ಚೆನ್ನೈ: ಇಂಡಿಯನ್ ಪ್ರೀಮಿಯರ್ ಲೀಗ್ 2024ರ (IPL 2024) ಉದ್ಘಾಟನಾ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ಹಾಗೂ ರಾಯಲ್ ಚಾಲೆಂಜರ್ಸ್ ಬೆಂಗಳೂರು (Royal Challengers Bangalore) ತಂಡಗಳು ಮುಖಾಮುಖಿಯಾಗಲಿವೆ (IPL Match Preview). ಚೆನ್ನೈ ಸೂಪಕ್ ಕಿಂಗ್ಸ್ (Chennai Super Kings) ಕಳೆದ ಆವೃತ್ತಿಯ ಚಾಂಪಿಯನ್ ತಂಡವಾಗಿದೆ ಹಾಗೂ ಐಪಿಎಲ್ ಟೂರ್ನಿಯಲ್ಲಿ ಜಂಟಿಯಾಗಿ ಅತ್ಯಂತ ಯಶಸ್ವಿ ತಂಡವೂ ಹೌದು. ಹೀಗಾಗಿ ಮೊದಲ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡಕ್ಕೆ ಸವಾಲು ಎದುರಾಗಿದೆ.
ಚೆನ್ನೈ ಸೂಪ್ ಕಿಂಗ್ಸ್ ತಂಡ ತನ್ನ ತವರು ಮೈದಾನದಲ್ಲಿ ಅತ್ಯುತ್ತಮ ಅಭಿಯಾನ ಪ್ರಾರಂಭಿಸುವ ವಿಶ್ವಾಸದಲ್ಲಿದೆ. ಅನುಭವ ಮತ್ತು ಯುವಕರ ಮಿಶ್ರಣದೊಂದಿಗೆ ತಂಡವು ಯಾವಾಗಲೂ ಟ್ರೋಫಿಯನ್ನು ಎತ್ತುವ ನೆಚ್ಚಿನ ತಂಡಗಳಲ್ಲಿ ಒಂದಾಗಿದೆ. ಬಹುಶಃ ತಮ್ಮ ಕೊನೆಯ ಋತುವಿನಲ್ಲಿ ಆಡುತ್ತಿರುವ ಎಂಎಸ್ ಧೋನಿ ತಮ್ಮ ಅಭಿಮಾನಿಗಳಿಗೆ ಉತ್ತಮ ವಿದಾಯ ನೀಡಲು ಎದುರು ನೋಡುತ್ತಿದ್ದಾರೆ.
ಇದನ್ನೂ ಓದಿ : IPL 2024: ಐಪಿಎಲ್ ಟ್ರೋಫಿಯೊಂದಿಗೆ ಕಂಗೊಳಿಸಿದ 10 ತಂಡದ ನಾಯಕರು
ಒಂದೇ ಒಂದು ಪ್ರಶಸ್ತಿಯನ್ನು ಇನ್ನೂ ಎತ್ತಿಹಿಡಿಯದ ಆರ್ಸಿಬಿ 16 ವರ್ಷಗಳ ಟ್ರೋಫಿ ಬರವನ್ನು ಕೊನೆಗೊಳಿಸುವ ವಿಶ್ವಾಸದಲ್ಲಿದೆ. ಆರ್ಸಿಬಿ ತಂಡದಲ್ಲಿ ಕೆಲವು ಅತ್ಯುತ್ತಮ ಬ್ಯಾಟ್ಸ್ಮನ್ಗಳನ್ನು ಹೊಂದಿದೆ. ಅವರೆಲ್ಲರೂ ಎದುರಾಳಿ ತಂಡದ ಮೇಲೆ ಮುಗಿ ಬೀಳುವ ಸಾಧ್ಯತೆಗಳಿವೆ. ಹೀಗಾಗಿ ಉತ್ತಮ ಋತುವನ್ನು ಹೊಂದುವ ಸಾಧ್ಯತೆಗಳಿವೆ.
