ಮುಂಬಯಿ: ಕಳೆದ ಆವೃತ್ತಿಯ ತನಕ ಐಪಿಎಲ್(IPL 2024) ಶೀರ್ಷಿಕೆ ಪ್ರಾಯೋಜಕತ್ವ(IPL 2024 sponsor) ಹೊಂದಿದ್ದ ಟಾಟಾ ಸಂಸ್ಥೆ ಈ ಒಪ್ಪಂದದಿಂದ ಹಿಂದೆ ಸರಿದ ಕಾರಣ ಬಿಸಿಸಿಐ(BCCI) ಹೊಸ ಪ್ರಾಯೋಜಕತ್ವದ ಹಕ್ಕುಗಳು ಬಿಡ್‌ಗೆ ಸಿದ್ಧವಾಗಿದೆ ಎಂದು ಕೆಳ ದಿನಗಳ ಹಿಂದೆ ಅಧಿಕೃತ ಪ್ರಕಟಣೆಯಲ್ಲಿ ತಿಳಿಸಿತ್ತು. ಇದೀಗ ಬಿಡ್‌ದಾರರಿಗೆ ಕಠಿಣ ಷರತ್ತುಗಳನ್ನು ವಿಧಿಸಿದೆ.
ಐಪಿಎಲ್ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಸಿಸಿಐ ಇತ್ತೀಚೆಗಷ್ಟೇ ಹೊಸ ಟೆಂಡರ್‌ಗಳನ್ನು ಸಹ ಬಿಡುಗಡೆ ಮಾಡಿತ್ತು. 2021ರಿಂದ 2024ರ ಸೀಸನ್ವರೆಗೂ ಟಾಟಾ ಗ್ರೂಪ್‌ನೊಂದಿಗೆ ಒಪ್ಪಂದವಾಗಿತ್ತು. ಇದೀಗ ಟಾಟಾ ಗುಡ್ಬೈ ಹೇಳುತ್ತಿರುವ ಹಿನ್ನೆಲೆಯಲ್ಲಿ ಹೊಸ ಟೆಂಡರ್‌ಗಳನ್ನು ಬಿಡುಗಡೆ ಮಾಡಿತ್ತು. ರೇಸ್ನಲ್ಲಿ ಮತ್ತೆ ವಿವೋ ಕೂಡ ಕಾಣಿಸಿಕೊಂಡಿತ್ತು. ಆದರೆ ಚೀನಾದ ಕಂಪನಿಗಳು ಹಾಗೂ ಚೀನಾ ಕಂಪೆನಿಯೊಂದಿಗೆ ಶೇರ್ ಹೊಂದಿರುವ ಯಾವುದೇ ಕಂಪೆನಿಗಳ ಬಿಡ್ಗಳನ್ನು ಪರಿಗಣನೆಗೆ ತೆಗೆದುಕೊಳ್ಳುವುದಿಲ್ಲ ಎಂದು ಹೇಳಿದೆ. ಭಾರತ ಮತ್ತು ಚೀನಾ ನಡುವಿನ ರಾಜಕೀಯ ಉದ್ವಿಗ್ನತೆಯಿಂದಾಗಿ ವಿವೋವನ್ನು ಐಪಿಎಲ್ ಪ್ರಯೋಜಕತ್ವದಿಂದ ಈ ಹಿಂದೆ ಕೈ ಬಿಡಲಾಗಿತ್ತು.
ಸಂಪೂರ್ಣವಾಗಿ ಭಾರತ ಅಥವಾ ಚೀನಾದೊಂದಿಗೆ ಮುಕ್ತಾವಾರಿರುವ ಯಾವುದೇ ಕಂಪೆನಿಗಳು ಕೂಡ ಶೀರ್ಷಿಕೆ ಪ್ರಾಯೋಜಕತ್ವಕ್ಕಾಗಿ ಬಿಡ್ ಮಾಡಬಹುದಾಗಿದೆ ಎಂದು ಬಿಸಿಸಿಐ ತಿಳಿಸಿರುವುದಾಗಿ ಕ್ರಿಕ್ಬಝ್ ವರದಿ ಮಾಡಿದೆ. ಆದರೆ ಬಿಸಿಸಿಐ ಇದುವರೆಗೆ ಯಾವುದೇ ಷರತ್ತುಗಳ ಬಗೆಗಿನ ಅಧಿಕೃತ ಮಾಹಿತಿ ನೀಡಿಲ್ಲ.
