Site icon Vistara News

IPL Auction 2023 | ಐಪಿಎಲ್​ ಆಟಗಾರರ ಮಿನಿ ಹರಾಜಿಗೆ ಕ್ಷಣಗಣನೆ ಆರಂಭ; ಯಾರಿಗೆ ಒಲಿಯಲಿದೆ ಬಂಪರ್ ಮೊತ್ತ​!

IPL Auction 2023

ಮುಂಬಯಿ: 2023ರ ಐಪಿಎಲ್‌ ಮಿನಿ ಹರಾಜಿಗೆ(IPL Auction 2023) ಕ್ಷಣಗಣನೆ ಆರಂಭವಾಗಿದ್ದು, ಶುಕ್ರವಾರ ಕೊಚ್ಚಿಯಲ್ಲಿ ಹರಾಜು ಪ್ರಕ್ರಿಯೆ ನಡೆಯಲಿದೆ. ಮಧ್ಯಾಹ್ನ 2.30ಕ್ಕೆ ಹರಾಜು ಆರಂಭವಾಗಲಿದ್ದು, ಬಹುತೇಕ ಫ್ರಾಂಚೈಸಿಗಳು ಕೊಚ್ಚಿ ತಲುಪಿದೆ. ಜತೆಗೆ ಪ್ರಮುಖ ಆಟಗಾರರನ್ನು ಖರೀದೀಸಲು ಮಾಸ್ಟರ್​ ಪ್ಲ್ಯಾನ್​ ರಚಿಸಿವೆ.

ಶುಕ್ರವಾರ ಹರಾಜು ಪ್ರಕ್ರಿಯೆಯಲ್ಲಿ 405 ಆಟಗಾರರು ಅದೃಷ್ಟ ಪರೀಕ್ಷೆಗೆ ಒಳಗಾಗಲಿದ್ದಾರೆ. ಖಾಲಿ ಇರುವ 87 ಸ್ಥಾನಗಳಿಗೆ ಹರಾಜು ನಡೆಯಲಿದ್ದು, ಬೆನ್‌ ಸ್ಟೋಕ್ಸ್‌, ಮಯಾಂಕ್‌ ಅಗರ್ವಾಲ್​, ಸ್ಯಾಮ್‌ ಕರನ್, ಕ್ಯಾಮರೂನ್‌ ಗ್ರೀನ್‌ ಸೇರಿದಂತೆ ಪ್ರಮುಖ ಆಟಗಾರರು ಬಂಪರ್‌ ಮೊತ್ತದ ನಿರೀಕ್ಷೆಯಲ್ಲಿದ್ದಾರೆ. ಇದೀಗ ಐಪಿಎಲ್​ ಹರಾಜಿನ ಕುರಿತ ಸಂಪೂರ್ಣ ಮಾಹಿತಿ ಈ ಕೆಳಗಿನಂತಿದೆ.

ಮಿನಿ ಹರಾಜು ವೀಕ್ಷಣೆ
ಸ್ಟಾರ್‌ ಸ್ಪೋರ್ಟ್ಸ್‌ ನೆಟ್‌ವರ್ಕ್‌ನಲ್ಲಿ ಮಿನಿ ಹರಾಜಿನ ನೇರ ಪ್ರಸಾರವನ್ನು ಕ್ರಿಕೆಟ್ ಅಭಿಮಾನಿಗಳು ವೀಕ್ಷಿಸಬಹುದಾಗಿದೆ. ಜತೆಗೆ ವೈಕಾಂ18 ಹಾಗೂ ರಿಲಯನ್ಸ್‌, ಡಿಜಿಟಲ್ ಹಕ್ಕು ಪಡೆದಿರುವುದರಿಂದಾಗಿ ಜಿಯೋ ಸಿನಿಮಾ ಆ್ಯಪ್​ ಮೂಲಕವೂ ಆಟಗಾರರ ಹರಾಜು ಪ್ರಕ್ರಿಯೆಯನ್ನು ವೀಕ್ಷಿಸಬಹುದಾಗಿದೆ.

