Site icon Vistara News

IPL2022 | ಆರ್‌ಸಿಬಿ ಫೈನಲ್‌ ತಲುಪಲು ಇನ್ನೊಂದು ಹೆಜ್ಜೆ ಮಾತ್ರ ಬಾಕಿ!

RCB team is under pressure to win, UP is the opponent in the fourth match

IPL2022 : ಆರ್‌ಸಿಬಿ ಹಾಗೂ ಲಖನೌ ನಡುವಿನ ರೋಚಕ ಪಂದ್ಯದಲ್ಲಿ ಆರ್‌ಸಿಬಿ ಗೆಲುವು ಸಾಧಿಸಿದೆ. ಆರ್‌ಸಿಬಿ ಆಟಗಾರರ ಹಾಗೂ ಅಭಿಮಾನಿಗಳ ಪ್ರಾರ್ಥನೆಗೆ ಫಲ ಸಿಕ್ಕಿ, ಆಟಕ್ಕೆ ಮಳೆ ಅಡ್ಡಿಯಾಗಿಲ್ಲ. ಲಖನೌ ತಂಡದ ವಿರುದ್ಧ 14 ರನ್‌ಗಳ ಭರ್ಜರಿ ಗೆಲುವು ಸಾಧಿಸಿದೆ.

ಪಂದ್ಯದ ಆರಂಭದಲ್ಲಿ ಸಣ್ಣದಾಗಿ ಮಳೆಹನಿ ಶುರುವಾಗಿತ್ತು. ಮಳೆ ಜೋರಾಗಿ ಪಂದ್ಯ ರದ್ದಾಗಿದ್ದರೆ ಆರ್‌ಸಿಬಿ ಮುಂದಿನ ಹಂತಕ್ಕೆ ತಲುಪಲು ಸಾಧ್ಯವಾಗುತ್ತಿರಲಿಲ್ಲ. ಆದರೆ, ಮಳೆರಾಯನೂ ಆರ್‌ಸಿಬಿ ಮೇಲೆ ಕರುಣೆ ತೋರಿಸಿ ಪಂದ್ಯವನ್ನು ರದ್ದಾಗಿಸಲಿಲ್ಲ ಎನ್ನಿಸಿತು. ಮಳೆಹನಿಯ ಕಾರಣದಿಂದ ಪಂದ್ಯ ಸ್ವಲ್ಪ ತಡವಾಗಿ ಆರಂಭವಾಗಬೇಕಾಯಿತು.

ಲಖನೌ ತಂಡ ಟಾಸ್‌ ಗೆದ್ದು ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಂಡಿತು. ಆರಂಭದಲ್ಲಿ ಆರ್‌ಸಿಬಿ ತಂಡದ ನಾಯಕ, ಡು ಪ್ಲೆಸಿಸ್‌, ವಿರಾಟ್‌ ಕೋಹ್ಲಿ ಹಾಗೂ ಮ್ಯಾಕ್ಸ್‌ವೆಲ್‌ ಕಡಿಮೆ ರನ್‌ಗೆ ಪೆವಿಲಿಯನ್‌ಗೆ ಸೇರಿದರು.

ರಜತ್‌ ಪಟಿದಾರ್‌ ಇಂದಿನ ಸ್ಟಾರ್!‌

ತಂಡದ ದಿಗ್ಗಜರೆಲ್ಲ ಬೇಗ ಔಟಾದರೆ ರಜತ್‌ ಪಾಟಿದಾರ್‌ ಏಕಾಂಗಿಯಾಗಿ ಸಮರಕ್ಕೆ ನಿಂತವರಂತೆ ಕಾಣುತ್ತಿದ್ದರು. ಕೇವಲ 54 ಬಾಲ್‌ಗೆ ಅಜೇಯ 112 ರನ್‌ಗಳಿಸಿ ರಜತ್‌ ಫೀಲ್ಡ್‌ನಲ್ಲಿ ಮಿಂಚಿದರು. 12 ಫೋರ್‌ ಹಾಗೂ 7 ಸಿಕ್ಸ್‌ ಬಾರಿಸುವ ಮೂಲಕ ಎಲ್ಲರ ಗಮನ ಸೆಳೆದರು. ಅಭಿಮಾನಿಗಳಿಂದ ಅವರಿಗೆ ಪ್ರಶಂಸೆಯ ಮಹಾಪೂರವೇ ಹರಿದುಬಂತು. ಅವರಿಗೆ ಸಾಥ್‌ ನೀಡಿ ದಿನೇಶ್‌ ಕಾರ್ತಿಕ್‌ ಕೂಡ 23 ಬಾಲ್‌ಗೆ 37 ರನ್‌ಗಳಸಿ ಉತ್ತಮ ಆಟವಾಡಿದರು. ರತ್‌ ಅವರ ಅತ್ಯತ್ತಮ ಆಟದಿಂದ ತಂಡದ ಒಟ್ಟು ಸ್ಕೋರ್‌ 207 ತಲುಪಿತ್ತು.

ಬೃಹತ್‌ ರನ್‌ ಚೇಸ್‌ ಮಾಡಿದ ಲಖನೌ ತಂಡವೂ ಉತ್ತಮ ಆಟವನ್ನಾಡಿತು. ಕೆ.ಎಲ್‌ ರಾಹುಲ್‌ 79 ರನ್‌ಗಳಿಸಿದರೆ, ದೀಪಕ್‌ ಹೂಡಾ 45 ರನ್‌ಗಳಿಸಿದರು. ಆದರೆ, ಇವರಿಬ್ಬರ ಪರಿಶ್ರಮಕ್ಕೆ ತಕ್ಕ ಪ್ರತಿಫಲ ತಂಡಕ್ಕೆ ದೊರಕಲಿಲ್ಲ. 20 ಓವರ್‌ಗಳಲ್ಲಿ 6 ವಿಕೆಟ್‌ ನಷ್ಟಕ್ಕೆ 193 ರನ್‌ ತಲುಪಲಷ್ಟೇ ಸಾಧ್ಯವಾಯಿತು.

ಈ ಪಂದ್ಯದ ಗೆಲುವಿನಿಂದ ಆರ್‌ಸಿಬಿ ಕ್ವಾಲಿಫೈಯರ್‌ 2 ತಲುಪಿದೆ. ಅಲ್ಲಿ, ರಾಜಸ್ಥಾನ ರಾಯಲ್ಸ್‌ ತಂಡವನ್ನು ರಾಯಲ್‌ ಚಾಲೆಂಜರ್ಸ್‌ ಎದುರಿಸಿದೆ. ಆ ಪಂದ್ಯದಲ್ಲಿ ಗೆದ್ದ ತಂಡ ಫೈನಲ್‌ ತಲುಪುತ್ತದೆ.

ಇದನ್ನೂ ಓದಿ: ‌IPL-2022 | ಎಲ್‌ಎಸ್‌ಜಿ ಜತೆಗಿನ ಪಂದ್ಯ ಮಳೆಯಿಂದ ರದ್ದಾದ್ರೆ ಆರ್‌ಸಿಬಿ ಔಟ್‌

Exit mobile version