Site icon Vistara News

IPL 2025: ಮುಂಬೈ ತಂಡದಿಂದ ಪಾಂಡ್ಯಗೆ ಗೇಟ್​ಪಾಸ್​; ಸೂರ್ಯಕುಮಾರ್​ಗೆ ನಾಯಕತ್ವ?

IPL 2025

IPL 2025: Hardik Pandya Likely To Be Released By Mumbai Indians, Suryakumar In Line As New Captain

ಮುಂಬಯಿ: ಮುಂದಿನ ಆವೃತ್ತಿಯ ಐಪಿಎಲ್(IPL 2025)​ ಟೂರ್ನಿ ಆರಂಭಕ್ಕೂ ಮುನ್ನವೇ ಮುಂಬೈ ಇಂಡಿಯನ್ಸ್(Mumbai Indians)​ ತಂಡದಲ್ಲಿ ಮಹತ್ವದ ಬದಲಾವಣೆಯೊಂದು ಸಂಭವಿಸುವ ಸೂಚನೆ ಲಭಿಸಿದೆ. ನಾಯಕ ಹಾರ್ದಿಕ್​ ಪಾಂಡ್ಯರನ್ನು (Hardik Pandya) ಈ ಹುದ್ದೆಯಿಂದ ಮಾತ್ರವಲ್ಲದೆ, ತಂಡದಿಂದಲೇ ಕೈಬಿಡಲು ಫ್ರಾಂಚೈಸಿ ನಿರ್ಧರಿಸಿದೆ ಎಂದು ವರದಿಯಾಗಿದೆ.

ಕಳೆದ 17ನೇ ಆವೃತ್ತಿಯಲ್ಲಿ ಆಲ್‌ರೌಂಡರ್‌ ಹಾರ್ದಿಕ್‌ ಪಾಂಡ್ಯ ಅವರನ್ನು ದಿಢೀರ್​ ಆಗಿ ಮುಂಬೈ ಇಂಡಿಯನ್ಸ್‌ ತಂಡದ ನಾಯಕನನ್ನಾಗಿ ನೇಮಿಸಿ, 5 ಬಾರಿ ಕಪ್​ ಗೆಲ್ಲಿಸಿದ ರೋಹಿತ್​(rohit sharma) ಅವರನ್ನು ನಾಯಕನ ಸ್ಥಾನದಿಂದ ಕೆಳಗಿಳಿಸಲಾಗಿತ್ತು. ಇದು ರೋಹಿತ್‌ ಅಭಿಮಾನಿಗಳು ಸೇರಿ ತಂಡದ ಸಹ ಆಟಗಾರರಿಗೂ ತೀವ್ರ ನೋವುಂಟು ಮಾಡಿತ್ತು. ಇದೇ ವಿಚಾರವಾಗಿ ಮುಂಬೈ ಫ್ರಾಂಚೈಸಿ ವಿರುದ್ಧ ತಮ್ಮದೇ ಅಭಿಮಾನಿಗಳು ಆಕ್ರೋಶ ಕೂಡ ವ್ಯಕ್ತಪಡಿಸಿದ್ದರು. ಇದೀಗ ಸೂರ್ಯಕುಮಾರ್​ ಯಾದವ್(Suryakumar Yadav)​ ಅವರನ್ನು ಮುಂದಿನ ಆವೃತ್ತಿಗೆ ನಾಯಕನನ್ನಾಗಿ ಮಾಡಲು ಮುಂಬೈ ಫ್ರಾಂಚೈಸಿ ಸಿದ್ಧತೆ ನಡೆಸಿದೆ ಎಂದು ಮೂಲಗಳು ಮಾಹಿ ನೀಡಿದೆ.

ರೋಹಿತ್​ ಬಳಿಕ ಹಾರ್ದಿಕ್‌ ಪಾಂಡ್ಯ ಅವರನ್ನು ಭಾರತದ ಭವಿಷ್ಯದ ನಾಯಕ ಎಂದು ಪರಿಗಣಿಸಲಾಗಿತ್ತು. ಇದೇ ಕಾರಣದಿಂದ ಮುಂಬೈ ಫ್ರಾಂಚೈಸಿ ಅವರನ್ನು ಗುಜರಾತ್​ ತಂಡದಿಂದ ಕರೆತಂದು ನಾಉಕನ ಸ್ಥಾನ ನೀಡಿತ್ತು. ಆದರೆ, ಇದೀಗ ಭಾರತ ತಂಡಕ್ಕೆ ಸೂರ್ಯಕುಮಾರ್​ ನಾಯಕನಾಗಿದ್ದಾರೆ. ಹೀಗಾಗಿ ಇವರಿಗೆ ನಾಯಕತ್ವ ನೀಡಲು ಫ್ರಾಂಚೈಸಿ ಮುಂದಾಗಿದೆ ಎನ್ನಲಾಗಿದೆ.

