Site icon Vistara News

Ireland Tour: ಉಮ್ರಾನ್‌ಗೆ ಕೊನೇ ಓವರ್‌ ಕೊಟ್ಟಿದ್ದು ಕರೆಕ್ಟ್‌ ಆಗಿದೆ ಎಂದ ನಾಯಕ ಹಾರ್ದಿಕ್‌

IRELAND TOUR

ಡಬ್ಲಿನ್‌: ಐರ್ಲೆಂಡ್ ವಿರುದ್ಧದ ಟಿ ೨೦ ಸರಣಿಯ (Ireland Tour) ಎರಡನೇ ಪಂದ್ಯದ ಕೊನೇ ಓವರ್‌ ಅನನುಭವಿ ಉಮ್ರಾನ್‌ ಮಲಿಕ್‌ಗೆ ಕೊಟ್ಟಿರುವುದು ಆ ಸಂದರ್ಭಕ್ಕೆ ಸರಿಯಾದ ಆಯ್ಕೆ ಎಂದು ಭಾರತ ತಂಡದ ನಾಯಕ ಹಾರ್ದಿಕ್ ಪಾಂಡ್ಯ ಸಮರ್ಥಿಸಿಕೊಂಡಿದ್ದಾರೆ.

ರೋಚಕವಾಗಿ ನಡೆದ ಈ ಪಂದ್ಯದ ಕೊನೇ ಓವರ್‌ನಲ್ಲಿ ಆತಿಥೇಯ ಐರ್ಲೆಂಡ್‌ ತಂಡಕ್ಕೆ ಗೆಲ್ಲಲು ೧೭ ರನ್‌ಗಳು ಬೇಕಾಗಿದ್ದವು. ಈ ಅವಧಿಯಲ್ಲಿ ಅಂತಾರಾಷ್ಟ್ರೀಯ ಪಂದ್ಯಗಳಲ್ಲಿ ಹೆಚ್ಚು ಅನುಭವ ಹೊಂದಿರುವ ಬೌಲರ್‌ಗಳು ಚೆಂಡೆಸೆಯಬೇಕಾಗುತ್ತದೆ. ಅನನುಭವಿಗಳಾದರೆ ರನ್‌ ಬಿಟ್ಟುಕೊಡುವ ಸಾಧ್ಯತೆಗಳೇ ಹೆಚ್ಚು. ಹೀಗಾಗಿ ೨ ಓವರ್‌ ಎಸೆದು ೧೮ ರನ್ ಮಾತ್ರ ನೀಡಿದ್ದ ಸ್ವತಃ ಹಾರ್ದಿಕ್‌ ಪಾಂಡ್ಯ ಬೌಲಿಂಗ್‌ ಮಾಡಬೇಕಾಗಿತ್ತು. ಆದರೆ, ನಾಯಕ ಪಾಂಡ್ಯ ಯುವ ಬೌಲರ್‌ ಉಮ್ರಾನ್‌ ಮಲಿಕ್‌ ಕೈಗೆ ಚೆಂಡು ನೀಡಿದ್ದರು. ಆದರೆ, ಮೊದಲ ಮೂರು ಎಸೆತಗಳಲ್ಲಿ ಅವರು ೧೦ ರನ್‌ ಬಿಟ್ಟುಕೊಟ್ಟರು. ಅದರಲ್ಲೂ ಒಂದು ನೋ ಬಾಲ್‌ ಹಾಗೂ ಫೋರ್‌. ಹೀಗಾಗಿ ಕೊನೆ ಎರಡು ಎಸೆತಗಳಲ್ಲಿ ಐರ್ಲೆಂಡ್‌ಗೆ ಏಳು ರನ್‌ ಬೇಕಾಯಿತು. ಆ ಬಳಿಕ ಎರಡು ರನ್‌ ಮಾತ್ರ ಬಿಟ್ಟುಕೊಟ್ಟ ಅವರು ತಂಡವನ್ನು ಗೆಲ್ಲಿಸಿದ್ದರು.

ಅವರ ವೇಗಕ್ಕೆ ಬ್ಯಾಟಿಂಗ್ ಸುಲಭವಲ್ಲ

ಉಮ್ರಾನ್‌ ಮಲಿಕ್‌ಗೆ ಚೆಂಡು ನೀಡುವ ವೇಳೆ ಯಾವುದೇ ಚಿಂತೆ ಇರಲಿಲ್ಲ. ಅವರು ಹೊಂದಿರುವ ಗರಿಷ್ಠ ವೇಗವನ್ನು ನಾನು ಯಾವಾಗಲೂ ಬೆಂಬಲಿಸುತ್ತೇನೆ. ಅವರ ವೇಗದ ಎಸೆತಕ್ಕೆ ರನ್‌ ಹೊಡೆಯುವುದು ಅಷ್ಟೊಂದು ಸುಲಭವಲ್ಲ. “”ನಾವೂ ಕ್ರಿಕೆಟ್‌ ಆಡುತ್ತಿದ್ದು, ಗೆಲುವಿಗಾಗಿ ಗರಿಷ್ಠ ಪ್ರಯತ್ನ ಮಾಡುತ್ತೇವೆ. ಅಂತೆಯೇ ಐರ್ಲೆಂಡ್‌ ಕೂಡ ಉತ್ತಮವಾಗಿ ಅಡಿದೆ,” ಎಂದು ಪಾಂಡ್ಯ ಸಮರ್ಥನೆ ಮಾಡಿಕೊಂಡಿದ್ದಾರೆ.

ಇದನ್ನೂ ಓದಿ: IND-IRE T20 |‌ ಹೂಡ-ಹಾರ್ದಿಕ್‌ ಬ್ಯಾಟಿಂಗ್‌ ಅಬ್ಬರ, ಐರ್ಲೆಂಡ್‌ ವಿರುದ್ಧದ ಟಿ20 ಪಂದ್ಯದಲ್ಲಿ ಭಾರತಕ್ಕೆ ಗೆಲುವು

Exit mobile version