ನವ ದೆಹಲಿ : ಏಷ್ಯಾ ಕಪ್‌ಗೆ (ASIA Cup) ಭಾರತದ ಪ್ರಮುಖ ಬೌಲರ್‌ಗಳಾದ ಜಸ್‌ಪ್ರಿತ್ ಬುಮ್ರಾ ಹಾಗೂ ಹರ್ಷಲ್ ಪಟೇಲ್ ಅಲಭ್ಯರಾಗಿರುವುದು ಪಾಕಿಸ್ತಾನ ಸೇರಿದಂತೆ ಉಳಿದೆಲ್ಲ ತಂಡಗಳಿಗೆ ನಿರಾಳ ಭಾವ ಮೂಡಿಸಿರಬಹುದು ಎಂದು ಭಾರತ ತಂಡದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್ ಹೇಳಿದ್ದಾರೆ. ಈ ಮೂಲಕ ಶಹೀನ್ ಅಫ್ರಿದಿ ಅಲಭ್ಯತೆಯಿಂದ ಭಾರತಕ್ಕೆ ಸಮಾಧಾನವಾಗಿದೆ ಎಂದು ಹೇಳಿದ್ದ ಪಾಕಿಸ್ತಾನದ ಮಾಜಿ ವೇಗಿ ವಕಾರ್ ಯೂನಿಸ್ ಅವರಿಗೆ ತಿರುಗೇಟು ಕೊಟ್ಟಿದ್ದಾರೆ.
ಪಾದದ ನೋವಿನ ಕಾರಣಕ್ಕೆ ಶಹೀನ್ ಶಾ ಅಫ್ರಿದಿ ಏಷ್ಯಾ ಕಪ್‌ನಲ್ಲಿ ಅಡುವುದಿಲ್ಲ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿ ಶನಿವಾರ ಘೋಷಿಸಿತ್ತು. ಸಂಜೆ ವೇಳೆಗೆ ವಕಾರ್ ಯೂನಿಸ್ ಟ್ವೀಟ್ ಮಾಡಿ ಈ ಸುದ್ದಿಯಿಂದ ಭಾರತ ತಂಡಕ್ಕೆ ಸಮಾಧಾನವಾಗಿರಬಹುದು ಎಂದು ಹೇಳಿದ್ದರು. ಈ ಹಿನ್ನೆಲೆಯಲ್ಲಿ ಟ್ವೀಟ್ ಮಾಡಿರುವ ಭಾರತ ತಂಡದ ಮಾಜಿ ವೇಗದ ಬೌಲರ್ ಇರ್ಫಾನ್ ಪಠಾಣ್, ನಮ್ಮ ತಂಡದ ಇಬ್ಬರು ಬೌಲರ್‌ಗಳು ಅಲಭ್ಯರಾಗಿದ್ದಾರೆ ಎಂದು ಹೇಳುವ ಮೂಲಕ ಎದಿರೇಟು ಕೊಟ್ಟಿದ್ದಾರೆ.
೨೦೨೧ರಲ್ಲಿ ದುಬೈನಲ್ಲಿ ನಡೆದ ಟಿ೨೦ ವಿಶ್ವ ಕಪ್‌ನಲ್ಲಿ ಶಹೀನ್ ಶಾ ಅಫ್ರಿದಿ ಭಾರತ ತಂಡ ಪ್ರಮುಖ ಬ್ಯಾಟರ್‌ಗಳನ್ನು ಔಟ್ ಮಾಡುವ ಮೂಲಕ ದೊಡ್ಡ ಮೊತ್ತ ಪೇರಿಸದಂತೆ ಮಾಡಿದ್ದರು. ಇದರಿಂದಾಗಿ ಭಾರತ ೧೦ ವಿಕೆಟ್‌ಗಳಿಂದ ಹೀನಾಯವಾಗಿ ಸೋತಿತ್ತು. ಹೀಗಾಗಿ ಮುಂದಿನ ಶನಿವಾರ ನಡೆಯು ಏಷ್ಯಾ ಕಪ್‌ನ ಹಣಾಹಣಿಯಲ್ಲೂ ಶಹೀನ್ ಪ್ರಮುಖ ಪಾತ್ರ ವಹಿಸಲಿದ್ದಾರೆ ಎಂದು ಹೇಳಲಾಗಿತ್ತು. ಆದರೆ, ಅವರು ಗಾಯದ ಸಮಸ್ಯೆಯಿಂದ ಅಲಭ್ಯರಾಗಿದ್ದಾರೆ.
ಇದನ್ನೂ ಓದಿ | Asia Cup- 2022 | ಭಾರತ ತಂಡವನ್ನು ಕಾಡಿದ್ದ ಪಾಕ್ ಬೌಲರ್ ಏಷ್ಯಾ ಕಪ್ ಟೂರ್ನಿಯಿಂದ ಔಟ್