ಹರಾಜಾಗುವ ಆಟಗಾರರ ಸಂಖ್ಯೆ
ಮಿನಿ ಹರಾಜಿಗೆ ಒಟ್ಟು 991 ಆಟಗಾರರು ಹೆಸರು ನೋಂದಾಯಿಸಿದ್ದರು. ಆದರೆ ಬಿಸಿಸಿಐ 405 ಆಟಗಾರರ ಹೆಸರು ಶಾರ್ಟ್‌ಲಿಸ್ಟ್ ಮಾಡಿದೆ. ಈ ಪೈಕಿ 273 ಭಾರತೀಯ ಆಟಗಾರರು 132 ವಿದೇಶಿ ಆಟಗಾರರು ಇದ್ದಾರೆ. ಅದರಂತೆ 10 ಫ್ರಾಂಚೈಸಿಗಳು ಗರಿಷ್ಠ 87 ಆಟಗಾರರನ್ನು ಖರೀದಿಸಲು ಅವಕಾಶವಿದೆ.

ಐಪಿಎಲ್‌ ಬ್ರ್ಯಾಂಡ್‌ ಮೌಲ್ಯ ಏರಿಕೆ
ವಿಶ್ವದ ಶ್ರೀಮಂತ ಟಿ20 ಲೀಗ್ ಐಪಿಎಲ್‌ನ ಒಟ್ಟು ಮೌಲ್ಯ ಬರೋಬ್ಬರಿ 91 ಸಾವಿರ ಕೋಟಿ ರೂಪಾಯಿಗೆ ಏರಿಕೆಯಾಗಿದೆ ಎಂದು ವರದಿಯಾಗಿದೆ. 2020ರಲ್ಲಿ ಐಪಿಎಲ್‌ನ ಮೌಲ್ಯ 51 ಸಾವಿರ ಕೋಟಿ ರೂ. ಇತ್ತು. ಈಗ ಇದರಲ್ಲಿ ಶೇ.75ರಷ್ಟು ಏರಿಕೆಯಾಗಿದೆ ಎಂದು ಡಿ ಆಂಡ್​ ಪಿ ಅಡ್ವೈಸರಿ ಕಂಪೆನಿ ” ಬಿಯಾಂಡ್​ 22 ಯಾರ್ಡ್ಸ್​’ ಹೆಸರಿನ ವರದಿಯಲ್ಲಿ ಹೇಳಲಾಗಿದೆ. 2022ರಲ್ಲಿ 2 ಹೊಸ ತಂಡಗಳು ಸೇರ್ಪಡೆಯಾಗಿವೆ. ಇವೆರಡು ಹೊಸ ತಂಡಗಳೇ ಒಟ್ಟು 13.255 ಕೋಟಿ. ರೂ. ಮೌಲ್ಯ ಹೊಂದಿದೆ. ಜತೆಗೆ ಮಾಧ್ಯಮ ಹಕ್ಕು ಕೂಡ ದೊಡ್ಡ ಮೊತ್ತಕ್ಕೆ ಮಾರಾಟದ ಹಿನ್ನೆಲೆಯಲ್ಲಿ 2022ರ ಟೂರ್ನಿಯಲ್ಲಿ ಐಪಿಎಲ್‌ನ ಬ್ರ್ಯಾಂಡ್‌ ಮೌಲ್ಯ 91 ಸಾವಿರ ಕೋಟಿ ರೂ.ಗೆ ಏರಿಕೆಯಾಗಿದೆ.

ಮಧ್ಯಾಹ್ನ 2.30ಕ್ಕೆ ಆಟಗಾರರ ಮಿನಿ ಹರಾಜು ಆರಂಭ. ಸ್ಥಳ; ಕೊಚ್ಚಿ

ಇದನ್ನೂ ಓದಿ | IPL 2023 | ಐಪಿಎಲ್​ ಹರಾಜಿನಲ್ಲಿ ಅತಿ ಹೆಚ್ಚು ಹಣ ಪಡೆಯಬಹುದಾದ 5 ಸಂಭಾವ್ಯ ಆಟಗಾರರು

Exit mobile version