Site icon Vistara News

IPL: ಲಕ್ನೋ ತಂಡಕ್ಕೆ ನೂತನ ಕೋಚ್​ ನೇಮಕ

Justin Langer is an Australian former cricketer

ಮುಂಬಯಿ: ಲಕ್ನೋ ಸೂಪರ್​ ಜೈಂಟ್ಸ್​(lucknow super giants) ತಂಡ ಮುಂದಿನ ಆವೃತ್ತಿಯ ಐಪಿಎಲ್(IPL)​ ಟೂರ್ನಿಗೆ ಈಗಿನಿಂದಲೇ ಸಿದ್ಧತೆ ಆರಂಭಸಿದೆ. ಇದರ ಭಾಗವಾಗಿ ತಂಡ ಮುಖ್ಯ ಕೋಚ್​ ಆಗಿ ಆಸ್ಟ್ರೇಲಿಯಾದ ಮಾಜಿ ಆಟಗಾರ ಮತ್ತು ಕೋಚ್​ ಆಗಿದ್ದ ಜಸ್ಟೀನ್​ ಲ್ಯಾಂಗರ್(Justin Langer)​ ಅವರನ್ನು ಮುಖ್ಯ ಕೋಚ್​ ಆಗಿ ನೇಮಕ ಮಾಡಲಾಗಿದೆ. ಈ ಹಿಂದೆ ಕೋಚ್​ ಆಗಿದ್ದ ಜಿಂಬಾಬ್ವೆಯ ಆ್ಯಂಡಿ ಫ್ಲವರ್​ಗೆ(Andy Flower) ಗೇಟ್​ಪಾಸ್​ ನೀಡಲಾಗಿದೆ.

2018ರಲ್ಲಿ ದಕ್ಷಿಣ ಆಫ್ರಿಕಾ ವಿರುದ್ಧದ ಪಂದ್ಯದ ವೇಳೆ ಆಸೀಸ್​ ತಂಡ ಬಾಲ್ ಟ್ಯಾಂಪರಿಂಗ್ ಹಗರಣದಲ್ಲಿ ಸಿಲುಕಿದ ಕಾರಣ ಹೆಡ್​ ಕೋಚ್​ ಆಗಿದ್ದ ಡ್ಯಾರೆನ್ ಲೆಹ್ಮನ್ ಅವರು ತಮ್ಮ ಹುದ್ದೆಗೆ ರಾಜಿನಾಮೆ ನೀಡಿದ್ದರು. ಇದಾದ ಬಳಿ ಲ್ಯಾಂಗರ್ ಆಸ್ಟ್ರೇಲಿಯಾ ತಂಡದ ಕೋಚ್​ ಆಗಿ ನೇಮಕಗೊಂಡಿದ್ದರು. ಅವರ ಕೋಚಿಂಗ್​ ಅವಧಿಯಲ್ಲಿ ಆಸ್ಟ್ರೇಲಿಯಾ ಚೊಚ್ಚಲ ಟಿ20 ವಿಶ್ವಕಪ್ ಗೆದ್ದಿತ್ತು. ಇದೀಗ ಲಕ್ನೋ ತಂಡ ಕೋಚ್​ ಆಗಿ ಆಯ್ಕೆಯಾಗಿರುವ ಅವರು ಈ ತಂಡವನ್ನು ಚೊಚ್ಚಲ ಬಾರಿಗೆ ಚಾಂಪಿಯನ್​ ಮಾಡಲಿದ್ದಾರಾ ಎಂದು ಕಾದು ನೋಡಬೇಕಿದೆ.

