Site icon Vistara News

IPL Trophy: ಐಪಿಎಲ್​ ಟ್ರೋಫಿಗೂ 1983ರ ವಿಶ್ವಕಪ್​ಗೂ ಇದೆ ನಂಟು; ಏನದು?

mahendra singh dhoni ipl trophy

ದುಬೈ: ಇನ್ನೇನು ಕೆಲ ಗಂಟೆಗಳಲ್ಲಿ 17ನೇ ಆವೃತ್ತಿಯ ಐಪಿಎಲ್​ನ ಆಟಗಾರರ ಮಿನಿ ಹರಾಜು ಪ್ರಕ್ರಿಯೆ ಆರಂಭಗೊಳ್ಳಲಿದೆ. ಈ ಹರಾಜಿನಲ್ಲಿ ಯಾವ ಆಟಗಾರ ಯಾವ ತಂಡಕ್ಕೆ ಸೇಲ್​ ಆಗಬಹುದೆಂಬ ಕುತೂಹಲದ ಮಧ್ಯೆ ಟ್ರೋಫಿಯಲ್ಲಿ((IPL Trophy) ಬರೆದಿರುವ ಸಂಸ್ಕೃತ ಶ್ಲೋಕದ ಅರ್ಥವೇನು? 1983ರ ವಿಶ್ವಕಪ್(1983 Cricket World Cup) ಟ್ರೋಫಿಗೂ ಇರುವ ನಂಟೇನು?​ ಎಂಬ ಮತ್ತೊಂದು ಕುತೂಹಲ ಮೂಡಿದೆ. ಇದಕ್ಕೆ ಉತ್ತರ ಇಲ್ಲಿದೆ.

ಹೌದು, ಭಾರತ ತಂಡ 1983ರಲ್ಲಿ ಗೆದ್ದ ಏಕದಿನ ವಿಶ್ವಕಪ್ ಟ್ರೋಫಿ ಮೇಲೆ “ಯತ್ರಾ ಅವಸರ ಪ್ರಾಪ್ನೋತಿಹಿ”(Yatra Pratibha Avsara Prapnotihi) ಎಂದು ಸಂಸ್ಕೃತ ಶ್ಲೋಕವೊಂದನ್ನು ಬರೆಯಲಾಗಿದೆ. ಇದೇ ಶ್ಲೋಕವನ್ನು ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಇದರ ಅರ್ಥ ಎಲ್ಲಿ ಪ್ರತಿಭೆಗಳು ಇರುತ್ತಾರೋ ಅಲ್ಲಿ ಅವಕಾಶವೂ ಇರುತ್ತದೆ ಎಂದು. ಇದನ್ನೇ ಸ್ಫೂರ್ತಿಯನ್ನಾಗಿಟ್ಟುಕೊಂಡು ಐಪಿಎಲ್​ ಟ್ರೋಫಿಯ ಮೇಲೂ ಈ ಶ್ಲೋಕವನ್ನು ಕೆತ್ತಲಾಗಿದೆ.

1983ರಲ್ಲಿ ಕಪಿಲ್​ ದೇವ್​ ಸಾರಥ್ಯದ ಭಾರತ ತಂಡ ಲಂಡನ್​ಗೆ ವಿಶ್ವಕಪ್​ ಆಡಲು ತೆರಳಿದ್ದಾಗ ಭಾರತ ತಂಡವನ್ನು ಅತ್ಯಂತ ಕೀಳು ಮಟ್ಟದಲ್ಲಿ ಅಪಮಾನ ಮಾಡಲಾಗಿತ್ತು. ಅದರಲ್ಲೂ ಇಂಗ್ಲೆಂಡ್​ ಮತ್ತು ಆಸ್ಟ್ರೇಲಿಯಾ ಮಾಧ್ಯಮಗಳು ಕೆಲ ಸವಾಲನ್ನು ಹಾಕಿದ್ದವು. ಸ್ವತಃ ಭಾರತೀಯರೀಗೂ ಕಪ್​ ಗೆಲ್ಲುವ ವಿಶ್ವಾಸವಿರಲಿಲ್ಲ. ಆದರೆ ಅಂದು ಕಪೀಲ್​ ದೇವ್​ ಪಡೆ ವಿಶ್ವಕಪ್ ಗೆದ್ದು ಇತಿಹಾಸ ನಿರ್ಮಿಸಿತ್ತು.

