Site icon Vistara News

ಪೇಶಾವರದಲ್ಲಿ ಪಾಕ್​ ಅಭಿಮಾನಿಗಳ ಪುಂಡಾಟವನ್ನು ನೆನಪಿಸಿಕೊಂಡ ಇರ್ಫಾನ್​ ಪಠಾಣ್​

Irfan Pathan

ಪುಣೆ: ಅಹಮದಾಬಾದ್​ನಲ್ಲಿ(Ahmedabad’s Narendra Modi stadium) ಪ್ರೇಕ್ಷಕರು ಅಸಭ್ಯವಾಗಿ ವರ್ತಿಸಿದ್ದಾರೆ ಎಂದು ಪಾಕಿಸ್ತಾನ ಕ್ರಿಕೆಟ್ ಮಂಡಳಿಯು ಐಸಿಸಿ ದೂರು ನೀಡಿತ್ತು. ಈ ಮೂಲಕ ಭಾರತದ ಪ್ರತಿಷ್ಠೆಗೆ ಧಕ್ಕೆ ಉಂಟು ಮಾಡಲು ಪ್ರಯತ್ನಿಸಿದ್ದರು. ಆದರೆ ಪಾಕಿಸ್ತಾನದ ಪೇಶಾವರದಲ್ಲಿ ನಡೆದಿದ್ದ ಪಂದ್ಯದ ವೇಳೆ ನಡೆದ ಅಹಿತಕರ ಘಟನೆಯನ್ನು ಇರ್ಫಾನ್​ ಪಠಾಣ್(Irfan Pathan)​ ಮೆಲುಕು ಹಾಕಿ ಪಾಕ್​ನ ಕುತ್ರಂತ್ರವನ್ನು ಬಯಲಿಗೆಳೆದಿದ್ದಾರೆ.

ಗುರುವಾರ ನಡೆದ ಬಾಂಗ್ಲಾದೇಶ ವಿರುದ್ಧದ ಪಂದ್ಯದ ವೇಳೆ ಇರ್ಫಾನ್​ ಪಠಾಣ್​ ಅವರು ಈ ಕಹಿ ಘಟನೆಯನ್ನು ಹೇಳಿದರು. ಪಂದ್ಯದಲ್ಲಿ ವೀಕ್ಷಕ ವಿವರಣೆ ವೇಳೆ, ಪೆಶಾವರದಲ್ಲಿ ಭಾರತ ತಂಡವು ಪಾಕಿಸ್ತಾನ ತಂಡದ ವಿರುದ್ಧ ಆಡುವಾಗ ನನ್ನ ಕಣ್ಣಿನ ಕೆಳಗೆ ಮೊಳೆ ತಗುಲಿತ್ತು ಎಂದು ಹೇಳಿದ್ದಾರೆ.

“2003-04ರಲ್ಲಿ ಪೇಶಾವರದಲ್ಲಿ ಪಂದ್ಯವೊಂದನ್ನು ಆಡುವಾಗ ಅಭಿಮಾನಿಯೊಬ್ಬ ನನ್ನತ್ತ ಮೊಳೆಯೊಂದನ್ನು ಎಸೆದ. ಇದು ನನ್ನ ಕಣ್ಣಿನ ಭಾಗಕ್ಕೆ ತಗುಲಿತ್ತು. ನಾನು ಗಂಭೀರವಾಗಿ ಗಾಯಗೊಂಡೆ. ಇದರಿಂದ ಪಂದ್ಯವು 10 ನಿಮಿಷಗಳ ಕಾಲ ಸ್ಥಗಿತಗೊಂಡಿತ್ತು. ನಾನು ಈ ಘಟನೆಯನ್ನು ಅಂಪೈರ್​ ಬಳಿ ಹೇಳಿದ್ದೆ. ಆದರೆ ನಾವು ಪಾಕಿಸ್ತಾನವನ್ನು ದೂರಲಿಲ್ಲ. ಏಕೆಂದರೆ ಅಭಿಮಾನಿ ಮಾಡಿದ ತಪ್ಪಿಗೆ ಇಡೀ ಪಾಕ್​ ಹೊಣೆ ಮಾಡುವುದು ಸರಿಯಲ್ಲ ಎಂದು ನಿರ್ಧರಿಸಿದ್ದೆವು” ಎಂದು ಹೇಳಿದರು. ಇರ್ಫಾನ್ ಪಠಾಣ್ ಅವರು ಈ ವಿಚಾರ ತಿಳಿಸಿದ ತಕ್ಷಣ ಮಾಜಿ ಆಟಗಾರ ಆಕಾಶ್ ಚೋಪ್ರಾ ತಮ್ಮ ಟ್ವಿಟರ್​ ಎಕ್ಸ್​ ಖಾತೆಯಲ್ಲಿ ಪೋಸ್ಟ್ ಮಾಡಿ ಬೆಂಬಲ ಸೂಚಿಸಿದ್ದಾರೆ.

ಪಾಕ್​ಗೆ ಮುಖಭಂಗ

ಆತಿಥೇಯ ಪ್ರೇಕ್ಷಕರು ತೋರಿದ ವರ್ತನೆಯ ಬಗ್ಗೆ ಆಕ್ಷೇಪವೆತ್ತಿ ಐಸಿಸಿಗೆ ದೂರು(PCB’s complaint) ನೀಡಿದ್ದ ಪಾಕಿಸ್ತಾನ ಕ್ರಿಕೆಟ್ ಮಂಡಳಿ (PCB)ಗೆ ಭಾರಿ ಮುಖಭಂಗವಾಗಿದೆ. ಈ ದೂರನ್ನು ಐಸಿಸಿ(ICC) ನಿರಾಕರಿಸಿದೆ.