“ಲ್ಯಾಂಗರ್​ ಅವರ ಮಾರ್ಗದರ್ಶನದಲ್ಲಿ ತಂಡ ಉತ್ತಮ ಪ್ರದರ್ಶನ ತೋರುವ ವಿಶ್ವಾಸವಿದೆ. ಕ್ರಿಕೆಟ್​ ಆಟಗಾರನಾಗಿ ಮತ್ತು ಕೋಚಿಂಗ್​ ವಿಷಯದಲ್ಲಿ ಅವರಿಗೆ ಈಗಾಗಲೇ ಅಪಾರ ಅನುಭವವಿದೆ. ಲಕ್ನೋ ಕುಟುಂಬಕ್ಕೆ ಅವರಿಗೆ ಸ್ವಾಗತ” ಎಂದು ಫ್ರಾಂಚೈಸಿ ಟ್ವಿಟ್​​ ಮೂಲಕ ಲ್ಯಾಂಗರ್ ಅವರ ನೇಮಕಾತಿಯನ್ನು ದೃಢೀಕರಿದೆ.

“ಐಪಿಎಲ್​ನ ಭಾಗವಾಗಿರುವುದು ನಿಜಕ್ಕೂ ಸಂತಸ ತಂದಿದೆ. ಅದರಲ್ಲೂ ವಿಶ್ವದ ಬಲಿಷ್ಠ ಆಟಗಾರರನ್ನು ಹೊಂದಿರುವ ಲಕ್ನೋ ತಂಡ ಸೇರಿದ್ದು ಡಬಲ್ ಖುಷಿ ನೀಡಿದೆ. ನನ್ನ ಕಾರ್ಯಾವಧಿಯಲ್ಲಿ ತಂಡದ ಪ್ರಗತಿಗಾಗಿ ಶ್ರೇಷ್ಠ ಮಟ್ಟದಲ್ಲಿ ಶ್ರಮಿಸುವೆ. ಮುಂದಿನ ಬಾರಿಯ ಐಪಿಎಲ್​ ಆವೃತ್ತಿಗಾಗಿ ಕಾತರದಿಂದ ಕಾಯುತ್ತಿರುವೆ” ಎಂದು ಲ್ಯಾಂಗರ್ ಟ್ವಿಟರ್​ನಲ್ಲಿ ವಿಡಿಯೊ ಸಂದೇಶ ನೀಡಿದ್ದಾರೆ.

ಇದನ್ನೂ ಓದಿ IPL 2023: ಮುಂಬೈ ವಿರುದ್ಧ ಅಜೇಯ ಓಟ ಮುಂದುವರಿಸುವುದೇ ಲಕ್ನೋ ಸೂಪರ್​ ಜೈಂಟ್ಸ್​

2022ರಲ್ಲಿ ಐಪಿಎಲ್​ಗೆ ಪದಾರ್ಪಣೆ ಮಾಡಿದ ಲಕ್ನೋ ಸೂಪರ್​ ಜೈಂಟ್ಸ್​ ತಂಡ ಆಡಿದ ಎರಡೂ ಆವೃತ್ತಿಗಳಲ್ಲಿಯೂ ಎಲಿಮಿನೇಟರ್​​ ಸುತ್ತು ಪ್ರವೇಶಿಸಿದ ಸಾಧನೆ ಮಾಡಿದೆ. ಕನ್ನಡಿಗ ಕೆ.ಎಲ್​ ರಾಹುಲ್​ ಅವರು ತಂಡದ ನಾಯಕನಾಗಿದ್ದಾರೆ. ಈ ಬಾರಿಯ ಆವೃತ್ತಿಯಲ್ಲಿ ಅವರು ಆರ್​ಸಿಬಿ ವಿರುದ್ಧದ ಪಂದ್ಯದ ವೇಳೆ ಕಾಲಿನ ಗಾಯಕ್ಕೆ ಉತ್ತಾಗಿ ಟೂರ್ನಿಯಿಂದ ಹೊರಬಿದ್ದಿದ್ದರು. ಅವರ ಅನುಪಸ್ಥಿತಿಯಲ್ಲಿ ಕೃಣಾಲ್​ ಪಾಂಡ್ಯ ತಂಡವನ್ನು ಮುನ್ನಡೆಸಿದ್ದರು.

Exit mobile version