ಹಾಲಿ ಚಾಂಪಿಯನ್ಸ್ ತಮ್ಮ ತಂಡದಲ್ಲಿ ಅನುಭವ ಮತ್ತು ಯುವಕರ ಉತ್ತಮ ಮಿಶ್ರಣ ಹೊಂದಿದೆ. ಚೆನ್ನೈ ಮೂಲದ ಫ್ರಾಂಚೈಸಿ ಕನಿಷ್ಠ ನಾಲ್ಕು ಆಲ್ರೌಂಡರ್ಗಳೊಂದಿಗೆ ಕಣಕ್ಕೆ ಇಳಿಯಲಿದೆ. ಅವರು ಗುಣಮಟ್ಟದ ಓವರ್ಗಳ ಜತೆಗೆ ನಿರ್ಣಾಯಕ ಸ್ಕೋರ್ಗಳನ್ನು ಬಾರಿಸಬಲ್ಲರು.
ಬೆಂಗಳೂರು ಮೂಲದ ಫ್ರಾಂಚೈಸಿಯಲ್ಲಿ ಅನುಭವಿ ಬೌಲರ್ಗಳ ಕೊರತೆಯಿದ್ದರೂ ಅವರು ತಮ್ಮ ತಂಡದಲ್ಲಿ ಗುಣಮಟ್ಟದ ಬ್ಯಾಟರ್ಗಳನ್ನು ಹೊಂದಿದ್ದಾರೆ. ಅದು ಆಟದ ಗತಿಯನ್ನು ಬದಲಾಯಿಸಬಹುದು. ಈ ಹಿಂದೆ ಸಿಎಸ್ಕೆ ತಂಡದ ಭಾಗವಾಗಿದ್ದ ಫಾಫ್ ಡು ಪ್ಲೆಸಿಸ್ ಪಿಚ್ ಮತ್ತು ಪರಿಸ್ಥಿತಿಗಳನ್ನು ಚೆನ್ನಾಗಿ ತಿಳಿದಿದ್ದಾರೆ. ಆರಂಭಿಕ ಪಂದ್ಯದಲ್ಲಿ ತಮ್ಮ ಹಿಂದಿನ ಫ್ರಾಂಚೈಸಿಯನ್ನು ಸೋಲಿಸಲು ಎದುರು ನೋಡುತ್ತಿದ್ದಾರೆ.
ಎಂ.ಎ. ಚಿದಂಬರಂ ಕ್ರೀಡಾಂಗಣದ ಪಿಚ್ ವರದಿ
ಚೆನ್ನೈನ ಎಂ.ಎ.ಚಿದಂಬರಂ ಕ್ರೀಡಾಂಗಣವು ಬೌಲರ್ಗಳಿಗೆ ವಿಶೇಷವಾಗಿ ಸ್ಪಿನ್ನರ್ಗಳಿಗೆ ಅನುಕೂಲಕರವಾಗಿದೆ. ಇಲ್ಲಿ ಚೆಂಡು ತೀಕ್ಷ್ಣವಾಗಿ ತಿರುವು ಪಡೆಯುತ್ತದೆ. ಇದರಿಂದಾಗಿ ಬ್ಯಾಟರ್ಗಳಿಗೆ ಸುಲಭದಲ್ಲಿ ಹೊಡೆತಗಳನ್ನ ಬಾರಿಸಲು ಸಾಧ್ಯವಾಗುವುದಿಲ್ಲ. ಚೆಪಾಕ್ ಪಿಚ್ ಉತ್ತಮವಾಗಿ ಬಳಸಲ್ಪಟ್ಟಿದೆ ಮತ್ತು ಗಟ್ಟಿಯಾದ ಮೇಲ್ಮೈಯನ್ನು ಹೊಂದಿದೆ. ಟಾಸ್ ಗೆದ್ದ ನಾಯಕನು ಮೊದಲು ಬೌಲಿಂಗ್ ಮಾಡುವುದೇ ಸೂಕ್ತ ಆಯ್ಕೆ. ಸಾಧಾರಣ ಸ್ಕೋರ್ ಬಾರಿಸಿದರೂ ಎದುರಾಳಿ ತಂಡವನ್ನು ನಿಯಂತ್ರಿಸಲು ಸಾಧ್ಯವಿದೆ.
