Site icon Vistara News

IPL 2025: ರಾಹುಲ್​ ಆರ್​ಸಿಬಿಗೆ, ಪಂತ್​ ಸಿಎಸ್​ಕೆ ಸೇರ್ಪಡೆ ಖಚಿತ

IPL 2025

IPL 2025: KL Rahul in RCB, Rishabh Pant in CSK? IPL Reports!

ಬೆಂಗಳೂರು: ಮುಂದಿನ ವರ್ಷ ನಡೆಯುವ 18ನೇ ಆವೃತ್ತಿಯ ಐಪಿಎಲ್​ ಟೂರ್ನಿಗೆ(IPL 2025 Mega Auction) ಇದೇ ವರ್ಷಾಂತ್ಯದಲ್ಲಿ ಆಟಗಾರರ ಮಿನಿ ಹರಾಜು ನಡೆಯಲಿದೆ. ಈಗಾಗಲೇ ಕೆಲ ಫ್ರಾಂಚೈಸಿಗಳು ಸ್ಟಾರ್​ ಆಟಗಾರರನ್ನು ಸಂಪರ್ಕಿಸಿದ್ದು ತಮ್ಮ ತಂಡಕ್ಕೆ ಸೆಳೆಯುವ ಕಸರತ್ತು ಆರಂಭಿಸಿವೆ. ಈ ಮಧ್ಯೆ ಕನ್ನಡಿಗ ಕೆ.ಎಲ್​ ರಾಹುಲ್​(KL Rahul) ತವರು ತಂಡವಾದ ಆರ್​ಸಿಬಿಗೆ, ಡೆಲ್ಲಿ ಕ್ಯಾಪಿಟಲ್ಸ್​ ತಂಡದ ರಿಷಭ್​ ಪಂತ್​ ಚೆನ್ನೈ ಸೂಪರ್​ ಕಿಂಗ್ಸ್​ಗೆ ಸೇರ್ಪಡೆಗೊಳ್ಳಲಿದ್ದಾರೆ ಎಂದು ಸಾಮಾಜಿಕ ಜಾಲತಾಣದಲ್ಲಿ ಭಾರೀ ಚರ್ಚೆಗಳು ಆರಂಭವಾಗಿದೆ.

ಈ ಬಾರಿ ಎಲ್ಲ 10 ತಂಡಗಳಿಗೆ ಗರಿಷ್ಠ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಬಿಸಿಸಿಐ ಅವಕಾಶ ಕಲ್ಪಿಸಲಿದೆ ಎಂದು ವರದಿಯಾಗಿದೆ. ಜತೆಗೆ ಹರಾಜಿನಲ್ಲಿ ಒಂದು ರೈಟ್​ ಟು ಮ್ಯಾಚ್​ (ಆರ್​ಟಿಎಂ) ಕಾರ್ಡ್​ ಬಳಸಲು ಅವಕಾಶ ನೀಡಲಾಗುತ್ತದೆ ಎನ್ನಲಾಗಿದೆ. ಆಟಗಾರರು ಮೂಲ ತಂಡವನ್ನು ತೊರೆದು ಬೇರೆ ತಂಡದ ಪರ ಆಡಲು ಬಯಸಿದರೆ ಇದಕ್ಕೆ ಫ್ರಾಂಚೈಸಿ ಕೂಡ ಒಪ್ಪಿಗೆ ನೀಡಬೇಕು ಎಂಬ ನಿಯಮ ಚಾಲ್ತಿಯಲ್ಲಿರುವ ಕಾರಣ ಕೆಲ ಆಟಗಾರರು ತಮ್ಮನ್ನು ಸಂಪರ್ಕಿಸಿದ ತಂಡ ಸೇರಲು ತುದಿಗಾಲಲ್ಲಿ ನಿಂತಿದ್ದಾರೆ ಎನ್ನಲಾಗಿದೆ.

ಕೆಲ ಫ್ರಾಂಚೈಸಿಗಳು 6-8 ಆಟಗಾರರನ್ನೂ ರಿಟೇನ್​ ಮಾಡಿಕೊಳ್ಳಲು ಅವಕಾಶ ನೀಡುವಂತೆ ಒತ್ತಾಯಿಸಿದ್ದಾರೆ. ಆದರೆ, ಐಪಿಎಲ್​ ಮತ್ತು ಬಿಸಿಸಿಐ ಕೇವಲ 3 ಆಟಗಾರರನ್ನು ರಿಟೇನ್​ ಮಾಡಿಕೊಳ್ಳುವ ಅವಕಾಶ ಮಾತ್ರ ನೀಡಲಿದೆ ಎನ್ನಲಾಗಿದೆ. ಒಂದೊಮ್ಮೆ 6-8 ಆಟಗಾರರ ರಿಟೇನ್​ಗೆ ಅವಕಾಶ ಕೊಟ್ಟರೆ ಸ್ಟಾರ್​ ಆಟಗಾರರು ಕೆಲ ಸೀಮಿತ ತಂಡದಲ್ಲಿಯೇ ಉಳಿದುಕೊಳ್ಳುತ್ತಾರೆ. ಹೀಗಾಗಿ 3 ರಿಟೇನ್​ಗೆ ಮಾತ್ರ ಅವಕಾಶ ಸಿಗಬಹುದು.

ಆರ್​ಸಿಬಿ ಸೇರಲಿದ್ದಾರಾ ರಾಹುಲ್​?

