ನವದೆಹಲಿ: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಮತ್ತು ಕ್ರಿಕೆಟಿಗ ಶುಬ್ಮನ್ ಗಿಲ್(Shubman Gill) ಡೇಟಿಂಗ್ ನಡೆಸುತ್ತಿದ್ದಾರೆ ಎನ್ನುವ ಸುದ್ದಿ ಎಲ್ಲೆಡೆ ಹರಿದಾಟುತ್ತಿರುವ ಮಧ್ಯೆ ಗಿಲ್ ಮತ್ತು ಸಾರಾ ದಿಲ್ಲಿಯ ಹೋಟೆಲ್ ಒಂದರಿಂದ ಜತೆಯಾಗಿ ಹೊರ ಬರುತ್ತಿರುವ ಮತ್ತು ವಿಮಾನದಲ್ಲಿ ಪರಸ್ಪರ ಪಕ್ಕ ಕುಳಿತಿರುವ ವಿಡಿಯೊ ಸಾಮಾಜಿಕ ಜಾಲತಾಣದಲ್ಲಿ ಸಿಕ್ಕಾಪಟ್ಟೆ ವೈರಲ್ ಆಗಿದೆ.
ಕಳೆದ ಕೆಲವು ದಿನಗಳಿಂದ ಸಾರಾ ಅಲಿ ಖಾನ್ ಮತ್ತು ಗಿಲ್ ಪರಸ್ಪರ ಡೇಟಿಂಗ್ ಮಾಡುತ್ತಿದ್ದಾರೆ ಎಂಬ ವದಂತಿಗಳಿವೆ. ಇಬ್ಬರೂ ಒಟ್ಟಿಗೆ ದುಬೈನಲ್ಲಿ ಡಿನ್ನರ್ ಮಾಡುತ್ತಿದ್ದ ಫೋಟೊ ಒಂದು ಕೆಲ ದಿನಗಳ ಹಿಂದೆ ವೈರಲ್ ಆಗಿತ್ತು. ಇದೀಗ ಸಾರಾ ಮತ್ತು ಗಿಲ್ ಒಟ್ಟಿಗೆ ಕಾಣಿಸಿಕೊಂಡ ವಿಚಾರಾವಾಗಿ ನೆಟ್ಟಿಗರು ಸಿಕ್ಕಾಪಟ್ಟೆ ಚರ್ಚೆ ಆರಂಭಿಸಿದ್ದಾರೆ. ಅರೆ ಗಿಲ್ ಇಲ್ಲೇನು ಮಾಡುತ್ತಿದ್ದಾರೆ. ದಕ್ಷಿಣ ಆಫ್ರಿಕಾ ಸರಣಿ ಮುಗಿದ ಬಳಿಕ ಗಿಲ್ಗೆ ದಿಲ್ಲಿಯ ಹೋಟೆಲ್ನಲ್ಲಿ ಏನು ಕೆಲಸ ಹೀಗೆ ಹಲವಾರು ತರ್ಲೆ ಪ್ರಶ್ನೆಗಳ ಮೂಲಕ ನೆಟ್ಟಿಗರು ಗಿಲ್ ಕಾಲೆಳೆದಿದ್ದಾರೆ.
ಈ ಹಿಂದೆ ಗಿಲ್ ಮತ್ತು ಸಾರಾ ತೆಂಡೂಲ್ಕರ್ ಇಬ್ಬರ ನಡುವೆ ಬ್ರೇಕಪ್ ಮಾಡಿಕೊಂಡಿದ್ದಾರೆ ಎಂಬ ಸುದ್ದಿ ಎಲ್ಲಡೆ ಹರಿದಾಡಿತ್ತು. ಇದರ ನಡುವೆ ಗಿಲ್ ಇನ್ಸ್ಟಾಗ್ರಾಮ್ ಪೋಸ್ಟ್ ಕೂಡ ವೈರಲ್ ಆಗಿತ್ತು. ಆದರೆ ಇದ್ಯಾವುದಕ್ಕೂ ತಲೆಕೆಡಿಸಿಕೊಳ್ಳದೆ ಸದ್ಯ ತಮ್ಮ ಆಟದ ಕಡೆ ಗಮನ ಹರಿಸಿದ್ದಾರೆ.
ಇದನ್ನೂ ಓದಿ | ICC Ranking | ದಕ್ಷಿಣ ಆಫ್ರಿಕಾದ ಆಟಗಾರನನ್ನೂ ಓವರ್‌ಟೇಕ್ ಮಾಡಿದ ಸೂರ್ಯಕುಮಾರ್ ಯಾದವ್