ಮುಂಬಯಿ: ಡೆಲ್ಲಿ- ಡೆಹ್ರಾಡೂನ್ ಎಕ್ಸ್ಪ್ರೆಸ್ವೇನಲ್ಲಿ ನಡೆದ ಭೀಕರ ಕಾರು ಅವಘಡದಲ್ಲಿ ಗಾಯಗೊಂಡಿರುವ ಭಾರತ ತಂಡದ ವಿಕೆಟ್ಕೀಪರ್ ಬ್ಯಾಟರ್ ರಿಷಭ್ ಪಂತ್ (Rishabh Pant) ಅವರನ್ನು ಹೆಚ್ಚಿನ ಚಿಕಿತ್ಸೆಗಾಗಿ ಮುಂಬಯಿಯ ಕೋಕಿಲಾ ಬೆನ್ ಆಸ್ಪತ್ರೆಗೆ ಸೇರಿಸಲಾಗಿದೆ. ಅಲ್ಲಿಗೆ ಟೀಮ್ ಇಂಡಿಯಾದ ಮಾಜಿ ನಾಯಕ ಹಾಗೂ ವಿಕೆಟ್ಕೀಪರ್ ಬ್ಯಾಟರ್ ಮಹೇಂದ್ರ ಸಿಂಗ್ ಧೋನಿ ಭೇಟಿ ನೀಡಿ ಪಂತ್ ಅರೋಗ್ಯ ವಿಚಾರಿಸಿದ್ದರೆ ಎಂಬ ಸುದ್ದಿಯೊಂದು ಹರಿದಾಡಿತ್ತು. ಅದಕ್ಕೆ ಪೂರಕವಾಗಿರುವ ಚಿತ್ರವೊಂದನ್ನೂ ಹಾಕಲಾಗಿದೆ. ಆದರೆ, ಈ ಸುದ್ದಿಯೇ ಸುಳ್ಳು ಎಂಬುದಾಗಿ ಇದೀಗ ಹೇಳಲಾಗುತ್ತಿದೆ.
ಹಾಗಾದರೆ, ಪಂತ್ ಆರೋಗ್ಯ ವಿಚಾರಿಸಲು ಧೋನಿ ಹೋಗಿಲ್ಲವೇ? ಹಾಗಾದರೆ ಚಿತ್ರ ಯಾರದ್ದು ಎಂಬ ಪ್ರಶ್ನೆ ಸಹಜ. ಆದರೆ, ಇಂಟರ್ನೆಟ್ ಯುಗದಲ್ಲಿ ಫೋಟೋಗಳನ್ನು ಎಡಿಟ್ ಮಾಡಿ ಹರಿಬಿಡುವ ಕೃತ್ಯಗಳು ಹೆಚ್ಚಾಗುತ್ತಿವೆ. ಹಾಗೆಯೆ ಈ ಚಿತ್ರವನ್ನೂ ಎಡಿಟ್ ಮಾಡಿ ಹಾಕಲಾಗಿದೆ. ಅಂದರೆ ನಿಜವಾದ ಪೋಟೋ ಯಾರದ್ದು ಎಂಬ ಪ್ರಶ್ನೆಯೂ ಸಹಜ. ಆ ಚಿತ್ರವೂ ಕೋಕಿಲಾ ಬೆನ್ ಆಸ್ಪತ್ರೆಯದ್ದಲ್ಲ. ಬದಲಾಗಿದೆ. ಬಾಲಿವುಡ್ ಬಾದ್ಶಾ ಶಾರುಖ್ ಖಾನ್ ಅವರ ಚಿತ್ರ. ಅವರ ದೇಹಕ್ಕೆ ಧೋನಿಯ ತಲೆಯನ್ನಿಟ್ಟು ಪ್ರಕಟಿಸಲಾಗಿದೆ.
ಶಾರುಖ್ ಖಾನ್ ಅವರು 2017ರ ಮೇ 8ರಂದು ದುಬೈನ ಅಲ್ ಜಲಿಲಾ ಆಸ್ಪತ್ರೆಗೆ ಭೇಟಿ ನೀಡಿ ಪುಟಾಣಿ ಮಗುವೊಂದರ ಆರೋಗ್ಯ ವಿಚಾರಿಸಿದ್ದರು. ಆ ಚಿತ್ರವನ್ನು ದುಬೈ ಸರಕಾರ ತನ್ನ ವೆಬ್ಸೈಟ್ನಲ್ಲಿ ಪ್ರಕಟಿಸಿತ್ತು. ಅದೇ ಚಿತ್ರದಲ್ಲಿ ಶಾರುಖ್ ದೇಹಕ್ಕೆ ಧೋನಿಯ ತಲೆಯನ್ನಿಟ್ಟು, ಬೆಡ್ಮೇಲೆ ಗಾಯಗೊಂಡ ರಿಷಭ್ ಪಂತ್ ಅವರ ಚಿತ್ರವನ್ನು ಇರಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಡಲಾಗಿದೆ.
ಇದನ್ನೂ ಓದಿ | Rishabh Pant | ರಿಷಭ್ ಪಂತ್ ಮೊಣಕಾಲಿನ ಶಸ್ತ್ರಚಿಕಿತ್ಸೆ ಯಶಸ್ವಿ; ಬಿಸಿಸಿಐ ಮಾಹಿತಿ