ಲಕ್ನೋ ತಂಡದ ಮಾಲಿಕ ಗೋಯೆಂಕಾ ತೋರಿದ್ದ ವರ್ತನೆನಿಂದ ಬೇಸರಗೊಂಡಿರು ರಾಹುಲ್ ಈ ಬಾರಿ ಲಕ್ನೋ ತೊರೆಯುವುದು ಖಚಿತವಾಗಿದೆ. ಮೂಲ್ಳ ಪ್ರಕಾರ ಅವರು ಆರ್​ಸಿಬಿ ತಂಡ ಸೇರಲಿದ್ದಾರೆ ಎನ್ನಲಾಗಿದೆ. ಆರ್​ಸಿಬಿ ಪರ ಆಡುವುದು ಕೂಡ ಅವರ ಬಯಕೆಯಾಗಿದೆ. ಇದೇ ವರ್ಷ ನಡೆದಿದ್ದ ಐಪಿಎಲ್​ ವೇಳೆ ಆರ್.ಅಶ್ವಿನ್ ಜತೆಗಿನ ಕುಟ್ಟಿ ಸ್ಟೋರೀಸ್ ಕಾರ್ಯಕ್ರಮದಲ್ಲಿ ಮಾತನಾಡಿದ್ದ ಕೆಎಲ್ ರಾಹುಲ್, 2013ರಲ್ಲಿ ವಿರಾಟ್ ಕೊಹ್ಲಿ ಅವರು ತನ್ನನ್ನು ಆರ್​ಸಿಬಿ ತಂಡಕ್ಕೆ ಸೇರಿಸಿಕೊಂಡರು. ನಾನು ಬೆಂಗಳೂರು ತಂಡದಲ್ಲಿ ಆಡಲು ಇಷ್ಟಪಡುತ್ತೇನೆ. ನಾನು ಅಲ್ಲಿದಂದಲೇ ಈ ಪಯಣ ಆರಂಭಿಸಿದೆ. ಅಲ್ಲಿಯೇ ಇದನ್ನು ಅಂತ್ಯಗೊಳಿಸಲು ಬಯುಸುತ್ತೇನೆ. ಅದು ತನ್ನ ತಲೆಯಲ್ಲಿದೆ ಎಂದು ಹೇಳಿದ್ದರು. 

ರಾಹುಲ್​ ಆರ್​ಸಿಬಿ ಸೇರಲಿದ್ದಾರೆ ಎಂಬ ಸುದ್ದಿ ಕೇಳಿದ್ದೇ ತಡ ಕನ್ನಡಿಗರು ಮತ್ತು ಆರ್​ಸಿಬಿ ಅಭಿಮಾನಿಗಳು ಆರ್​ಸಿಬಿ ಜೆರ್ಸಿಯಲ್ಲಿ ರಾಹುಲ್​ ಅವರ ಫೋಟೊ ಎಡಿಟ್​ ಮಾಡಿ ತವರಿಗೆ ಸ್ವಾಗತ ಎನ್ನುವ ಪೋಸ್ಟರ್​ ಶೇರ್​ ಮಾಡಲಾರಂಭಿಸಿದ್ದಾರೆ. ಈ ಪೋಸ್ಟರ್​ಗಳು ವೈರಲ್​ ಆಗುತ್ತಿವೆ.

ಇದನ್ನೂ ಓದಿ IPL 2025: ಕೆಕೆಆರ್​ ತಂಡದ ಮೆಂಟರ್​ ಆಗಲಿದ್ದಾರಾ ರಾಹುಲ್ ದ್ರಾವಿಡ್?

ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ನಾಯಕನಾಗಿರುವ ರಿಷಭ್ ಪಂತ್(Rishabh Pant) ರಿಟೈನ್​ ಆಗಲು ಆಸಕ್ತಿ ಹೊಂದಿಲ್ಲ, ಅವರು ಚೆನ್ನೈ ಸೂಪರ್​ ಕಿಂಗ್ಸ್​ ಪರ ಆಡಲಿದ್ದಾರೆ ಎಂದು ವರದಿಯಾಗಿದೆ. ಮಹೇಂದ್ರ ಸಿಂಗ್​ ಧೋನಿ ಮುಂದಿನ ವರ್ಷ ಐಪಿಎಲ್​ ಆಡುವುದು ಖಚಿತತೆ ಇಲ್ಲ. ಇಂಪ್ಯಾಕ್ಟ್​ ನಿಯಮ ಇದ್ದರೆ ಆಡುವುದಾಗಿ ಫ್ರಾಂಚೈಸಿ ಮೂಲಗಳು ಈಗಾಗಲೇ ಮಾಹಿತಿ ನೀಡಿದೆ. ಈ ಬಾರಿಯೇ ಧೋನಿ ನಿವೃತ್ತಿಯಾಗಬೇಕಿತ್ತು. ಆದರೆ ಅವರು ಇನ್ನೂ ನಿವೃತ್ತಿ ಪ್ರಕಟಿಸಿಲ್ಲ. ತಂಡದಲ್ಲಿ ಸೂಕ್ತ ವಿಕೆಟ್​ ಕೀಪರ್​ ಇಲ್ಲದ ಕಾರಣ ಧೋನಿ ತಮ್ಮ ಕಾಲು ನೋವಿನ ಮಧ್ಯೆಯೂ ಸಂಪೂರ್ಣವಾಗಿ ಕೀಪಿಂಗ್​ ನಡೆಸಿದ್ದರು. ಧೋನಿ ಸ್ಥಾನಕ್ಕೆ ಪಂತ್​ ಅವರನ್ನು ಆಯ್ಕೆ ಮಾಡುವ ಸಾಧ್ಯತೆಯೊಂದು ಕಂಡುಬಂದಿದೆ.

Exit mobile version