Site icon Vistara News

IPL Auction: 17ನೇ ಆವೃತ್ತಿಯ ಐಪಿಎಲ್​ನ ಆಟಗಾರರ ಹರಾಜಿಗೆ ದಿನಾಂಕ ನಿಗದಿ!

IPL auction

ಮುಂಬಯಿ: ಬಹುನಿರೀಕ್ಷಿತ ಇಂಡಿಯನ್ ಪ್ರೀಮಿಯರ್‌ ಲೀಗ್‌ ಟೂರ್ನಿಯ 17ನೇ ಆವೃತ್ತಿಯ ಆಟಗಾರರ(IPL Auction) ಹರಾಜು ಪ್ರಕ್ರಿಯೆ ಡಿಸೆಂಬರ್‌ 19ರಂದು ನಡೆಯುವುದು ಬಹುತೇಖ ಖಚಿತವಾಗಿದ್ದು, ನವೆಂಬರ್​ 26ರ ಒಳಗಾಗಿ ಎಲ್ಲ ಫ್ರಾಂಚೈಸಿಗಳು ತಂಡದಲ್ಲಿ ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ಸಲ್ಲಿಸಲು ಸೂಚಿಸಲಾಗಿದೆ.

ವರದಿಗಳ ಪ್ರಕಾರ, 2024ರ ಐಪಿಎಲ್​ನ ಆಟಗಾರರ ಹರಾಜಿನಲ್ಲಿ, ಪ್ರತಿ ತಂಡಕ್ಕೆ ಖರ್ಚು ಮಾಡಲು 100 ಕೋಟಿ ರೂ. ಗಳ ಹಣದ ಮಿತಿ ಇದ್ದು, 2023ರಕ್ಕೆ ಹೋಲಿಸಿದರೆ ಇದು 5 ಕೋಟಿ ರೂ. ಮೊತ್ತ ಹೆಚ್ಚಳವಾಗಿದೆ. ಕಳೆದ ವರ್ಷ 95 ಕೋಟಿ ರೂ. ಆಗಿತ್ತು. ಅಲ್ಲದೆ ಈ ಹರಾಜು ಪ್ರಕ್ರಿಯೆ ಟೂರ್ನಿಯ ಇತಿಹಾಸದಲ್ಲಿ ಇದೇ ಮೋದಲ ಬಾರಿ ದೇಶದ ಹೊರಗಡೆ ದುಬೈನಲ್ಲಿ ನಡೆಯಲಿದೆ.

ದುಬೈನಲ್ಲಿ ಆಟಗಾರರ ಹರಾಜು!

ಕಳೆದ ವರ್ಷದ ಐಪಿಎಲ್ ಹರಾಜು ಕೊಚ್ಚಿಯಲ್ಲಿ ನಡೆದಿತ್ತು. ಆದರೆ ಈ ಬಾರಿಯ ಹರಾಜು(ipl 2024 auction) ಕಾರ್ಯಕ್ರಮ ದೇಶದ ಹೊರಗೆ ನಡೆಸಲು ಬಿಸಿಸಿಐ ಯೋಚಿಸಿದೆ. ಈ ಬಾರಿ ದುಬೈನಲ್ಲಿ ಹರಾಜು ಪ್ರಕ್ರಿಯೆ ನಡೆಲಿದೆ. ಕೆಲ ದಿನಗಳ ಹಿಂದೆಯೇ ಈ ಸುದ್ದಿಯನ್ನು ಕ್ರಿಕ್ ಬಜ್ ವರದಿ ಮಾಡಿತ್ತು. ಇದೀಗ ಈ ಸುದ್ದಿ ಬಹುತೇಕ ಖಚಿತಗೊಂಡಂತ್ತಿದೆ.

