Site icon Vistara News

IPL 2025 Mega Auction: ಮೆಗಾ ಹರಾಜಿನಲ್ಲಿ 8 ಆಟಗಾರರ ರಿಟೇನ್​ಗೆ ಪಟ್ಟು ಹಿಡಿದ ಫ್ರಾಂಚೈಸಿಗಳು

IPL 2025 Mega Auction

ಮುಂಬಯಿ: ಮುಂದಿನ ವರ್ಷದ ಐಪಿಎಲ್​ 18ನೇ ಆವೃತ್ತಿಗೆ ಮುನ್ನ ಆಟಗಾರರ ಮೆಗಾ ಹರಾಜು(IPL 2025 Mega Auction) ಪ್ರಕ್ರಿಯೆ ನಡೆಯಲಿದೆ ಎಂದು ಈಗಾಗಲೇ ಐಪಿಎಲ್​ ಮುಖ್ಯಸ್ಥ ಅರುಣ್​ ಧುಮಾಲ್(Arun Dhumal) ಖಚಿತಪಡಿಸಿದ್ದಾರೆ. ಪ್ರತಿ ತಂಡ 3-4 ಆಟಗಾರರನ್ನು ಮಾತ್ರ ರಿಟೇನ್​ ಮಾಡಿಕೊಳ್ಳಲು ಮಾತ್ರ ಅವಕಾಶ ಲಭಿಸಲಿದೆ ಎಂದು ಹೇಳಲಾಗಿತ್ತು. ಇದೀಗ ಎಲ್ಲ ಫ್ರಾಂಚೈಸಿಗಳು 8 ಆಟಗಾರರನ್ನು ರಿಟೇನ್​ ಮಾಡಿಕೊಳ್ಳಲು ಅನುಮತಿ ನೀಡುವಂತೆ ಬಿಸಿಸಿಐ ಮತ್ತು ಐಪಿಎಲ್​ ಆಡಳಿತ ಮಂಡಳಿಗೆ ಬೇಡಿಕೆ ಇರಿಸಿದೆ ಎಂದು ತಿಳಿದುಬಂದಿದೆ.

ಏಪ್ರಿಲ್ 16ರಂದು ಅಹಮದಾಬಾದ್‌ನಲ್ಲಿ ಬಿಸಿಸಿಐ ಎಲ್ಲ 10 ತಂಡಗಳ ಮಾಲಿಕರ(IPL owners) ಸಭೆ ಕರೆದಿದೆ. ಮೂಲಗಳ ಪ್ರಕಾರ ಮುಂದಿನ ವರ್ಷ ನಡೆಯುವ ಆಟಗಾರರ ಮೆಗಾ ಹರಾಜಿನ(ipl 2025 mega auction) ಬಗ್ಗೆ ಚರ್ಚೆ ನಡೆಸಲು ಈ ಸಭೆ ಕರೆಯಲಾಗಿದೆ ಎನ್ನಲಾಗಿದೆ. ಸಭೆಯಲ್ಲಿ ಫ್ರಾಂಚೈಸಿಗಳು  ರೀಟೈನ್ ಅವಕಾಶವನ್ನು 8ಕ್ಕೆ ಹೆಚ್ಚಿಸುವಂತೆ ಬಿಸಿಸಿಐ(BCCI) ಬಳಿ ಮನವಿ ಸಲ್ಲಿಸುವ ಸಾಧ್ಯತೆಯಿದೆ ಎಂದು ವರದಿಯಾಗಿದೆ.

ಮೆಗಾ ಹರಾಜು ಈ ವರ್ಷಾಂತ್ಯದಲ್ಲಿ ನಡೆಯಲಿದೆ. ಅಹಮದಾಬಾದ್‌ನಲ್ಲಿ ನಡೆಯುವ ಸಭೆಯಲ್ಲಿ ಬಿಸಿಸಿಐ ಅಧ್ಯಕ್ಷ ರೋಜರ್‌ ಬಿನ್ನಿ, ಕಾರ್ಯದರ್ಶಿ ಜಯ್‌ ಶಾ, ಐಪಿಎಲ್‌ ಮುಖ್ಯಸ್ಥ ಅರುಣ್‌ ಧುಮಾಲ್‌ ಪಾಲ್ಗೊಳ್ಳಲಿದ್ದಾರೆ. ಆದರೆ ಬಿಸಿಸಿಐ ಮೂಲಗಳು ಇದೊಂದು ಅನೌಪಚಾರಿಕ ಸಭೆಯಾಗಿದೆ ಎಂದು ಹೇಳಿದೆ.

ಇದು ಮಾತ್ರವಲ್ಲದೆ ಮೆಗಾ ಹರಾಜಿನಲ್ಲಿ ಮತ್ತೊಮ್ಮೆ RTM(ರೈಟ್ ಟು ಮ್ಯಾಚ್ ಕಾರ್ಡ್ ಬಳಕೆ) ಕಾರ್ಡ್ ಬಳಸುವ ಬಗ್ಗೆಯೂ ಫ್ರಾಂಚೈಸಿ ಡಿಮ್ಯಾಂಡ್ ಮಾಡಲಿದೆ. 2018ರ ಮೆಗಾ ಹರಾಜಿನಲ್ಲಿ RTMಗೆ ಅವಕಾಶವಿತ್ತು. ಆದರೆ 2022ರಲ್ಲಿ ನಡೆದ ಮೆಗಾ ಹರಾಜಿನಲ್ಲಿ ಇದನ್ನು ಕೈಬಿಡಲಾಗಿತ್ತು, ಇದೀಗ ಮತ್ತೆ ಈ ನಿಯವನ್ನು ಜಾರಿಗೆ ತರಲು ಫ್ರಾಂಚೈಸಿಗಳು ಒಳವು ತೋರಿದೆ ಎನ್ನಲಾಗಿದೆ.

ಇದನ್ನೂ ಓದಿ IPL 2024 Points Table: ಹೈದರಾಬಾದ್​ಗೆ​ ರೋಚಕ ಗೆಲುವಿನ ಬಳಿಕ ಅಂಕಪಟ್ಟಿ ಹೇಗಿದೆ?

ಪ್ರಸಕ್ತ ಸಾಲಿನ 17ನೇ ಆವೃತ್ತಿಯ ಐಪಿಎಲ್​ ಟೂರ್ನಿಯಲ್ಲಿ 23 ಪಂದ್ಯಗಳು ಮುಕ್ತಾಯ ಕಂಡಿದೆ. ಆರಂಭದಲ್ಲಿ ಲೋಕಸಭಾ ಚುನಾವಣ ಹಿನ್ನಲೆ ಎಫ್ರಿಲ್ 7 ತನಕ ಮಾತ್ರ ವೇಳಾಪಟ್ಟಿ ಪ್ರಕಟಿಸಲಾಗಿತ್ತು. ಈ ವೇಳೆ ದ್ವಿತೀಯ ಹಂತದ ಪಂದ್ಯಾವಳಿಗಳು ವಿದೇಶದಲ್ಲಿ ನಡೆಯಲಿದೆ ಎಂದು ಹೇಳಲಾಗಿತ್ತು. ಆದರೆ ಅಂತಿಮವಾಗಿ ಟೂರ್ನಿಯನ್ನು ಸಂಪೂರ್ಣವಾಗಿ ಭಾರತದಲ್ಲೇ ನಡೆಸಲು ತೀರ್ಮಾನಿಸಲಾಯಿತು.

Exit mobile version