ಸಂಭಾವ್ಯ ಪ್ಲೇಯಿಂಗ್ ಇಲೆವೆನ್
ಚೆನ್ನೈ ಸೂಪರ್ ಕಿಂಗ್ಸ್: ರಚಿನ್ ರವೀಂದ್ರ, ಋತುರಾಜ್ ಗಾಯಕ್ವಾಡ್ (ನಾಯಕ), ಅಜಿಂಕ್ಯ ರಹಾನೆ, ಡ್ಯಾರಿಲ್ ಮಿಚೆಲ್, ಶಿವಂ ದುಬೆ, ರವೀಂದ್ರ ಜಡೇಜಾ, ಎಂಎಸ್ ಧೋನಿ (ವಿಕೆಟ್ ಕೀಪರ್), ಶಾರ್ದೂಲ್ ಠಾಕೂರ್, ದೀಪಕ್ ಚಹರ್, ಮುಖೇಶ್ ಚೌಧರಿ, ಮಹೇಶ್ ತಿಕ್ಷಣ .
ರಾಯಲ್ ಚಾಲೆಂಜರ್ಸ್ ಬೆಂಗಳೂರು: ಫಾಫ್ ಡು ಪ್ಲೆಸಿಸ್ (ನಾಯಕ), ವಿರಾಟ್ ಕೊಹ್ಲಿ, ರಜತ್ ಪಾಟಿದಾರ್, ಗ್ಲೆನ್ ಮ್ಯಾಕ್ಸ್ವೆಲ್, ಕ್ಯಾಮೆರಾನ್ ಗ್ರೀನ್, ದಿನೇಶ್ ಕಾರ್ತಿಕ್ (ವಿಕೆಟ್ ಕೀಪರ್), ಮಯಾಂಕ್ ದಾಗರ್, ವಿಜಯಕುಮಾರ್ ವೈಶಾಕ್, ಅಲ್ಜಾರಿ ಜೋಸೆಫ್, ಮೊಹಮ್ಮದ್ ಸಿರಾಜ್, ಕರಣ್ ಶರ್ಮಾ.
- ಆಡಿದ ಪಂದ್ಯಗಳು: 31
- ಚೆನ್ನೈ ಸೂಪರ್ ಕಿಂಗ್ಸ್ 20 ಗೆಲುವು ಸಾಧಿಸಿದೆ.
- ರಾಯಲ್ ಚಾಲೆಂಜರ್ಸ್ ಬೆಂಗಳೂರು 10 ಗೆಲುವು ಸಾಧಿಸಿದೆ.
ಫಲಿತಾಂಶ ಇಲ್ಲ 01 - ಮೊದಲ ಬಾರಿಗೆ ಆಡಿದ್ದು ಏಪ್ರಿಲ್ 28, 2008
- ಕೊನೆಯ ಬಾರಿ ಆಡಿದ್ದು ಏಪ್ರಿಲ್ 17, 2023
- ದಿನಾಂಕ ಶುಕ್ರವಾರ, ಮಾರ್ಚ್ 22
- ಸಮಯ ರಾತ್ರಿ 8:00 ಭಾರತೀಯ ಕಾಲಮಾನ
- ಬ್ರಾಡ್ಕಾಸ್ಟ್ ಸ್ಟಾರ್ ಸ್ಪೋರ್ಟ್ಸ್ ಚಾನೆಲ್ನಗಳು, ಜಿಯೋ ಸಿನೆಮಾ ಅಪ್ಲಿಕೇಶನ್ ಮತ್ತು ವೆಬ್ಸೈಟ್