ಈ ಹಿಂದೆಯೂ ವಿದೇಶದಲ್ಲಿ ನಡೆದಿತ್ತು ಟೂರ್ನಿ

2009ರಲ್ಲಿ ಮಹಾಚುನಾವಣೆಯ ಕಾರಣದಿಂದ ಇಡೀ ಕೂಟವನ್ನು ದಕ್ಷಿಣ ಆಫ್ರಿಕಾದಲ್ಲಿ ನಡೆಸಲಾಗಿತ್ತು. ಹಾಗೆಯೇ 2014ರಲ್ಲಿಯೂ ಒಂದು ಹಂತದ ಪಂದ್ಯಗಳು ಯುಎಇಯಲ್ಲಿ ನಡೆದಿದ್ದವು. ಆದರೆ ಈ ಬಾರಿ ಬಿಸಿಸಿಐ ಸಂಪೂರ್ಣವಾಗಿ ಟೂರ್ನಿಯನ್ನು ವಿದೇಶದಲ್ಲಿ ನಡೆಸುವುದು ಕಷ್ಟ ಸಾಧ್ಯ. ಚುನಾವಣೆಯ ದಿನಾಂಕ ಘೋಷಣೆಯಾದ ಬಳಿಕ ವೇಳಾಪಟ್ಟಿಯನ್ನು ಸಿದ್ಧಪಡಿಸಿ ಒಂದು ಹಂತದ ಪಂದ್ಯಗಳನ್ನು ವಿದೇಶದಲ್ಲಿ ನಡೆಸುವ ಸಾಧ್ಯತೆ ಇದೆ. ಆದರೆ ಈ ತಾಣ ಯಾವುದೆಂಬುದು ಕುತೂಹಲ.

ಇದನ್ನೂ ಓದಿ IPL 2024 : ಮುಂಬೈ ಇಂಡಿಯನ್ಸ್​ ತಂಡ ಸೇರಿಕೊಂಡ ವೆಸ್ಟ್​ ಇಂಡೀಸ್​ ಬೌಲರ್​

ಸದ್ಯದ ಪ್ರಕಾರ ಬಿಸಿಸಿಐ ಯುಎಇಯಲ್ಲಿ ನಡೆಸುವ ಸಾಧ್ಯತೆ ಅಧಿಕ. ಏಕೆಂದರೆ ಪ್ರಯಾಣದ ದೃಷ್ಟಿಯಲ್ಲಿ ಹತ್ತಿರವಿರುವುದರಿಂದ ಯುಎಇಯನ್ನು ಮೊದಲ ಆಧ್ಯತೆಯಾಗಿ ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ ಕೊರೊನಾ ಸಂಕಷ್ಟದಲ್ಲಿ ಬಿಸಿಸಿಐ ಇಲ್ಲೇ ಐಪಿಎಲ್​ ಮತ್ತು ಟಿ20 ವಿಶ್ವಕಪ್​ ಪಂದ್ಯಗಳನ್ನು ನಡೆಸಿತ್ತು. ಹೀಗಾಗಿ 17ನೇ ಆವೃತ್ತಿ ಕೂಡ ದುಬೈನಲ್ಲಿ ನಡೆದರೆ ಅಚ್ಚರಿಯಿಲ್ಲ. ಜತೆಗೆ ಇಲ್ಲಿ ಪಂದ್ಯಗಳಿಗೆ ಯಾವುದೇ ಮಳೆಯ ಭೀತಿ ಕೂಡ ಇಲ್ಲ. ಇಲ್ಲಿನ ಸರ್ಕಾರ ಕೂಡ ಉತ್ತಮ ಬೆಂಬಲ ನೀಡುತ್ತಿದೆ.

ಕಳೆದ ವರ್ಷದ ಆಟಗಾರರ ಹರಾಜನ್ನು ಬಿಸಿಸಿಐ ಇಸ್ತಾಂಬುಲ್‌ನಲ್ಲಿ ನಡೆಸಲು ಯೋಜನೆ ಹಾಕಿತ್ತು. ಇದು ಬಾರಿ ಚರ್ಚೆಗೂ ಗ್ರಾಸವಾಗಿತ್ತು. ಭಾರತದ ವಿರೋಧಿ ದೇಶದಲ್ಲಿ ಬಿಸಿಸಿಐ ಆಟಗಾರರ ಹರಾಜು ನಡೆಸುವ ಮೂಲಕ ವೈರಿ ದೇಶಕ್ಕೆ ಬೆಂಬಲ ಸೂಚಿಸುತ್ತಿದೆ ಎನ್ನುವ ಟೀಕೆಗಳು ಕೇಳಿ ಬಂದಿತ್ತು. ಬಳಿಕ ಕೊಚ್ಚಿಯಲ್ಲಿ ಹರಾಜು ನಡೆಸಲಾಗಿತ್ತು. ಸದ್ಯ ಎಲ್ಲ ಐಪಿಎಲ್ ಫ್ರಾಂಚೈಸಿಗಳಿಗೆ ಗಲ್ಫ್ ನಗರವನ್ನು ಹರಾಜು ಸ್ಥಳವಾಗಿ ಪರಿಗಣಿಸುವ ಬಗ್ಗೆ ತಿಳಿಸಲಾಗಿದೆ ಎಂದು ಕ್ರಿಕ್ ಬಜ್ ವರದಿ ಮಾಡಿದೆ.

Exit mobile version