ನವದೆಹಲಿ: ಐಸಿಸಿ ಕ್ರಿಕೆಟ್ ವಿಶ್ವಕಪ್ 2023 (ICC World Cup 2023) ಟೂರ್ನಿಯ ಉದ್ಘಾಟನಾ ಪಂದ್ಯದಲ್ಲಿ ಇಂಗ್ಲೆಂಡ್ ಹಾಗೂ ನ್ಯೂಜಿಲೆಂಡ್ ತಂಡಗಳು ಮುಖಾಮುಖಿಯಾಗಿವೆ. ಈ ಮೂಲಕ ಭಾರತದ ಆತಿಥ್ಯದಲ್ಲಿ ನಡೆಯುತ್ತಿರುವ ಜಾಗತಿಕ ಕ್ರಿಕೆಟ್ ಟೂರ್ನಿಗೆ ಚಾಲನೆ ದೊರಕಿದೆ. ಪಂದ್ಯದಲ್ಲಿ ಡೆವೊನ್ ಕಾನ್ವೇ (121 ಎಸೆತಗಳಲ್ಲಿ 152* ರನ್) ಮತ್ತು ರಚಿನ್ ರವೀಂದ್ರ (96 ಎಸೆತಗಳಲ್ಲಿ 123* ರನ್) ಅವರ ಆಕರ್ಷಕ ಶತಕಗಳ ನೆರವಿನಿಂದ ನ್ಯೂಜಿಲೆಂಡ್ ತಂಡವು ಹಾಲಿ ಚಾಂಪಿಯನ್ಸ್ ತಂಡವನ್ನು 9 ವಿಕೆಟ್ಗಳ ಭರ್ಜರಿ ಅಂತರದಿಂದ ಗೆಲವು ಸಾಧಿಸಿದೆ .
ಮೈದಾನದಲ್ಲಿ ಅಬ್ಬರದ ಕ್ರಿಕೆಟ್ ಪ್ರದರ್ಶನಗೊಂಡಿರುವ ಹೊರತಾಗಿಯೂ ಆತಂಕಕಾರಿ ವಿಷಯವೊಂದು ಮೊದಲ ಪಂದ್ಯದಲ್ಲಿ ಪ್ರಕಟಗೊಂಡಿದೆ. ಅದೇನೆಂದರೆ ಪಂದ್ಯ ನಡೆದಿರುವ ಅಹಮದಾಬಾದ್ನ ನರೇಂದ್ರ ಮೋದಿ ಸ್ಟೇಡಿಯಂನಲ್ಲಿ ನಡೆದ ಉದ್ಘಾಟನಾ ಪಂದ್ಯಕ್ಕೆ ಪ್ರೇಕ್ಷಕರ ಸಂಖ್ಯೆ ಸಾಕಷ್ಟು ಕಡಿಮೆ ಇತ್ತು. ಬಹುತೇಕ ಸೀಟ್ಗಳು ಖಾಲಿ ಬಿದ್ದಿದ್ದವು. ಪ್ರೇಕ್ಷಕರಿಲ್ಲದೆ ಸ್ಟೇಡಿಯಮ್ ಬಣಗುಟ್ಟಿದ್ದವು. ಕ್ರಿಕೆಟ್ ಪ್ರೇಮಿಗಳ ದೇಶವಾಗಿರುವ ಭಾರತದಲ್ಲಿ ವಿಶ್ವ ಕಪ್ನಂಥ ಮಹಾನ್ ಕ್ರೀಡಾಕೂಟದ ಪಂದ್ಯವೊಂದಕ್ಕೆ ಅಷ್ಟೊಂದು ಕಡಿಮೆ ಸಂಖ್ಯೆಯಲ್ಲಿ ಪ್ರೇಕ್ಷಕರು ಬಂದಿರುವುದು ಹಲವು ಅನುಮಾನಗಳಿಗೆ ಕಾರಣವಾಗಿದೆ. ಏಕ ದಿನ ವಿಶ್ವ ಕಪ್ ಭವಿಷ್ಯ ಮಸುಕಾಗುತ್ತಿದೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಹೋಲಿಕೆ ಆರಂಭ