ಇದನ್ನೂ ಓದಿ IPL Auction 2024: ಹರಾಜು ಪ್ರಕ್ರಿಯೆಯಲ್ಲಿ ಕಾಣಿಸಿಕೊಳ್ಳಲಿದ್ದಾರೆ ರಿಷಭ್​ ಪಂತ್​

ಅರ್ಥಪೂರ್ಣವಾಗಿದೆ ಈ ಶ್ಲೋಕ

ಕಪಿಲ್​ ಸಾರಥ್ಯದಲ್ಲಿ ಗೆದ್ದ ವಿಶ್ವ ಕಪ್​ ಮೇಲೆ “ಯತ್ರಾ ಅವಸರ ಪ್ರಾತ್ನೋತಿನಿ” ಎಂದು ಬರೆಯಲಾಗಿತ್ತು. ಇದನ್ನೇ ಪ್ರಸಿದ್ಧ ಐಪಿಎಲ್​ ಟ್ರೋಫಿಯಲ್ಲಿಯೂ ಬರೆಯಲಾಗಿದೆ. ಐಪಿಎಲ್​ ಎಂಬುದು ಸ್ಥಳೀಯ ಆಟಗಾರರ ಪ್ರತಿಭೆಯನ್ನು ಅನಾವರಣ ಮಾಡಿಸಲು ಇರುವಂತ ಉತ್ತಮ ವೇದಿಕೆಯಾಗಿದೆ. ಸದ್ಯ ಈ ಟೂರ್ನಿಯಿಂದ ಅದೆಷ್ಟೋ ಆಟಗಾರರು ಬೆಳಕಿಗೆ ಬಂದು ಇಂದು ವಿಶ್ವದ ನಂ.1 ಆಟಗಾರರಾಗಿಯೂ ಮೆರೆದಾಡಿದ್ದಾರೆ. ಈ ಕಾರಣದಿಂದ ಟ್ರೋಫಿ ಮೇಲೆ ಬರೆದಿರುವ ಶ್ಲೋಕ ಅರ್ಥಪೂರ್ಣವಾಗಿದೆ.

ipl Trophy


ಈ ಬಾರಿಯ ಹರಾಜಿನಲ್ಲಿ ಒಟ್ಟು 333 ಮಂದಿ ಆಟಗಾರರು ಹರಾಜಿನ ಭಾಗವಾಗಲಿದ್ದಾರೆ. ಇದರಲ್ಲಿ 214 ಭಾರತೀಯರು ಮತ್ತು 119 ಮಂದಿ ವಿದೇಶಿ ಆಟಗಾರರು ಸೇರಿದ್ದಾರೆ. ಅಸೋಸಿಯೇಟ್ ದೇಶಗಳ ಇಬ್ಬರು ಆಟಗಾರರು ಅವಕಾಶ ಪಡೆದಿದ್ದಾರೆ. ಆದರೆ 10 ತಂಡಗಳಲ್ಲಿ 77 ಸ್ಥಾನ ಮಾತ್ರ ಖಾಲಿ ಉಳಿದಿದೆ. ಈ 77 ಮಂದಿ ಯಾರಾಗಲಿದ್ದಾರೆ ಎನ್ನುವುದು ಸದ್ಯದ ಕುತೂಹಲ.

ಹರಾಜು ಪ್ರಕ್ರಿಯೆಯ ಹೈಲೆಟ್ಸ್​

ಹರಾಜಿನಲ್ಲಿರುವ ಒಟ್ಟು ಆಟಗಾರರು: 333

ಹರಾಜಿನಲ್ಲಿರುವ ಭಾರತದ ಆಟಗಾರರು: 214

ಹರಾಜಿನಲ್ಲಿರುವ ವಿದೇಶಿ ಆಟಗಾರರು: 119

ವಿದೇಶಿ ಆಟಗಾರರ ಮೀಸಲು ಕೋಟಾ: 30

10 ತಂಡಗಳಿಗೆ ಬೇಕಿರುವ ಆಟಗಾರರು: 77

ಅಂತಾರಾಷ್ಟ್ರೀಯ ಪಂದ್ಯ ಆಡಿದವರು: 116

ಅನ್​ಕ್ಯಾಪ್ಡ್​ ಆಟಗಾರರು: 215

ಅಸೋಸಿಯೇಟ್‌ ರಾಷ್ಟ್ರದ ಆಟಗಾರರು: 02

ಆರಂಭ: ಭಾರತೀಯ ಕಾಲಮಾನದಂತೆ ಮಧ್ಯಾಹ್ನ 1.00 ಗಂಟೆ

Exit mobile version