Site icon Vistara News

Irfan Pathan: ರಾಜಕೀಯ ಪ್ರವೇಶ ಮಾಡಿದ ಯೂಸುಫ್: ಭಾವುಕ ಪೋಸ್ಟ್​ ಮಾಡಿದ ಸಹೋದರ ಇರ್ಫಾನ್

Irfan Pathan and Yusuf Pathan

ಕೋಲ್ಕತ್ತಾ: ಪಶ್ಚಿಮ ಬಂಗಾಳದ (West Bengal) ಎಲ್ಲ 42 ಲೋಕಸಭಾ(Lok Sabha) ಕ್ಷೇತ್ರಗಳಿಗೆ ಟಿಎಂಸಿಯು(Trinamool Congress) ಅಭ್ಯರ್ಥಿಗಳ ಘೋಷಣೆಯಾಗಿದೆ. ಭಾರತ ಕ್ರಿಕೆಟ್​ ತಂಡದ ಮಾಜಿ ಕ್ರಿಕೆಟಿಗ ಯೂಸುಫ್ ಪಠಾಣ್(Yusuf Pathan) ಕೂಡ ಟಿಕೆಟ್​ ಪಡೆದಿದ್ದು, ಬಹರಂಪುರ ಕ್ಷೇತ್ರದಿಂದ ಲೋಕಸಭಾ ಚುನಾವಣೆಗೆ ಸ್ಪರ್ಧಿಸಲಿದ್ದಾರೆ. ಚುನಾವಣ ಅಖಾಡಕ್ಕೆ ಇಳಿದ ಸಹೋದರನಿಗೆ ಇರ್ಫಾನ್ ಪಠಾಣ್(Irfan Pathan) ಭಾವುಕವಾಗಿ ಶುಭ ಹಾರೈಸಿದ್ದಾರೆ. ಜನರ ಜೀವನದಲ್ಲಿ ನೀವು ಬದಲಾವಣೆ ತರಲಿದ್ದೀರಿ ಎನ್ನುವ ವಿಶ್ವಾಸ ಇದೆ ಹೇಳಿದ್ದಾರೆ.

ಇಫಾನ್​ ಪಠಾಣ್​ ಅವರು ಟ್ವಿಟರ್​ ಎಕ್ಸ್​ನಲ್ಲಿ​ ಪೋಸ್ಟ್ ಮಾಡಿ, ಅಧಿಕಾರ ಇದ್ದರೂ, ಇಲ್ಲದಿದ್ದರೂ ನಿಮ್ಮ ತಾಳ್ಮೆ, ದಯೆ, ಅಗತ್ಯವಿರುವವರಿಗೆ ಸಹಾಯ ಮಾಡುವುದು, ಜನ ಸೇವೆಯನ್ನು ಸುಲಭವಾಗಿ ಗಮನಿಸಬಹುದು. ಒಮ್ಮೆ ನೀವು ರಾಜಕೀಯಕ್ಕೆ ಕಾಲಿಟ್ಟರೆ, ಜನರ ದೈನಂದಿನ ಜೀವನದಲ್ಲಿ ನೀವು ಬದಲಾವಣೆಯನ್ನು ತರುತ್ತೀರಿ ಎಂಬ ವಿಶ್ವಾಸ ನನಗಿದೆ’ ಎಂದು ಬರೆದುಕೊಂಡಿದ್ದಾರೆ.