ಕ್ರಿಕೆಟ್ ಅಭಿಮಾನಿಗಳು ಪ್ರೇಕ್ಷಕರ ಸಂಖ್ಯೆಯನ್ನು ವಿಶ್ವಕಪ್ನ ಹಿಂದಿನ ಆವೃತ್ತಿಗಳ ಆರಂಭಿಕ ಪಂದ್ಯಗಳೊಂದಿಗೆ ಹೋಲಿಸಲು ಪ್ರಾರಂಭಿಸಿದ್ದರಿಂದ ಕ್ರೀಡಾಂಗಣದಲ್ಲಿನ ಖಾಲಿ ಸ್ಟ್ಯಾಂಡ್ಗಳ ಚಿತ್ರಗಳು ಸಾಮಾಜಿಕ ಮಾಧ್ಯಮದಲ್ಲಿ ಆತಂಕ ಹುಟ್ಟಿಸಿದವು ಆಟವು ಮುಂದುವರಿದಂತೆ, ಖಾಲಿ ಆಸನಗಳು ತುಂಬಲು ಪ್ರಾರಂಭಿಸಿದವು. ಆದರೆ 1,32,000 ಆಸನಗಳ ಸಾಮರ್ಥ್ಯವನ್ನು ಹೊಂದಿರುವ ವಿಶ್ವದ ಅತಿದೊಡ್ಡ ಕ್ರಿಕೆಟ್ ಕ್ರೀಡಾಂಗಣದಲ್ಲಿ ಬೆರಳೆಣಿಕೆಯಷ್ಟು ಜನರು ಮಾತ್ರ ಇದ್ದಿದ್ದು ಮಾತ್ರ ಸುಳ್ಳಲ್ಲ. ಜತೆಗೆ ಇದೊಂದು ಆತಂಕಾರಿ ವಿಷಯವೂ ಹೌದು.
ವಿಶ್ವಕಪ್ ಆರಂಭಿಕ ಪಂದ್ಯದಲ್ಲಿನ ಖಾಲಿ ಸ್ಟ್ಯಾಂಡ್ಗಳು ಏಕದಿನ ಕ್ರಿಕೆಟ್ ಕ್ರಮೇಣ ಜನಪ್ರಿಯತೆ ಕಳೆದುಕೊಳ್ಳುತ್ತಿವೆ ಎಂಬ ಸುಳಿವನ್ನು ಮತ್ತೊಮ್ಮೆ ನೀಡಿತು. ವಿಶೇಷವೆಂದರೆ, ಟಿ 20 ಜ್ವರವು ಇಡೀ ಜಗತ್ತನ್ನು ಆವರಿಸಿರುವ ಈ ಸಂದರ್ಭದಲ್ಲಿ 50 ಓವರ್ಗಳ ಪಂದ್ಯವನ್ನು ವೀಕ್ಷಿಸಲು ಜನರಲ್ಲಿ ಆಸಕ್ತಿಯ ಕೊರತೆ ಇದೆ ಎಂದು ಹೇಳಲಾಗುತ್ತಿದೆ.
ಏಕದಿನ ಸ್ವರೂಪವನ್ನು ವಿಶ್ವಕಪ್ಗೆ ಮಾತ್ರ ಸೀಮಿತಗೊಳಿಸುವ ಬಗ್ಗೆ ಹಲವಾರು ಮಾಜಿ ಮತ್ತು ಹಾಲಿ ಕ್ರಿಕೆಟಿಗರು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದ್ದರಿಂದ, ಪ್ರಸ್ತುತ ನಡೆಯುತ್ತಿರುವ ಕ್ರಿಕೆಟ್ ವಿಶ್ವಕಪ್ 13 ನೇ ಆವೃತ್ತಿಯು 52 ವರ್ಷಗಳ ಹಳೆಯ ಸ್ವರೂಪದ ನಿಜವಾದ ಪರೀಕ್ಷೆ ಎಂದು ಹೇಳಲಾಗುತ್ತಿದೆ. ಇದು ಹಲವು ವರ್ಷಗಳಿಂದ ಅಭಿಮಾನಿಗಳನ್ನು ಮೋಡಿ ಮಾಡಿದ ಮಾದರಿಯಾಗಿದೆ.