ಐಸಿಸಿ ನೀತಿ ಸಂಹಿತೆಯ ಪ್ರಕಾರ, ಜನಾಂಗೀಯ ಆರೋಪ ಅಥವಾ ಆಟಗಾರರ ಮೇಲೆ ಪ್ರೇಕ್ಷಕರು ಹಲ್ಲೆ, ದೌರ್ಜನ್ಯ ನಡೆಸಿದರೆ ಜರುಗಿಸಬಹುದು. ಒಂದು ತಂಡ ಅಥವಾ ಗುಂಪಿನ ಮೇಲೆ ಕ್ರಮ ಕೈಗೊಳ್ಳಲಾಗುವುದಿಲ್ಲ ಎಂದು ಹೇಳುವ ಮೂಲಕ ಐಸಿಸಿಯೂ ಪಾಕ್​ ಕ್ರಿಕೆಟ್​ ಮಂಡಳಿಯ ಆರೋಪವನ್ನು ಅಲ್ಲಗಳೆದಿದೆ.

ಇದನ್ನೂ ಓದಿ IND vs BAN: ಕೊಹ್ಲಿಗೆ ಶತಕ ಬಾರಿಸಲು ಒಪ್ಪಿಸಿದ್ದೇ ರಾಹುಲ್​; ಪಂದ್ಯದ ಬಳಿಕ ರಿವೀಲ್

ಕಳೆದ ಶನಿವಾರ ನರೇಂದ್ರ ಮೋದಿ ಕ್ರೀಡಾಂಗಣದಲ್ಲಿ(Narendra Modi Stadium) ನಡೆದುದ್ದ ವಿಶ್ವಕಪ್‌ನ ಬಹುನಿರೀಕ್ಷಿತ ಇಂಡೋ-ಪಾಕ್​ ಪಂದ್ಯದಲ್ಲಿ ಪಾಕ್ ಆಟಗಾರರನ್ನು ಗುರಿಯಾಗಿಸಿಕೊಂಡು ಭಾರತೀಯ ಪ್ರೇಕ್ಷಕರು ಧಾರ್ಮಿಕ ಭಾವನೆಗಳಿಗೆ ಧಕ್ಕೆ ಉಂಟುಮಾಡುವ ವರ್ತನೆ ತೋರಿದ್ದಾರೆ. ಇದು ಐಸಿಸಿ ಟೂರ್ನಿ ಆಯೋಜಿಸುವ ಕ್ರಮವಲ್ಲ ಎಂದು ಪಿಸಿಬಿ ಐಸಿಸಿಗೆ ದೂರು ಸಲ್ಲಿಸಿತ್ತು. ಆದರೆ ಈ ಬಗ್ಗೆ ಯಾವುದೇ ಕ್ರಮ ತೆಗೆದುಕೊಳ್ಳಲು ಐಸಿಸಿ ನಿರಾಕರಿದೆ. ಇದರಿಂದ ಭಾರತದ ಮತ್ತು ಬಿಸಿಸಿಐ ವಿರುದ್ಧ ಕಾಲು ಕೆರೆದು ಜಗಳಕ್ಕೆ ಬಂದ ಪಿಸಿಬಿಗೆ ಮುಖಭಂಗವಾಗಿದೆ.

ಪಂದ್ಯದ ಸೋಲಿಗೆ ಏನಾದರು ಮಾಡಿ ಭಾರತಕ್ಕೆ ಕೆಟ್ಟ ಹೆಸರುನ್ನು ತರುವ ಪಿತೂರಿಯಿಂದ, ಭಾರತೀಯ ಅಭಿಮಾನಿಗಳು ಪಂದ್ಯ ನಡೆಯುತ್ತಿದ್ದಾಗ ‘ಜೈ ಶ್ರೀರಾಮ್’’ ಘೋಷಣೆ ಕೂಗಿದ್ದಾರೆ. ಅಲ್ಲದೆ ಪ್ರೇಕ್ಷಕರು ಶಿಳ್ಳೆ, ಚಪ್ಪಾಳೆಯೊಂದಿಗೆ ಮಿತಿ ಮಿರಿದ ವರ್ತನೆ ತೋರಿದ್ದಾರೆ ಎಂದು ಆರೋಪಿಸಿ ಪಾಕ್ ಐಸಿಸಿಗೆ ದೂರು ನೀಡಿತ್ತು. ಅಲ್ಲದೆ ಪಂದ್ಯದ ವೇಳೆ ಹಾಜರಿದ್ದ ಪಿಸಿಬಿ ಅಧ್ಯಕ್ಷ ಝಕಾ ಆಶ್ರಫ್​ ಕೂಡ ಮೂರು ದಿನಗಳ ಬಳಿಕ ಪಾಕ್ ಪತ್ರಕರ್ತರು, ಅಭಿಮಾನಿಗಳಿಗೆ ವೀಸಾ ವಿಳಂಬದ ಬಗ್ಗೆ ಐಸಿಸಿಗೆ ದೂರು ನೀಡಿದ್ದರು.

Exit mobile version