ಬೆಂಗಳೂರು: ಹೊಡಿಬಡಿ ಆಟವೆಂದೇ ಪರಿಗಣಿಸಲಾಗಿರುವ ಐಪಿಎಲ್ ಟಿ20 ಕ್ರಿಕೆಟ್ನಲ್ಲಿ ಬ್ಯಾಟ್ಸ್ಮನ್ಗಳದ್ದೇ ಪಾರುಪತ್ಯ. ಇದುವರೆಗಿನ 16 ಆವೃತ್ತಿಯ ಐಪಿಎಲ್ನಲ್ಲಿ ಅದೆಷ್ಟೋ ಆಟಗಾರರು ಆಡಿ ಹೋಗಿದ್ದಾರೆ. ಎಸೆತವೊಂದಕ್ಕೆ 6 ರನ್ ಬೇಕಿದ್ದಾಗ ಸಿಕ್ಸರ್ ಸಿಡಿಸಿ ತಂಡಕ್ಕೆ ಗೆಲುವು ತಂದು ಕೊಟ್ಟ ಆಟಗಾರರು ಕೂಡ ಈ ಲೀಗ್ನಲ್ಲಿದ್ದಾರೆ. ಹಾಗಿದ್ದರೆ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಟಾಪ್ 5 ಬ್ಯಾಟರ್ಗಳು ಯಾರೆಂದು ನೋಡೊಣ…
ಕ್ರಿಸ್ ಗೇಲ್
ಯುನಿವರ್ಸ್ ಖ್ಯಾತಿಯ ವಿಂಡೀಸ್ನ ಹಿರಿಯ ಎಡಗೈ ಬ್ಯಾಟರ್ ಕ್ರಿಸ್ ಗೇಲ್(Chris Gayle) ಅವರು ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರನಾಗಿದ್ದಾರೆ. ಕೆಕೆಆರ್, ಆರ್ಸಿಬಿ ಮತ್ತು ಪಂಜಾಬ್ ಕಿಂಗ್ಸ್ ತಂಡದ ಆಡಿರುವ ಗೇಲ್ ಒಟ್ಟು 142 ಪಂದ್ಯಗಳನ್ನು ಆಡಿ 357 ಸಿಕ್ಸರ್ ಸಿಡಿಸಿದ್ದಾರೆ. 4965 ರನ್ ಕೂಡ ಕಲೆಹಾಕಿದ್ದಾರೆ. ಆರ್ಸಿಬಿ ಪರ ಆಡುವ ವೇಳೆ ಅವರು ಹೆಚ್ಚಿನ ಖ್ಯಾತಿ ಗಳಿಸಿದ್ದರು.
ಇದನ್ನೂ ಓದಿ IPL 2024: ಐಪಿಎಲ್ ಚರಿತ್ರೆಯ ಬಹುದೊಡ್ಡ 5 ವಿವಾದಗಳು ಯಾವುದು?
ರೋಹಿತ್ ಶರ್ಮ
ಹಿಟ್ಮ್ಯಾನ್ ಖ್ಯಾತಿಯ ರೋಹಿತ್ ಶರ್ಮ(Rohit Sharma) ಅವರು ಐಪಿಎಲ್ ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಯಾದಿಯಲ್ಲಿ 2ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. 2008-2023ರ ವರೆಗಿನ ಐಪಿಎಲ್ ಟೂರ್ನಿಯಲ್ಲಿ ಒಟ್ಟು 257 ಸಿಕ್ಸರ್ ಬಾರಿಸಿದ್ದಾರೆ. ಪ್ರಸ್ತುತ ಮುಂಬೈ ಇಂಡಿಯನ್ಸ್ ಪರ ಆಡುವ ಇವರು ಈ ಬಾರಿಯ ಟೂರ್ನಿಯಲ್ಲಿಯೂ ಹಲವು ಸಿಕ್ಸರ್ ಬಾರಿಸುವ ಇರಾದೆಯಲ್ಲಿದ್ದಾರೆ.