ಇದನ್ನೂ ಓದಿ IPL 2025: ಇನ್ನು ಮುಂದೆ ಹೀಗೆ ಮಾಡಿದರೆ ವಿದೇಶಿ ಆಟಗಾರರಿಗೆ ಐಪಿಎಲ್​ನಿಂದ 2 ವರ್ಷ ನಿಷೇಧ?

ಸೂರ್ಯಕುಮಾರ್​ ಅವರಿಗೆ ನಾಯಕತ್ವ ನೀಡಿದರೆ ರೋಹಿತ್​ ಅಭಿಮಾನಿಗಳು ಕೂಡ ಅವರಿಗೆ ಬೆಂಬಲ ಸೂಚಿಸಲಿದ್ದಾರೆ. ರೋಹಿತ್​ ಅವರ ಆಪ್ತರೂ ಆಗಿರುವ ಸೂರ್ಯನಿಗೆ ನಾಯಕನ ಸ್ಥಾನ ನೀಡಿದರೆ ರೋಹಿತ್​ ಮುಂಬೈ ತಂಡ ತೊರೆಯಲ್ಲ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ರೋಹಿತ್​ ಅವರನ್ನು ಅಂದು ನಾಯಕತ್ವದಿಂದ ಕೆಳಗಿಳಿಸಿದ ವೇಳೆ ಸೂರ್ಯ ಸಾಮಾಜಿಕ ಜಾಲತಾಣದಲ್ಲಿ ಒಡೆದು ಹೋದ ಹೃದಯದ ಎಮೊಜಿ ಹಾಕಿ ಅಸಮಾಧಾನ ಹೊರಹಾಕಿದ್ದರು.

ಪಾಂಡ್ಯ ಅವರನ್ನು ನಾಯಕತ್ವದಿಂದ ಮಾತ್ರವಲ್ಲ ತಂಡದಿಂದಲೇ ಕೈಬಿಡಲು ಮುಂದಾಗಿದೆ ಎನ್ನುವ ಮಾತುಗಳು ಕೂಡ ಕೇಳಿಬಂದಿದೆ. ಗುಜರಾತ್‌ ಟೈಟಾನ್ಸ್‌ ತಂಡವನ್ನು ಚೊಚ್ಚಲ ಪ್ರಯತ್ನದಲ್ಲೇ ಚಾಂಪಿಯನ್​ ಪಟ್ಟಕ್ಕೇರಿಸಿದ ಮತ್ತು ಒಮ್ಮೆ ಫೈನಲ್​ ತಲುಪಿಸಿದ ಸಾಧನೆ ಪಾಂಡ್ಯ ಅವರದ್ದಾಗಿತ್ತು. ಒಂದೊಮ್ಮೆ ಪಾಂಡ್ಯ ಅವರನ್ನು ಮುಂಬೈ ತಂಡದಿಂದ ಕೈ ಬಿಟ್ಟರೆ ಅವರು ಯಾವ ತಂಡ ಸೇರಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

ಪಾಂಡ್ಯ ಅವರಿಗೆ ಭಾರತ ಟಿ20 ತಂಡದ ನಾಯಕತ್ವ ನೀಡದಿರಲು ಪ್ರಮುಖ ಕಾರಣ ಅವರ ಫಿಟ್ನೆಸ್‌ ಸಮಸ್ಯೆ. ಪಾಂಡ್ಯ ತಮ್ಮ 8 ವರ್ಷಗಳ ಕ್ರಿಕೆಟ್​ ವೃತ್ತಿಬದುಕಿನಲ್ಲಿ ಹಲವು ಬಾರಿ ಗಾಯದ ಸಮಸ್ಯೆಗೆ ತುತ್ತಾಗಿ ತಂಡದಿಂದ ಹೊರಗುಳಿದಿದ್ದರು. ಕಳೆದ ವರ್ಷ ನಡೆದಿದ್ದ ಏಕದಿನ ವಿಶ್ವಕಪ್ ಟೂರ್ನಿಯಲ್ಲಿಯೂ ಗಾಯಗೊಂಡು ಟೂರ್ನಿಯಿಂದ ಹೊರಬಿದ್ದಿದ್ದರು. ಪದೇಪದೆ ಗಾಯಕ್ಕೆ ತುತ್ತಾಗುವ ಕಾರಣ ಪಾಂಡ್ಯ ನೇಮಕಕ್ಕೆ ಬಿಸಿಸಿಐನ ಕೆಲ ಪ್ರಮುಖ ಅಧಿಕಾರಿಗಳು ಹಾಗೂ ಆಯ್ಕೆ ಸಮಿತಿಯ ಕೆಲವರು ವಿರೋಧ ವ್ಯಕ್ತಪಡಿಸಿದ್ದಾರೆ ಎನ್ನಲಾಗಿದೆ.

Exit mobile version