Site icon Vistara News

IPL Auction 2024 Live: 24.75 ಕೋಟಿ ಮೊತಕ್ಕೆ ಸ್ಟಾರ್ಕ್​ಗೆ ಬಲೆ ಬೀಸಿದ ಕೆಕೆಆರ್

Mallika Sagar

ದುಬೈ: ಬಹುನಿರೀಕ್ಷಿತ ಐಪಿಎಲ್​ 17ನೇ ಆವೃತ್ತಿಯ ಆಟಗಾರರ ಹರಾಜು ದುಬೈನಲ್ಲಿ ನಡೆಯುತ್ತಿದ್ದು, ಒಟ್ಟು 333 ಆಟಗಾರರು ಹರಾಜು ಪಟ್ಟಿಯಲ್ಲಿದ್ದಾರೆ. 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ ಹರಾಜಿನಲ್ಲಿ(IPL Auction 2024 Live) ಯಾವ ಆಟಗಾರ ಯಾವ ತಂಡಕ್ಕೆ ಹಾಗೂ ಎಷ್ಟು ಮೊತ್ತಕ್ಕೆ ಸೇಲ್​ ಆಗಬಹುದೆಂಬುದು ಸದ್ಯದ ಕುತೂಹಲ. ಹರಾಜಿನ ಎಲ್ಲ ಲೈವ್​ ಮಾಹಿತಿಗಳು ಇಲ್ಲಿ ಲಭ್ಯ. 

Abhilash B C

ಹಿಂದಿನ ಕೆಲ ಆವೃತ್ತಿಯಲ್ಲಿ ಬಹುಬೇಡಿಕೆಯ ಆಟಗಾರನಾಗಿದ್ದ ಅಫಘಾನಿಸ್ತಾನ ಸ್ಪಿನ್ನ್​ ಆಲ್​ರೌಂಡರ್​ ಮುಜೀಬ್​ ಉರ್​ ರೆಹಮಾನ್​ ಅವರು ಈ ಬಾರಿಯ ಹರಾಜಿನಲ್ಲಿ ಅನ್​ಸೋಲ್ಡ್​ ಆಗಿದ್ದಾರೆ. ಟಿ20 ಕ್ರಿಕೆಟ್​ನಲ್ಲಿ ನಂ.1 ಬೌಲರ್​ ಕೂಡ ಆಗಿದ್ದರು.

Abhilash B C

ಶ್ರೀಲಂಕಾದ ಯುವ ಬೌಲರ್​ ದಿಲ್ಶನ್ ಮಧುಶಂಕ ಅವರನ್ನು ನಿರೀಕ್ಷೆ ಮಾಡಿದಂತೆ ಮುಂಬೈ ಇಂಡಿಯನ್ಸ್​ ತಂಡ ಖರೀದಿ ಮಾಡಿದೆ. 50 ಲಕ್ಷ ಮೂಲಬೆಲೆಯೊಂದಿಗೆ ಕಾಣಿಸಿಕೊಂಡಿದ್ದ ಅವರು ಬರೋಬ್ಬರಿ 4.60 ಕೋಟಿ ಮೊತ್ತ ಪಡೆಯುವಲ್ಲಿ ಯಶಸ್ವಿಯಾಗಿದ್ದಾರೆ. ಇದು ಇವರ ಚೊಚ್ಚಲ ಐಪಿಎಲ್​ ಟೂರ್ನಿಯಾಗಿದೆ. ಇತ್ತೀಚೆಗೆ ಮುಕ್ತಾಯ ಕಂಡಿದ್ದ ಏಕದಿನ ವಿಶ್ವಕಪ್​ ಟೂರ್ನಿಯಲ್ಲಿ ಉತ್ತಮ ಬೌಲಿಂಗ್​ ಪ್ರದರ್ಶನ ತೋರಿದ್ದರು.