ಎಬಿಡಿ ವಿಲಿಯರ್ಸ್
ಆರ್ಸಿಬಿ ತಂಡದ ಮಾಜಿ ಆಟಗಾರ, ಮಿಸ್ಟರ್ 360 ಡಿಗ್ರಿ ಬ್ಯಾಟಿಂಗ್ ಖ್ಯಾತಿಯ ಎಬಿಡಿ ವಿಲಿಯರ್ಸ್(AB de Villiers) ಅವರು 184 ಐಪಿಎಲ್ ಪಂದ್ಯಗಳಿಂದ 251 ಸಿಕ್ಸರ್ ಬಾರಿಸಿದ್ದಾರೆ. ಅವರ ಐಪಿಎಲ್ ಜರ್ನಿ ಆರಂಭವಾದದ್ದು ಡೆಲ್ಲಿ ತಂಡದ ಪರ. 3 ಶತಕ ಮತ್ತು 40 ಅರ್ಧಶತಕ ಬಾರಿಸಿ ಒಟ್ಟು 5162 ರನ್ ಕಲೆ ಹಾಕಿದ್ದಾರೆ. ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಸಾಧಕರ ಪಟ್ಟಿಯಲ್ಲಿ ಮೂರನೇ ಸ್ಥಾನ ಪಡೆದಿದ್ದಾರೆ.
ಇದನ್ನೂ ಓದಿ IPL 2024 : ಐಪಿಎಲ್ ಇತಿಹಾಸದಲ್ಲಿ ದಾಖಲಾಗಿರುವ ಅತಿವೇಗದ ಶತಕಗಳ ವಿವರ ಈ ಕೆಳಗಿನಂತಿದೆ
ಮಹೇಂದ್ರ ಸಿಂಗ್ ಧೋನಿ
ಕೂಲ್ ಕ್ಯಾಪ್ಟನ್ ಖ್ಯಾತಿಯ, 5 ಐಪಿಎಲ್ ಟ್ರೋಫಿ ಗೆದ್ದಿರುವ ಚೆನ್ನೈ ಸೂಪರ್ ಕಿಂಗ್ಸ್ ತಂಡದ ಮಹೇಂದ್ರ ಸಿಂಗ್ ಧೋನಿ(MS Dhoni) ಅವರು ಭರ್ತಿ 250 ಪಂದ್ಯಗಳಿಂದ 239 ಸಿಕ್ಸರ್ ಸಿಡಿಸಿದ್ದಾರೆ. ಈ ಬಾರಿಯ ಟೂರ್ನಿ ಅವರಿಗೆ ವಿದಾಯದ ಟೂರ್ನಿಯಾಗಿದೆ. ಒಟ್ಟು 5082* ರನ್ ಬಾರಿಸಿದ್ದಾರೆ.
ವಿರಾಟ್ ಕೊಹ್ಲಿ
ಕಿಂಗ್ ಖ್ಯಾತಿಯ ವಿರಾಟ್ ಕೊಹ್ಲಿ(Virat Kohli) ಟೂರ್ನಿಯಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ 5ನೇ ಸ್ಥಾನದಲ್ಲಿ ಕಾಣಿಸಿಕೊಂಡಿದ್ದಾರೆ. ಇದುವರೆಗೆ 234 ಸಿಕ್ಸರ್ ಬಾರಿಸಿದ್ದಾರೆ. ಅತ್ಯಧಿಕ ಶತಕ ಬಾರಿಸಿದ ದಾಖಲೆ ಕೊಹ್ಲಿಯ ಹೆಸರಿನಲ್ಲಿದೆ. ಅವರು ಐಪಿಎಲ್ನಲ್ಲಿ 7 ಶತಕ ಬಾರಿಸಿದ್ದಾರೆ. ಜತೆಗೆ 7263 ರನ್ ಕೂಡ ಗಳಿಸಿದ್ದಾರೆ. ಆರಂಭಿಕ ಐಪಿಎಲ್ನಿಂದ ಹಿಡಿದು ಇದುವರೆಗಿನ ಐಪಿಎಲ್ ಟೂರ್ನಿ ತನಕ ಆರ್ಸಿಬಿ ಒಂದೇ ತಂಡದ ಪರ ಆಡಿದ ಕೀರ್ತಿಯೂ ಇವರದ್ದು. ಇವರನ್ನು ಹೊರತುಪಡಿಸಿ ಉಳಿದ ಯಾವುದೇ ಆಟಗಾರನೂ ಒಂದೇ ತಂಡದ ಪರ ಇಷ್ಟು ವರ್ಷ ಆಡಿಲ್ಲ.
ಇದನ್ನೂ ಓದಿ IPL 2024: ಐಪಿಎಲ್ನ 17 ಆವೃತ್ತಿಗಳನ್ನು ಆಡುವ ಆಟಗಾರರಿವರು!