ಇದನ್ನೂ ಓದಿ IPL 2024: ಹಾರ್ದಿಕ್ ಪಾಂಡ್ಯ ಅತಿರೇಕದ ವರ್ತನೆ ಸರಿ ಎನಿಸಿರಲಿಲ್ಲ ಎಂದ ಶಮಿ
ಐಪಿಎಲ್ ಶೀರ್ಷಿಕೆ ಪ್ರಾಯೋಜಕರ ಪಟ್ಟಿ
- ಡಿಎಲ್ಎಫ್ (2008 ರಿಂದ 2012)
- ಪೆಪ್ಸಿ (2013 ರಿಂದ 2015)
- ವಿವೋ ಐಪಿಎಲ್ (2016 ರಿಂದ 2017)
- ವಿವೋ ಐಪಿಎಲ್ (2018 ರಿಂದ 2019)
- ಡ್ರೀಮ್ 11 (2020)
- ವಿವೋ ಐಪಿಎಲ್ (2021)
- ಟಾಟಾ ಐಪಿಎಲ್ (2022-2023)
ಮತ್ತೆ ಕೇಳಿ ಬಂದ ಪತಂಜಲಿ ಹೆಸರು
ಯೋಗಗುರು ಬಾಬಾ ರಾಮ್‌ದೇವ್ ನೇತೃತ್ವದ ಪತಂಜಲಿ ಸಂಸ್ಥೆ ಮತ್ತೆ ಐಪಿಎಲ್ ಟೈಟಲ್ ಸ್ಪಾನ್ಸರ್ ಸ್ಪರ್ಧಾಕಣಕ್ಕೆ ಇಳಿಯುವುದಾಗಿ ಮಾತುಗಳು ಕೇಳಿ ಬಂದಿವೆ. ಈ ಹಿಂದೆ ವಿವೋ ಸಂಸ್ಥೆಯನ್ನು ಕೈಬಿಟ್ಟಾಗಲೂ ಕೂಡ ಪತಂಜಲಿ ಹೆಸರು ಕೇಳಿ ಬಂದಿತ್ತು. ಆದರೆ ಅಂತಿಮ ಕ್ಷಣದಲ್ಲಿ ಅದು ಹಿಂದೆ ಸರಿದಿತ್ತು. ಇದೀಗ ಈ ಬಾರಿಯೂ ಪತಂಜಲಿ ಹೆಸರು ಮುನ್ನಲೆಗೆ ಬಂದಿದೆ.
ಪತಂಜಲಿಗೇಕೆ ಆಸಕ್ತಿ?
ಔಷಧ ಸೇರಿದಂತೆ ಹಲವಾರು ಉತ್ಪನ್ನಗಳನ್ನು ತಯಾರಿಸಿ ಮಾರುತ್ತಿರುವ ಪತಂಜಲಿ ಸಂಸ್ಥೆ, ಕಳೆದ ಕೆಲವು ವರ್ಷಗಳಿಂದ ಭಾರತದಲ್ಲಿ ಸೇರಿ ವಿದೇಶದಲ್ಲಿಯೂ ತನ್ನ ಬ್ರಾಂಡ್ ಮೌಲ್ಯವನ್ನು ಕಳೆದುಕೊಳ್ಳುತ್ತಿದೆ. ಬಿಸ್ಕಿಟ್ ಹಾಗೂ ನೂಡಲ್ಸ್, ಪೇಸ್ಟ್, ಸೋಪ್ ಸೇರಿ ಬಹುತೇಕ ಎಲ್ಲ ಮಾದರಿಯ ಪದಾರ್ಥಗಳ ಮಾರಾಟ ಗಣನೀಯವಾಗಿ ತಗ್ಗಿದೆ. ಗುಣಮಟ್ಟ ಕಡಿಮೆ ಆಗಿರುವುದು ಇಲ್ಲಿ ಸಮಸ್ಯೆಯಾಗಿದೆ ಎಂದು ಮೂಲಗಳು ವರದಿ ಮಾಡಿವೆ. ಕಳೆದುಕೊಂಡ ಈ ವರ್ಚಸ್ಸನ್ನು ಐಪಿಎಲ್ ಮೂಲಕ ಹೆಚ್ಚಿಸಿಕೊಳ್ಳಲು ಹಾಗೆಯೇ ಜಾಗತಿಕವಾಗಿ ಕಂಪೆನಿಯನ್ನು ಜನಪ್ರಿಯಗೊಳಿಸಲೂ ನಿಟ್ಟಿನಲ್ಲಿ ಪತಂಜಲಿ ಐಪಿಎಲ್ ಶೀರ್ಷಿಕೆ ಪಡೆಯುವ ಲೆಕ್ಕಾಚಾರದಲ್ಲಿದೆ. ಮುಂದಿನ ವರ್ಷ ನಡೆಯುವ ಐಪಿಎಲ್ ಟೂರ್ನಿ ಮಾರ್ಚ್ ಅಂತ್ಯಕ್ಕೆ ಆರಂಭವಾಗುವ ನಿರೀಕ್ಷೆ ಇದೆ. ಇದಕ್ಕೂ ಮುನ್ಗನ ಬಿಸಿಸಿಐ ಸೂಕ್ತ ಪ್ರಾಯೋಜಕರನ್ನು ಹುಡುಕಬೇಕಿದೆ.