯ ಚಾಂಪಿಯನ್​ ಮುಂಬೈ ಇಂಡಿಯನ್ಸ್(mumbai indians)​ ತಂಡಕ್ಕೆ ಸಂತಸದ ಸುದ್ದಿಯೊಂದು ಲಭಿಸಿದೆ. ಹಾರ್ಡ್​ ಹಿಟ್ಟರ್​ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರು ಎನ್​ಸಿಎಯಿಂದ ಫಿಟ್​ನೆಸ್​ ಕ್ಲೀಯರೆನ್ಸ್ ಸರ್ಟಿಫಿಕೆಟ್‌​ ಪಡೆದಿದ್ದಾರೆ ಎನ್ನಲಾಗಿದೆ. ಭಾನುವಾರದ ಭಾನುವಾರ(ಏಪ್ರಿಲ್​ 7) ವಾಂಖೆಡೆ ಸ್ಟೇಡಿಯಂನಲ್ಲಿ ನಡೆಯುವ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಕಣಕ್ಕಿಳಿಯುವ ಸಾಧ್ಯತೆ ಇದೆ.

ಸೂರ್ಯಕುಮಾರ್​ ಯಾದವ್​ ಅವರ ಆಗಮನದಿಂದ ಮಧ್ಯಮ ಕ್ರಮಾಂಕ್ಕಕ್ಕೆ ಬಲ ಬಂದಂತಾಗಿದೆ. ಈ ಹಿಂದಿನ ಮೂರು ಪಂದ್ಯಗಳ ಸೋಲಿಗೂ ಕೂಡ ಮಧ್ಯಮ ಕ್ರಮಾಂಕದ ವೈಫಲ್ಯತೆ ಕಾರಣವಾಗಿತ್ತು. ಇದೀಗ ಸೂರ್ಯ ಎಂಟ್ರಿಯಿಂದ ಈ ಸಮಸ್ಯೆ ಬಗೆಹರಿದಂತಿದೆ. ಜನವರಿಯಲ್ಲಿ ಸ್ಪೋರ್ಟ್ಸ್ ಹರ್ನಿಯಾಕ್ಕಾಗಿ ತೊಡೆಸಂದು ಶಸ್ತ್ರಚಿಕಿತ್ಸೆಗೆ ಒಳಗಾದ ಸೂರ್ಯ ಅವರು ಐಪಿಎಲ್ ಆರಂಭಕ್ಕೂ ಮುನ್ನ ರಾಷ್ಟ್ರೀಯ ಕ್ರಿಕೆಟ್ ಅಕಾಡೆಮಿ (ಎನ್‌ಸಿಎ)ಸೇರಿದ್ದರು. ಇದೀಗ ದಿ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಪ್ರಕಾರ ಸೂರ್ಯನನ್ನು ಫಿಟ್ ಎಂದು ಘೋಷಿಸಲಾಗಿದೆ ಎಂದು ಹೇಳಲಾಗಿದೆ. ಆದರೆ ಬಿಸಿಸಿಐ ಅಧಿಕೃತವಾಗಿ ಫಿಟ್​ ಎಂದು ಘೋಷಿಸಿಲ್ಲ.

ಸೂರ್ಯಕುಮಾರ್‌ ಈ ವರೆಗೂ 60 ಟಿ20 ಪಂದ್ಯಗಳನ್ನಾಡಿದ್ದು, 171+ ಸ್ಟ್ರೈಕ್‌ರೇಟ್‌ನೊಂದಿಗೆ 2141 ರನ್‌ ಕಲೆಹಾಕಿದ್ದಾರೆ. ಅಂತಾರಾಷ್ಟ್ರೀಯ ಟಿ20ಯಲ್ಲಿ ಅವರು 4 ಶತಕಗಳನ್ನೂ ಬಾರಿಸಿದ್ದಾರೆ. ಟಿ20 ಬ್ಯಾಟಿಂಗ್​ ಶ್ರೇಯಾಂಕದಲ್ಲಿಯೂ ಸೂರ್ಯ ನಂ.1 ಸ್ಥಾನ ಪಡೆದಿದ್ದಾರೆ. ನಟರಾಜ ಶೈಲಿಯಲ್ಲಿ ಬ್ಯಾಟ್​ ಬೀಸುವ ಇವರು ಹಲವು ಪಂದ್ಯಗಳಲ್ಲಿ ಮುಂಬೈ ತಂಡಕ್ಕೆ ಸ್ಮರಣೀಯ ಗೆಲುವು ಕೂಡ ತಂದುಕೊಟ್ಟಿದ್ದಾರೆ. ಕಳೆದ ವರ್ಷ ದಕ್ಷಿಣ ಆಫ್ರಿಕಾ ಎದುರಿನ ಮೂರನೇ ಟಿ20 ಪಂದ್ಯದಲ್ಲಿ ಸೂರ್ಯಕುಮಾರ್​ ಎಡ ಪಾದದ ನೋವಿಗೆ ಸಿಲುಕಿದ್ದರು.

ಇದನ್ನೂ ಓದಿ IPL 2024: ಆರ್​ಸಿಬಿ ದಾಖಲೆ ಮುರಿದು ಐಪಿಎಲ್​ನ 2ನೇ ಗರಿಷ್ಠ ರನ್​ ರೆಕಾರ್ಡ್ ಮಾಡಿದ ಕೆಕೆಆರ್​ 

ಮುಂಬೈ ತಂಡ


ಹಾರ್ದಿಕ್ ಪಾಂಡ್ಯ (ನಾಯಕ), ರೋಹಿತ್ ಶರ್ಮಾ, ಡೆವಾಲ್ಡ್ ಬ್ರೆವಿಸ್, ಸೂರ್ಯಕುಮಾರ್ ಯಾದವ್, ಇಶಾನ್ ಕಿಶನ್, ಎನ್. ತಿಲಕ್ ವರ್ಮಾ, ಟಿಮ್ ಡೇವಿಡ್, ವಿಷ್ಣು ವಿನೋದ್, ಅರ್ಜುನ್ ತೆಂಡೂಲ್ಕರ್, ಶಮ್ಸ್ ಮುಲಾನಿ, ನೆಹಾಲ್ ವಧೇರಾ, ಜಸ್​ಪ್ರೀತ್​ ಬುಮ್ರಾ, ಕುಮಾರ್ ಕಾರ್ತಿಕೇಯ, ಪಿಯೂಷ್ ಚಾವ್ಲಾ, ಆಕಾಶ್ ಮಧ್ವಲ್, ಜೇಸನ್ ಬೆಹ್ರೆಂಡಾರ್ಫ್, ರೊಮಾರಿಯೋ ಶೆಫರ್ಡ್.

Exit mobile version