ಮುಂಬಯಿ: ಮುಂಬರುವ ಐಪಿಎಲ್-2023ಕ್ಕೆ ಬಿಸಿಸಿಐ (IPL Auction 2023) ಭರ್ಜರಿ ಸಿದ್ಧತೆ ಆರಂಭಿಸಿದ್ದು ಈಗಾಗಲೇ ಐಪಿಎಲ್ ಮಿನಿ ಹರಾಜಿಗಾಗಿ ದಿನಾಂಕ ಫಿಕ್ಸ್ ಮಾಡಲಾಗಿದೆ. ಅದರಂತೆ ಡಿಸೆಂಬರ್ 23 ರಂದು ಕೊಚ್ಚಿಯಲ್ಲಿ ಆಟಗಾರರ ಬಿಡ್ಡಿಂಗ್ ನಡೆಯಲಿದೆ. ಇದಕ್ಕೂ ಮುನ್ನ ಈ ಹರಾಜಿಗಾಗಿ ಹೆಸರು ನೋಂದಣಿ ಮಾಡಿಕೊಳ್ಳಲು ಬಿಸಿಸಿಐ ಆಟಗಾರರಿಗೆ ಗಡುವು ನೀಡಿದೆ.
16ನೇ ಆವೃತ್ತಿಯ ಐಪಿಎಲ್ ಮಿನಿ ಹರಾಜಿನಲ್ಲಿ ಆಟಗಾರರು ಪಾಲ್ಗೊಳಬೇಕಿದ್ದರೆ, ಡಿಸೆಂಬರ್ 15, ಸಂಜೆ 5 ಗಂಟೆಯೊಳಗೆ ತಮ್ಮ ಹೆಸರು ರಿಜಿಸ್ಟರ್ ಮಾಡಿಕೊಳ್ಳಲು ಬಿಸಿಸಿಐ ಸೂಚಿಸಿದೆ. ಅದರಂತೆ ಡಿಸೆಂಬರ್ 15 ಕೊನೆಯ ದಿನಾಂಕವಾಗಿದ್ದು, ಆ ಬಳಿಕ ಹೆಸರು ನೀಡುವ ಆಟಗಾರರನ್ನು ಹರಾಜಿಗಾಗಿ ಪರಿಗಣಿಸಲಾಗುವುದಿಲ್ಲ. ಹೀಗಾಗಿ ಮುಂದಿನ ತಿಂಗಳ 15 ರೊಳಗೆ ಎಲ್ಲ ಆಟಗಾರರು ಮಿನಿ ಹರಾಜಿಗಾಗಿ ಹೆಸರು ನೀಡುವ ನಿರೀಕ್ಷೆಯಿದೆ ಎಂದು ಬಿಸಿಸಿಐ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.
ಮಿನಿ ಹರಾಜಿಗಾಗಿ ಹೆಸರು ನೋಂದಣಿ ದಿನಾಂಕ ಫಿಕ್ಸ್ ಆಗುತ್ತಿದ್ದಂತೆ, ಇಂಗ್ಲೆಂಡ್ ತಂಡದ ಆಲ್ರೌಂಡರ್ ಬೆನ್ ಸ್ಟೋಕ್ಸ್ ಹಾಗೂ ಜೋ ರೂಟ್ ತಮ್ಮ ಹೆಸರುಗಳನ್ನು ಈಗಾಗಲೇ ರಿಜಿಸ್ಟರ್ ಮಾಡಿಕೊಂಡಿದ್ದಾರೆ ಎಂದು ತಿಳಿದು ಬಂದಿದೆ. ಟಿ20 ವಿಶ್ವ ಕಪ್ ಫೈನಲ್ನಲ್ಲಿ ಅರ್ಧಶತಕ ಬಾರಿಸಿ ತಂಡದ ಗೆಲುವಿನಲ್ಲಿ ಪ್ರಮುಖ ಪಾತ್ರ ವಹಿಸಿದ ಸ್ಟೋಕ್ಸ್ ಅವರಿಗೆ ಈ ಬಾರಿ ಹರಾಜಿನಲ್ಲಿ ದೊಡ್ಡ ಮೊತ್ತ ಸಿಗುವ ಸಾಧ್ಯತೆ ಇದೆ.
ಇದನ್ನೂ ಓದಿ | IPL 2023 | ಶಸ್ತ್ರಚಿಕಿತ್ಸೆಗೆ ಒಳಗಾದ ಮ್ಯಾಕ್ಸ್‌ವೆಲ್ ಈ ಬಾರಿ ಐಪಿಎಲ್ ಆಡಲಿದ್ದಾರಾ? ಮೈಕ್ ಹೆಸ್ಸನ್ ಹೇಳಿದ್ದೇನು?