Site icon Vistara News

Ireland vs India: ದ್ವಿತೀಯ ಪಂದ್ಯಕ್ಕೂ ಮಳೆ ಕಾಟ; ಪಿಚ್​ ರಿಪೋರ್ಟ್​,ಸಂಭಾವ್ಯ ತಂಡ ಹೀಗಿದೆ

The Village, Dublin

ಡಬ್ಲಿನ್​: ಭಾರತ-ಐರ್ಲೆಂಡ್‌(Ireland vs India) ನಡುವಿನ ಮೊದಲ ಟಿ20 ಪಂದ್ಯಕ್ಕೆ ಮಳೆಯಿಂದ ಅಡಚಣೆಯಾಗಿ ಡಿಎಲ್​ಎಸ್​(DLS Method) ನಿಯಮದಂತೆ ಜಸ್​ಪ್ರೀತ್​ ಬುಮ್ರಾ ಪಡೆ 2 ರನ್ ಗಳ ಜಯ ಸಾಧಿಸಿತು. ಇದೀಗ ಭಾನುವಾರ ನಡೆಯುವ ಉಭಯ ತಂಡಗಳ ದ್ವಿತೀಯ(Ireland vs India, 2nd T20) ಪಂದ್ಯಕ್ಕೂ ಮಳೆ ಕಾಟ ಇರಲಿದೆ ಎಂದು ಹವಾಮಾನ(weather forecast) ಇಲಾಖೆ ತಿಳಿಸಿದೆ.

ಭಾರಿ ಮಳೆ ಸಾಧ್ಯತೆ

ಶುಕ್ರವಾರವೇ ಸ್ಥಳೀಯ ಕಾಲಮಾನ ಸಂಜೆ 4ರಿಂದ ಡಬ್ಲಿನ್‌ನಲ್ಲಿ ಮಳೆಯಾಗುವ ಮುನ್ಸೂಚನೆ ನೀಡಿ ಯೆಲ್ಲೋ ಅಲರ್ಟ್‌ ನೀಡಲಾಗಿತ್ತು. ಇದರಂತೆ ಈ ಮೊದಲ ಪಂದ್ಯ ಕೇವಲ ಒಂದು ಇನಿಂಗ್ಸ್​ ಮಾತ್ರ ಆಡಲಾಯಿತು. ಭಾರತದ ಬ್ಯಾಟಿಂಗ್​ ಇನಿಂಗ್ಸ್​ ವೇಳೆ ಮಳೆ ಬಂದು ಪಂದ್ಯ ರದ್ದುಗೊಂಡಿತು. ಇದೀಗ ದ್ವಿತೀಯ ಪಂದ್ಯಕ್ಕೂ ಭಾರಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ತಿಳಿಸಿದೆ. ಜತೆಗೆ ಭಾನುವಾರವೂ ಯೆಲ್ಲೋ ಅಲರ್ಟ್‌ ನೀಡಲಾಗಿದೆ. ಮೊದಲ ಇನಿಂಗ್ಸ್​ ಪೂರ್ಣಗೊಂಡರೂ ದ್ವಿತೀಯ ಸರದಿಯ ಆಟಕ್ಕೆ ಮಳೆ ಸಾಧ್ಯತೆ ಅಧಿಕವಾಗಿದೆ.

ಪಿಚ್​ ರಿಪೋರ್ಟ್

ಮಲಾಹೈಡ್‌ನ ವಿಲೇಜ್ ಕ್ರಿಕೆಟ್ ಸ್ಟೇಡಿಯಂನ ಪಿಚ್​ ಬೌಲಿಂಗ್​ ಸ್ನೇಹಿಯಾಗಿದೆ. ಇಲ್ಲಿ ವೇಗಿಗಳು ಮತ್ತು ಸ್ಪಿನ್ನರ್​ಗಳು ಸಮಾನವಾಗಿ ವಿಕೆಟ್​ ಕೀಳಬಹುದು. ಇದಕ್ಕೆ ಕಳೆದ ಪಂದ್ಯವೇ ಉತ್ತಮ ನಿದರ್ಶನ. ಭಾರತ ಪರ ಬಿಷ್ಣೋಯಿ, ಬುಮ್ರಾ ಮತ್ತು ಪ್ರಸಿದ್ಧ್​ ಕೃಷ್ಣ ತಲಾ ಎರಡು ವಿಕೆಟ್​ ಕೆಡವಿದ್ದರು. ಹೀಗಾಗಿ ಈ ಪಂದ್ಯದಲ್ಲಿಯೂ ಬೌಲರ್​ಗಳೇ ಹಿಡಿತ ಸಾಧಿಸುವ ಸಾಧ್ಯತೆ ಹೆಚ್ಚಾಗಿದೆ. ಇಲ್ಲಿನ ಸರಾಸರಿ ಮೊದಲ ಇನ್ನಿಂಗ್ಸ್ ಮೊತ್ತ 167 ರನ್‌ ಆಗಿದೆ. ಇಬ್ಬನಿಯ ಸಮಸ್ಯೆಯೂ ಇಲ್ಲಿ ಅಧಿಕವಾಗಿರುವ ಕಾರಣ ಚೇಸಿಂಗ್‌ ನಡೆಸುವ ತಂಡಕ್ಕೆ ಹೆಚ್ಚಿನ ಲಾಭವಿದೆ. ಹೀಗಾಗಿ ಟಾಸ್‌ ಗೆದ್ದ ತಂಡ ಮೊದಲು ಬೌಲಿಂಗ್‌ ಆಯ್ಕೆ ಮಾಡಿಕೊಳ್ಳಬಹುದು.