Abhilash B C

ಕಮಿನ್ಸ್​ ದಾಖಲೆ ಪತನ

ಆರಂಭದಲ್ಲಿ 20.50 ಕೋಟಿಗೆ ಸೇಲ್​ ಆಗುವ ಮೂಲಕ ಐಪಿಎಲ್​ನಲ್ಲಿ ದಾಖಲೆ ಬರೆದಿದ್ದ ಕಮಿನ್ಸ್​ ಅವರ ದಾಖಲೆಯನ್ನು ಕ್ಷಣ ಮಾತ್ರದಲ್ಲೇ ತನ್ನದೇ ದೇಶದ ಬೌಲರ್​ ಮಿಚೆಲ್​ ಸ್ಟಾರ್ಕ್​ ಅವರು ಬರೋಬ್ಬರಿ 24.75 ಕೋಟಿ ಪಡೆದು ಮುರಿದರು. ಇದು ಸದ್ಯ ಐಪಿಎಲ್​ ಇತಿಹಾಸದ ಸಾರ್ವಕಾಲಿಕ ದಾಖಲೆಯಾಗಿದೆ.

Abhilash B C

ಕೆಲ ಕಾಲ ಐಪಿಎಲ್​ ಆಡಿ ಆ ಬಳಿಕ ಗಾಯದ ಸಮಸ್ಯೆ ಮತ್ತು ಕೊರೊನಾ ಜೈವಿಕ ಸುರಕ್ಷತಾ ವಲಯದಲ್ಲಿ ಆಡಲು ನಿರಾಕರಿಸಿ ಐಪಿಎಲ್​ನಿಂದ ದೂರ ಉಳಿದಿದ್ದ ಆಸ್ಟ್ರೇಲಿಯಾದ ಸ್ಟಾರ್​ ವೇಗಿ ಮಿಚೆಲ್​ ಸ್ಟಾಕ್​ ಅವರು ಈ ಬಾರಿಯ ಆಟಗಾರರ ಹಾರಾಜಿಗೆ ಹೆಸರು ಸಲ್ಲಿಸಿದ್ದರು. ಅವರ ಖರೀದಿಗೆ ಎಲ್ಲ ಫ್ರಾಂಚೈಸಿಗಳು ಜಿದ್ದಾಜಿದ್ದಿನ ಬಿಡ್​ ಮಾಡಿದವು. ಆದರೆ ಅಂತಿಮವಾಗಿ ದಾಖಲೆಯ 24.75 ಕೋಟಿಗೆ ಬಿಡ್​ ಸಲ್ಲಿಸಿ ಕೆಕೆಆರ್​ ತಂಡ ಖರೀದಿ ಮಾಡಿದೆ. ಮಿಚೆಲ್‌ ಸ್ಟಾರ್ಕ್ 2015ರಲ್ಲಿ ಕೊನೆಯ ಬಾರಿ ಐಪಿಎಲ್​ ಟೂರ್ನಿ ಆಡಿದ್ದರು. ಇದು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಪರ.

Abhilash B C

32 ಐಪಿಎಲ್​ ಪಂದ್ಯಗಳನ್ನು ಆಡಿದ ಅನುಭವ ಹೊಂದಿರುವ 25 ವರ್ಷದ ಯುವ ವೇಗಿ ಶಿವಂ ಮಾವಿ ಅವರು 6.40 ಕೋಟಿ ಮೊತ್ತಕ್ಕೆ ಹರಾಜಾಗಿದ್ದಾರೆ. ಅವರನ್ನು ಕನ್ನಡಿಗ ಕೆ.ಎಲ್​ ರಾಹುಲ್​ ಸಾರಥ್ಯದ ಲಕ್ನೋ ಸೂಪರ್​ಜೈಂಟ್ಸ್​ ತಂಡ ಖರೀದಿ ಮಾಡಿದೆ. ಮಾವಿ ಐಪಿಎಲ್​ನಲ್ಲಿ 30 ವಿಕೆಟ್​ ಉರುಳಿಸಿದ್ದಾರೆ.

Exit mobile version