Site icon Vistara News

IPL 2024: ಐಪಿಎಲ್​ ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು

IPL 2024

ಬೆಂಗಳೂರು: 17ನೇ ಆವೃತ್ತಿಯ ಐಪಿಎಲ್(IPL 2024)​ ಟೂರ್ನಿ ಆರಂಭಕ್ಕೆ ಇನ್ನು ಭರ್ತಿ ಒಂದು ವಾರ ಬಾಕಿ ಇದೆ. ಮುಂದಿನ ಶುಕ್ರವಾರ ಅಂದರೆ ಮಾರ್ಚ್​ 22ರಂದು ಟೂರ್ನಿಗೆ ಚಾಲನೆ ಸಿಗಲಿದೆ. ಇದುವರೆಗಿನ ಐಪಿಎಲ್​ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ಟಾಪ್​ 5 ಬೌಲರ್​ಗಳು ಯಾರೆಂಬ ಮಾಹಿತಿ ಇಂತಿದೆ.

ಯಜುವೇಂದ್ರ ಚಹಲ್


ಸ್ಪಿನ್ನರ್​ ಯಜುವೇಂದ್ರ ಚಹಲ್(Yuzvendra Chahal) ಅವರು ಇದುವರೆಗಿನ ಐಪಿಎಲ್​ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ ಮೊದಲ ಸ್ಥಾನ ಪಡೆದಿದ್ದಾರೆ. ಇದುವರೆಗೆ ಒಟ್ಟು 145 ಐಪಿಎಲ್​ ಪಂದ್ಯಗಳನ್ನಾಡಿ 187 ವಿಕೆಟ್​ ಕಿತ್ತಿದ್ದಾರೆ. ಮುಂಬೈ ಇಂಡಿಯನ್ಸ್​ ಪರ ಐಪಿಎಲ್​ ಜರ್ನಿ ಆರಂಭಿಸದ ಅವರು ಆ ಬಳಿಕ ಆರ್​ಸಿಬಿ ಮತ್ತು ರಾಜಸ್ಥಾನ್​ ರಾಯಲ್ಸ್​ ಪರ ಆಡಿದ್ದಾರೆ.


ಡ್ವೇನ್ ಬ್ರಾವೋ


ಚೆನ್ನೈ ಸೂಪರ್​ ಕಿಂಗ್ಸ್​ ತಂಡದ ಮಾಜಿ ಆಟಗಾರ ಡ್ವೇನ್ ಬ್ರಾವೋ(DJ Bravo) ಅವರು ಐಪಿಎಲ್​ ಕ್ರಿಕೆಟ್​ ಇತಿಹಾಸದಲ್ಲಿ ಅತಿ ಹೆಚ್ಚು ವಿಕೆಟ್​ ಕಿತ್ತ ಬೌಲರ್​ಗಳ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಒಟ್ಟು ನಾಲ್ಕು ಐಪಿಎಲ್​ ಫ್ರಾಂಚೈಸಿ ಪರ ಆಡಿ 183 ವಿಕೆಟ್​ ಕಿತ್ತಿದ್ದಾರೆ. 22 ರನ್​ಗೆ 4 ವಿಕೆಟ್​ ಉರುಳಿಸಿದ್ದು ಗರಿಷ್ಠ ವೈಯಕ್ತಿಕ ದಾಖಲೆಯಾಗಿದೆ.


ಪಿಯೂಷ್​ ಚಾವ್ಲಾ


ಐಪಿಎಲ್​ನಲ್ಲಿ ಅತಿ ಹೆಚ್ಚು ವಿಕೆಟ್​​ ಪಡೆದ ಪಟ್ಟಿಯಲ್ಲಿ ಪಿಯೂಷ್​ ಚಾವ್ಲಾ(PP Chawla) ಮೂರನೇ ಸ್ಥಾನ ಪಡೆದಿದ್ದಾರೆ. 181 ಐಪಿಎಲ್​ ಪಂದ್ಯಗಳನ್ನು ಆಡಿ 179 ವಿಕೆಟ್​ ಪಡೆದಿದ್ದಾರೆ. 17 ರನ್​ಗೆ 4 ವಿಕೆಟ್​ ಉರುಳಿಸಿದ್ದು ಗರಿಷ್ಠ ವೈಯಕ್ತಿಕ ದಾಖಲೆಯಾಗಿದೆ.

ಇದನ್ನೂ ಓದಿ IPL 2024: ಬೆಂಗಳೂರಿಗೆ ಬಂದಿಳಿದ ಆರ್ಚರ್​; ಕೊಹ್ಲಿ ಸ್ಥಾನಕ್ಕೆ ಬದಲಿ ಆಟಗಾರನಾಗಿ ಕಣಕ್ಕೆ!


ಅಮೀತ್​ ಮಿಶ್ರಾ


ಐಪಿಎಲ್​ ಆಡುತ್ತಿರುವ ಅತ್ಯಂತ ಹಿರಿಯ ಆಟಗಾರರಲ್ಲಿ ಒಬ್ಬರಾದ ಅಮೀತ್​ ಮಿಶ್ರಾ(A Mishra) ಅವರು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಕಿತ್ತವರ ಪೈಕಿ 4ನೇ ಸ್ಥಾನ ಪಡೆದಿದ್ದಾರೆ. ಇದುವರೆಗೆ 3 ಫ್ರಾಂಚೈಸಿ ಪರ ಕಣಕ್ಕಿಳಿದು 161 ಪಂದ್ಯಗಳಿಂದ 173 ವಿಕೆಟ್​ ಪಡೆದಿದ್ದಾರೆ.


ಆರ್​.ಅಶ್ವಿನ್​


ಇತ್ತೀಚೆಗೆ ಟೆಸ್ಟ್​ ಕ್ರಿಕೆಟ್​ನಲ್ಲಿ 500 ವಿಕೆಟ್​ಗಳ ಗಡಿ ದಾಟಿದ ಆರ್​.ಅಶ್ವಿನ್​ ಅವರು ಐಪಿಎಲ್​ನಲ್ಲಿ 171 ವಿಕೆಟ್​ ಕಿತ್ತು ಟೂರ್ನಿಯಲ್ಲಿ ಅತ್ಯಧಿಕ ವಿಕೆಟ್​ ಪಡೆದ ಸಾಧಕರ ಪಟ್ಟಿಯಲ್ಲಿ ಸದ್ಯ 5ನೇ ಸ್ಥಾನದಲ್ಲಿದ್ದಾರೆ. 17ನೇ ಆವೃತ್ತಿಯಲ್ಲಿಯೂ ಆಡಲಿರುವ ಅವರು ತಮ್ಮ ವಿಕೆಟ್ ಸಂಖ್ಯೆಯನ್ನು ಮತ್ತಷ್ಟು ಹೆಚ್ಚಿಸುವ ನಿರೀಕ್ಷೆಯಲ್ಲಿದ್ದಾರೆ.​

Exit mobile version