ಇದನ್ನೂ ಓದಿ India vs Ireland: ಭಾರತ-ಐರ್ಲೆಂಡ್‌ ಟಿ20 ಪಂದ್ಯಗಳ ಟಿಕೆಟ್‌ ಸೋಲ್ಡ್‌ ಔಟ್‌

ಬದಲಾವಣೆ ಕಷ್ಟ

ದ್ವಿತೀಯ ತಂಡಕ್ಕೆ ಉಭಯ ತಂಡಗಳಲ್ಲಿ ಬದಲಾವಣೆ ಕಷ್ಟ ಸಾಧ್ಯ. ಮೊದಲ ಪಂದ್ಯದಲ್ಲಿ ಕಣಕ್ಕಿಳಿದ ಆಟಗಾರರೇ ಈ ಪಂದ್ಯದಲ್ಲಿಯೂ ಆಡಬಹುದು. ಈಗಾಗಲೇ ಈ ಪಂದ್ಯದ ಟಿಕೆಟ್​ಗಳು ಸೋಲ್ಡ್​ ಔಟ್​ ಆಗಿದೆ. ಆದರೆ ಮಳೆ ಮಾತ್ರ ಬಿಡುವು ನೀಡಬೇಕಿದೆ. ಈ ಸ್ಟೇಡಿಯಂನಲ್ಲಿ 11,500 ಆಸನಗಳ ಸಾಮರ್ಥ್ಯವನ್ನು ಹೊಂದಿದೆ. ಐಪಿಎಲ್‌ ಸ್ಟಾರ್‌ ರಿಂಕು ಸಿಂಗ್‌ ಕಳೆದ ಪಂದ್ಯದಲ್ಲಿ ಟೀಮ್​ ಇಂಡಿಯಾ ಪರ ಪದಾರ್ಪಣೆ ಮಾಡುದರೂ ಅವರಿಗೆ ಬ್ಯಾಟಿಂಗ್​ ಅವಕಾಶ ಸಿಕ್ಕಿರಲಿಲ್ಲ. ಈ ಪಂದ್ಯದಲ್ಲಿ ಬ್ಯಾಟಿಂಗ್​ ಸಿಗುವ ಸಾಧ್ಯತೆ ಇದೆ.

ಸಂಭಾವ್ಯ ತಂಡ

ಐರ್ಲೆಂಡ್ ತಂಡ: ಪಾಲ್ ಸ್ಟಿರ್ಲಿಂಗ್ (ನಾಯಕ), ಆಂಡ್ರ್ಯೂ ಬಾಲ್ಬಿರ್ನಿ, ಮಾರ್ಕ್ ಅಡೈರ್/ ರಾಸ್ ಅಡೈರ್, ಕರ್ಟಿಸ್ ಕ್ಯಾಂಫರ್, ಗೆರಾತ್ ಡೆಲಾನಿ, ಜಾರ್ಜ್ ಡಾಕ್ರೆಲ್, ಫಿಯಾನ್ ಹ್ಯಾಂಡ್, ಜೋಶ್ ಲಿಟಲ್, ಲೋರ್ಕನ್ ಟಕರ್, ಥಿಯೋ ವ್ಯಾನ್ ವೋರ್ಕಾಮ್, ಬೆನ್ ವೈಟ್/ ಕ್ರೇಗ್ ಯಂಗ್.

ಭಾರತ ತಂಡ: ಜಸ್‌ಪ್ರೀತ್‌ ಬುಮ್ರಾ (ನಾಯಕ), ಋತುರಾಜ್‌ ಗಾಯಕ್ವಾಡ್‌, ಯಶಸ್ವಿ ಜೈಸ್ವಾಲ್‌, ತಿಲಕ್‌ ವರ್ಮ, ರಿಂಕು ಸಿಂಗ್‌, ಸಂಜು ಸ್ಯಾಮ್ಸನ್‌, ಶಿವಂ ದುಬೆ, ವಾಷಿಂಗ್ಟನ್‌ ಸುಂದರ್‌, ರವಿ ಬಿಷ್ಣೋಯಿ, ಪ್ರಸಿದ್ಧ್ ಕೃಷ್ಣ, ಅರ್ಶ್‌ದೀಪ್‌ ಸಿಂಗ್‌/ ಮುಕೇಶ್‌ ಕುಮಾರ್‌.

Exit mobile version