Site icon Vistara News

IPL: ಡೆಲ್ಲಿ ತಂಡದ ಸಹಾಯಕ ಕೋಚ್ ಸ್ಥಾನ ತೊರೆದ ಅಜಿತ್ ಅಗರ್ಕರ್

delhi capitals

ನವದೆಹಲಿ: ಡೆಲ್ಲಿ ಕ್ಯಾಪಿಟಲ್ಸ್(Delhi Capitals)​ ತಂಡದ ಸಹಾಯಕ ಕೋಚ್(assistant coach)​ ಆಗಿದ್ದ ಟೀಮ್​ ಇಂಡಿಯಾದ(Team India) ಮಾಜಿ ವೇಗಿ ಅಜಿತ್ ಅಗರ್ಕರ್(Ajit Agarkar) ಅವರು ತಮ್ಮ ಹುದ್ದಗೆ ರಾಜಿನಾಮೆ ನೀಡಿದ್ದಾರೆ. ಭಾರತ ಕ್ರಿಕೆಟ್ ತಂಡದ ಆಯ್ಕೆ ಸಮಿತಿಯ ಮುಖ್ಯಸ್ಥರ ಆಯ್ಕೆ ರೇಸ್‌ನಲ್ಲಿ ಮುಂಚೂಣಿಯಲ್ಲಿರುವ ಅವರು ಈ ಸ್ಥಾನಕ್ಕೆ ಆಯ್ಕೆಯಾಗುವುದು ಬಹುತೇಕ ಖಚಿತ ಎನ್ನಲಾಗಿತ್ತು. ಈ ಬೆಳವಣಿಗೆ ನಡೆಯುತ್ತಿದ್ದ ಸಂದರ್ಭದಲ್ಲೇ ಅವರು ರಾಜಿನಾಮೆ ನೀಡಿದ್ದು ಇದೀಗ ಅವರ ಆಯ್ಕೆಯನ್ನು ಖಚಿತಪಡಿಸಿದಂತಿದೆ.

ಆಸ್ಟ್ರೇಲಿಯಾದ ಮಾಜಿ ಆಲ್‌ರೌಂಡರ್ ಶೇನ್ ವ್ಯಾಟ್ಸನ್(Shane Watson) ಹಾಗೂ ಅಗರ್ಕರ್ ಇನ್ನು ಮುಂದೆ ನಮ್ಮ ಸಹಾಯಕ ಸಿಬ್ಬಂದಿಯಾಗಿ ಮುಂದುವರಿಯುವುದಿಲ್ಲ ಎಂದು ಡೆಲ್ಲಿ ಕ್ಯಾಪಿಟಲ್ಸ್ ಖಚಿತಪಡಿಸಿದ್ದು, ‘ಡೆಲ್ಲಿ ತಂಡಕ್ಕೆ ಉಭಯ ಆಟಗಾರರು ನೀಡಿದ ನೀಡಿರುವ ಕೊಡುಗೆಗಳಿಗೆ ಧನ್ಯವಾದಗಳು” ಎಂದು ಫ್ರಾಂಚೈಸಿ ಟ್ವೀಟ್​ ಮಾಡಿದೆ.

ಅಗರ್ಕರ್ ಕಳೆದ ಎರಡು ಬಾರಿ ಈ ರೇಸ್​​ನಲ್ಲಿ ಮುಂಚೂಣಿಯಲ್ಲಿದ್ದರು. ಆದಾಗ್ಯೂ, ಅವರಿಗೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈ ಬಾರಿ ಬಿಸಿಸಿಐ ಅವರನ್ನೇ ನೇಮಕ ಮಾಡಲು ಮುಂದಾಗಿದೆ. ಬಿಸಿಸಿಐ ಕೂಡ ಅವರೇ ನಮ್ಮ ನೆಚ್ಚಿನ ಆಯ್ಕೆ ಎಂಬ ಮನೋಸ್ಥಿತಿಯಲ್ಲಿದೆ. ಕ್ರಿಕೆಟ್ ಸಲಹಾ ಸಮಿತಿ (ಸಿಎಸಿ) ಜುಲೈ 1 ರಂದು (ಶನಿವಾರ) ಸಂದರ್ಶನಗಳನ್ನು ಪ್ರಾರಂಭಿಸಲಿದೆ. ಬಂದಿರುವ ಅರ್ಜಿಯ ಪ್ರಕಾರ ಅಜಿತ್ ಅವರಿಗೆ ಹೆಚ್ಚಿನ ಅವಕಾಶಗಳಿವೆ.

26 ಟೆಸ್ಟ್, 191 ಏಕದಿನ ಮತ್ತು 4 ಟಿ 20 ಪಂದ್ಯಗಳನ್ನು ಆಡಿರುವ ಅವರು ಅತ್ಯಂತ ಅನುಭವಿ ಅಭ್ಯರ್ಥಿಯಾಗಿದ್ದಾರೆ ಅಜಿತ್ ಅಗರ್ಕರ್​. ಅವರು 42 ಐಪಿಎಲ್ ಪಂದ್ಯಗಳನ್ನು ಕೂಡ ಆಡಿದ್ದಾರೆ.

ಇದನ್ನೂ ಓದಿ Team India : ವಿದೇಶಿ ಲೀಗ್​ಗಳಲ್ಲಿ ಆಡುವ ಕ್ರಿಕೆಟಿಗರೆ ಖೆಡ್ಡಾ ತೋಡಲು ಬಿಸಿಸಿಐ ಪ್ಲ್ಯಾನ್​!

ಭಿನ್ನಾಭಿಪ್ರಾಯಗಳನ್ನು ಹೊರತುಪಡಿಸಿ ಉನ್ನತ ಮಟ್ಟದ ಟೀಮ್ ಮ್ಯಾನೇಜ್ಮೆಂಟ್​ಗೆ ಬೆಂಬಲವಾಗಿ ನಿಲ್ಲಬಲ್ಲ ಆಯ್ಕೆದಾರರನ್ನು ಆಯ್ಕೆ ಮಾಡುವ ಆದೇಶವನ್ನು ಸಿಎಸಿ ಹೊಂದಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ಕ್ರೀಡಾ ವೆಬ್​ಸೈಟ್​ಗೆ ತಿಳಿಸಿದ್ದಾರೆ. ಯಾಕೆಂದರೆ ಅಗರ್ಕರ್ ಅವರನ್ನು ನೇಮಕ ಮಾಡಿದರೆ, ಪಶ್ಚಿಮ ವಲಯದಿಂದ ಇಬ್ಬರು ಆಯ್ಕೆದಾರರು ಸಮಿತಿಯಲ್ಲಿ ಸೇರಿದಂತಾಗುತ್ತದೆ. ಸಲೀಲ್ ಅಂಕೋಲಾ ಈ ವಲಯದ ಇನ್ನೊಬ್ಬರು. ಅದೂ ಅಲ್ಲದೆ ಅಜಿತ್ ಅಗರ್ಕರ್ ಅವರು ಶಿವ ಸುಂದರ್ ದಾಸ್ ಅವರಿಗಿಂತ ಹೆಚ್ಚು ಟೆಸ್ಟ್ ಪಂದ್ಯಗಳನ್ನು ಆಡಿರುವುದರಿಂದ ಮುಖ್ಯ ಆಯ್ಕೆಗಾರನ ಹುದ್ದೆ ಗ್ಯಾರಂಟಿ.

Exit mobile version