ಪಾರ್ಲ್ : 2011ರ ಏಕದಿನ ವಿಶ್ವಕಪ್‌ನಲ್ಲಿ ಅತಿ ವೇಗದ ಶತಕ ಬಾರಿಸಿ ವಿಶ್ವದ ಗಮನ ಸೆಳೆದಿದ್ದ ಐರ್ಲೆಂಡ್ ಬ್ಯಾಟಿಂಗ್ ಆಲ್ರೌಂಡರ್ ಕೆವಿನ್ ಒಬ್ರಿಯಾನ್ (Kevin O’Brien) ಅಂತಾರಾಷ್ಟ್ರೀಯ ಕ್ರಿಕೆಟ್‌ಗೆ ಮಂಗಳವಾರ ವಿದಾಯ ಹೇಳಿದ್ದಾರೆ. 37 ವರ್ಷದ ಈ ಹಿರಿಯ ಆಟಗಾರ ಟ್ವಿಟರ್ ಮೂಲಕ ವಿದಾಯ ಪತ್ರವನ್ನು ಪ್ರಕಟಿಸಿದ್ದಾರೆ. ಮುಂದಿನ ಟಿ20 ವಿಶ್ವ ಕಪ್ ಆಡುವ ಭಾರತ ತಂಡದಿಂದ ಕೈಬಿಟ್ಟಿರುವ ಕಾರಣಕ್ಕೆ ಅವರು ವಿದಾಯ ಹೇಳಿದ್ದಾರೆ ಎನ್ನಲಾಗಿದೆ.
ಹಿರಿಯ ಕ್ರಿಕೆಟಿಗ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವ ಕಪ್ ಬಳಿಕ ನಿವೃತ್ತಿ ಘೋಷಿಸಲು ಬಯಸಿದ್ದೆ. ಆದರೆ ಕಳೆದ ವರ್ಷ ವಿಶ್ವ ಕಪ್ ನಂತರ ನಾನು ಐರ್ಲೆಂಡ್‌ನ ಟಿ20 ತಂಡಕ್ಕೆ ಆಯ್ಕೆಯಾಗಿಲ್ಲ. ಹೀಗಾಗಿ ನಿವೃತ್ತಿ ನೀಡಲು ಮುಂದಾಗಿದ್ದಾನೆ ಎಂದು ಪತ್ರದಲ್ಲಿ ಬರೆದುಕೊಂಡಿದ್ದಾರೆ.
2011 ರಲ್ಲಿ ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಇಂಗ್ಲೆಂಡ್ ವಿರುದ್ಧದ ಏಕ ದಿನ ವಿಶ್ವ ಕಪ್‌ನ ಪಂದ್ಯದಲ್ಲಿ ಕೆವಿನ್ ಅವರು 50 ಎಸೆತಗಳಲ್ಲಿ ಶತಕ ಬಾರಿಸಿದ್ದರು. ಅಲ್ಲದೆ, 63 ಎಸೆತಗಳಲ್ಲಿ 113 ರನ್ ಬಾರಿಸಿದ್ದರು. ಅವರ ಸ್ಫೋಟಕ ಇನಿಂಗ್ಸ್ ನೆರವಿನಿಂದ ಐರ್ಲೆಂಡ್ ತಂಡ ಇನ್ನೂ ಐದು ಎಸೆತಗಳ ಬಾಕಿ ಇರುವಂತೆಯೇ 328 ರನ್ಗಳನ್ನು ಚೇಸ್ ಮಾಡಿ ಇಂಗ್ಲೆಂಡ್ ವಿರುದ್ಧ ಗೆಲುವು ಸಾಧಿಸಿತ್ತು. ಅವರ ಹೆಸರಲ್ಲಿ ಇರುವ ಏಕ ದಿನ ವಿಶ್ವ ಕಪ್‌ನ ವೇಗದ ಶತಕದ ದಾಖಲೆಯನ್ನು ಇನ್ನೂ ಯಾರು ಮುರಿದಿಲ್ಲ.
ಐರ್ಲೆಂಡ್‌ಗಾಗಿ ಆಡುವ ಪ್ರತಿ ನಿಮಿಷವೂ ಖುಷಿಯಲ್ಲಿದ್ದೆ. ಕ್ರಿಕೆಟ್ ಸ್ಟೇಡಿಯಮ್‌ನಲ್ಲಿ ಅನೇಕ ಗೆಳೆಯರನ್ನು ಭೇಟಿ ಮಾಡಿದ್ದೇನೆ. ರಾಷ್ಟ್ರೀಯ ತಂಡಕ್ಕಾಗಿ ಆಡಿದ್ದ ವೇಳೆ ನನಗೆ ಅನೇಕ ಸಂತೋಷದ ನೆನಪುಗಳು ಸಿಕ್ಕಿವೆ. ಇದು ನಿವೃತ್ತಿಗೆ ಸರಿಯಾದ ಸಮಯ ಎಂದು ಭಾವಿಸುತ್ತೇನೆ. ಇನ್ನು ಮುಂದೆ ಐರ್ಲೆಂಡ್‌ನಲ್ಲಿ ನನ್ನ ಸ್ವಂತ ಕೋಚಿಂಗ್ ಅಕಾಡೆಮಿಯನ್ನು ಸ್ಥಾಪಿಸಲು ಬಯಸಿದ್ದೇನೆ ಎಂದು ಅವರು ಒಬ್ರಿಯಾನ್ ನಿವೃತ್ತಿ ಪತ್ರದಲ್ಲಿ ಬರೆದುಕೊಂಡಿದ್ದಾರೆ.
ಕೆವಿನ್ ಒಬ್ರಿಯಾನ್ ಐರ್ಲೆಂಡ್ ಪರ 3 ಟೆಸ್ಟ್, 153 ಏಕದಿನ ಮತ್ತು 110 ಟಿ20 ಅಂತರಾಷ್ಟ್ರೀಯ ಪಂದ್ಯಗಳನ್ನು ಆಡಿದ್ದಾರೆ. ಈ ವೇಳೆ ಒಟ್ಟು 5850 ರನ್ ಹಾಗೂ 172 ವಿಕೆಟ್‌ಗಳನ್ನು ಪಡೆದಿದ್ದಾರೆ. ಏಕದಿನ ಮಾದರಿಯಲ್ಲಿ 3619 ರನ್ ಬಾರಿಸಿದ್ದು, 114 ವಿಕೆಟ್‌ಗಳನ್ನು ಕಬಳಿಸಿದ್ದಾರೆ. ಅದೇ ರೀತಿ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಐರ್ಲೆಂಡ್‌ನ ಏಕೈಕ ಬ್ಯಾಟ್ಸ್‌ಮನ್ ಆಗಿದ್ದಾರೆ.