ಮೂಲತಃ ಗುಜರಾತ್‌ನವರಾದ ಯೂಸುಫ್ ಪಠಾಣ್ ಐಪಿಎಲ್​ನಲ್ಲಿ ಕೆಕೆಆರ್​ ತಂಡದ ಪರ ಹಲವು ವರ್ಷಗಳ ಕಾಲ ಆಡಿದ್ದರು. ಅಲ್ಲದೆ ತಂಡದ ಪ್ರಧಾನ ಆಟಗಾರನಾಗಿ ಗುರುತಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬಂಗಾಳದಾದ್ಯಂತ ಯೂಸುಫ್​ಗೆ ಅಪಾರ ಸಂಖ್ಯೆಯ ಅಭಿಮಾನಿಗಳಿದ್ದಾರೆ. ಇದೇ ಕಾರಣದಿಂದ ಅವರಿಗೆ ಪಶ್ಚಿಮ ಬಂಗಾಳದಿಂದ ಟಿಎಂಸಿ ಟಿಕೆಟ್​ ನೀಡಿದೆ. ಇವರ ಎದುರಾಳಿ ಕಾಂಗ್ರೆಸ್‌ ನಾಯಕ ಅಧೀರ್‌ ರಂಜನ್‌ ಚೌಧರಿ.

ಇದನ್ನೂ ಓದಿ TMC Candidates List: ಮಹುವಾ ಸೇರಿ 42 ಮಂದಿಗೆ ಟಿಎಂಸಿ ಟಿಕೆಟ್;‌ ‘ಕೈ’ ಜತೆ ಮೈತ್ರಿಗೆ ‘ಬೈ’

ಪಠಾಣ್‌ ಸೋದರರಲ್ಲಿ ಹಿರಿಯರಾದ ಯೂಸುಫ್ ಪಠಾಣ್‌ ಹೊಡಿಬಡಿ ಆಟಕ್ಕೆ ಖ್ಯಾತರಾಗಿದ್ದರು. 2007ರ ಚೊಚ್ಚಲ ಟಿ20 ವಿಶ್ವಕಪ್‌, 2011ರ ವಿಶ್ವಕಪ್‌, ಕೆಕೆಆರ್‌ನ ಐಪಿಎಲ್‌ ಗೆಲುವಿನ ವೇಳೆ ತಂಡದ ಸ್ಟಾರ್‌ ಆಟಗಾರನಾಗಿ ಮಿಂಚಿದ್ದು ಯೂಸುಫ್ ಹೆಗ್ಗಳಿಕೆ. 2021ರಲ್ಲಿ ಎಲ್ಲ ಮಾದರಿಯ ಕ್ರಿಕೆಟ್​ಗೆ ವಿದಾಯ ಹೇಳಿದ್ದರು. ಯೂಸುಫ್ ಪಠಾಣ್‌ 57 ಏಕದಿನ ಪಂದ್ಯಗಳಿಂದ 810 ರನ್‌ ಹೊಡೆದಿದ್ದಾರೆ. 2 ಶತಕ, 3 ಅರ್ಧ ಶತಕ ಇದರಲ್ಲಿ ಒಳಗೊಂಡಿದೆ. 22 ಟಿ20 ಪಂದ್ಯಗಳಿಂದ 236 ರನ್‌ ಬಾರಿಸಿದ್ದಾರೆ. 2012ರಲ್ಲಿ ಭಾರತವನ್ನು ಕೊನೆಯ ಸಲ ಪ್ರತಿನಿಧಿಸಿದ್ದರು.

ಇರ್ಫಾನ್ ಪಠಾಣ್​ಗೆ ಬಿಜೆಪಿ ಟಿಕೆಟ್​ ಸಾಧ್ಯತೆ?


ಇರ್ಫಾನ್ ಪಠಾಣ್ ಅವರು ಕಳೆದ ಗುಜರಾತ್​ ವಿಧಾನಸಭೆ ಚುನಾವಣೆಯಲ್ಲಿ ಬಿಜೆಪಿ ಪರ ಪ್ರಚಾರ ಮಾಡಿದ್ದರು. ಪ್ರಧಾನಿ ನರೇಂದ್ರ ಮೋದಿ ಜತೆಯೂ ಕಾಣಿಸಿಕೊಂಡಿದ್ದರು. ಹೀಗಾಗಿ ಅವರಿಗೆ ಬಿಜೆಪಿ ಟಿಕೆಟ್​ ಸಿಕ್ಕರೂ ಅಚ್ಚರಿಯಿಲ್ಲ.

Exit mobile version