ಇದನ್ನೂ ಓದಿ : Tilak Varma : ಅಮ್ಮಾ ಈ ಸಾಧನೆ ನಿನಗರ್ಪಣೆ, ಅರ್ಧಶತಕ ಬಾರಿಸಿ ತಾಯಿಯನ್ನು ಸ್ಮರಿಸಿದ ತಿಲಕ್ ವರ್ಮಾ
ಪ್ರತಿದಿನ ಪ್ರೇಕ್ಷಕರ ಗಮನದ ವ್ಯಾಪ್ತಿ ಕಡಿಮೆಯಾಗುತ್ತಿರುವುದರಿಂದ, ಟಿ 20 ಸ್ವರೂಪವು ಸಾಂಪ್ರದಾಯಿಕ ಏಕದಿನ ಪಂದ್ಯಗಳನ್ನು ಹಿಂದಿಕ್ಕಿದೆ ಎಮಬುದನ್ನು ಸಾಬೀತುಪಡಿಸಿದೆ. , ಏಕೆಂದರೆ ಪ್ರೇಕ್ಷಕರು ಈಗ 50 ಓವರ್ಗಳ ಸ್ವರೂಪದಲ್ಲಿ ಅನುಭವಿಸಿದ ಖುಷಿಯನ್ನು ಏಕದಿನ ಮಾದರಿಯಲ್ಲಿ ಅನುಭವಿಸಲು ಸಾಧ್ಯವಾಗುತ್ತಿಲ್ಲ.
ನಿಯಮಗಳ ಬದಲಾವಣೆ ಮತ್ತು ಆವಿಷ್ಕಾರಗಳು?
ವಿಶ್ವಕಪ್ನ ಮುಂಬರುವ ಪಂದ್ಯಗಳು ಸ್ವರೂಪವನ್ನು ಜೀವಂತವಾಗಿಡುವಲ್ಲಿ ದೊಡ್ಡ ಪಾತ್ರ ವಹಿಸುತ್ತವೆ. ವಿಶೇಷವಾಗಿ ಅಕ್ಟೋಬರ್ 14 ರಂದು ಅದೇ ಸ್ಥಳದಲ್ಲಿ ಭಾರತ ಮತ್ತು ಪಾಕಿಸ್ತಾನ ಪಂದ್ಯ. ನಡೆಯಲಿದೆ. ಆ ಪಂದ್ಯವು ಅತ್ಯಂತ ರೋಚಕವಾಗಿರಲಿದೆ ಎಂದು ಹೇಳಲಾಗುತ್ತಿದೆ. ಅಂದೂ ಪ್ರೇಕ್ಷಕರ ಸಂಖ್ಯೆ ಕಡಿಮೆಯಾದರೆ ಏಕ ದಿನ ಕ್ರಿಕೆಟ್ ಭವಿಷ್ಯ ಕಷ್ಟಕ್ಕೆ ಬೀಳಲಿದೆ. ಏಕ ದಿನ ಕ್ರಿಕೆಟ್ನಲ್ಲಿ ಕೆಲವೊಂದು ರೋಚಕ ಪಂದ್ಯಗಳು ನಡೆಯುತ್ತಿರುವ ಹೊರತಾಗಿಯೂ ಜನರು ಅಭಿಮಾನ ಕಳೆದುಕೊಂಡಿದ್ದು ಮಾತ್ರ ಸುಳ್ಳಲ್ಲ.
ಐಸಿಸಿ (ಅಂತರರಾಷ್ಟ್ರೀಯ ಕ್ರಿಕೆಟ್ ಕೌನ್ಸಿಲ್) ಈಗಾಗಲೇ ತಮ್ಮ ಮುಂದಿನ ಚಕ್ರದಲ್ಲಿ ಏಕದಿನ ಪಂದ್ಯಗಳ ಸಂಖ್ಯೆಯನ್ನು ಕಡಿಮೆ ಮಾಡಿದೆ. ಆದಾಗ್ಯೂ, ಅವರು ಕ್ರಿಕೆಟ್ನ ಅತ್ಯಂತ ಸಮತೋಲಿತ ಸ್ವರೂಪದ ಜೀವನಾಡಿಯನ್ನು ವಿಸ್ತರಿಸಲು ಸಿದ್ಧರಿದ್ದರೆ, ಹೊಸ ಆವಿಷ್ಕಾರಗಳು ಮತ್ತು ನಿಯಮಗಳಲ್ಲಿ ಸ್ವಲ್ಪ ಬದಲಾವಣೆ ಮಾಡಬೇಕಾಗುತ್ತದೆ.