ಹರಾರೆ : ಕ್ರಿಕೆಟ್‌ನಲ್ಲಿ ಒಂದೊಂದು ಬಾರಿ ಏನೇನೊ ನಡೆದುಬಿಡುತ್ತದೆ. ಅಂತೆಯೇ ಜಿಂಬಾಬ್ವೆ ವಿರುದ್ಧದ ಏಕ ದಿನ ಸರಣಿಯ (IND vs ZIM ODI) ಮೂರನೇ ಪಂದ್ಯದಲ್ಲೂ ಇಂಥದ್ದೇ ಒಂದು ಪ್ರಸಂಗ ನಡೆದಿದೆ. ಇಲ್ಲಿ ಜಿಂಬಾಬ್ವೆ ತಂಡದ ಬೌಲರ್‌ಗಳು ಭಾರತದ ಬ್ಯಾಟರ್ ಶುಬ್ಮನ್ ಗಿಲ್‌ಗೆ ಎಲ್‌ಬಿಡಬ್ಲ್ಯು ಔಟ್‌ಗೆ ಅಪೀಲ್ ಮಾಡಿದರೆ, ನಾನ್ ಸ್ಟ್ರೈಕ್ ಎಂಡ್‌ನಲ್ಲಿದ್ದ ಇಶಾನ್ ಕಿಶನ್ ಔಟಾಗಿ ಹೋಗುವಂತಾಯಿತು.
ಇನಿಂಗ್ಸ್‌ನ ೪೨ನೇ ಓವರ್‌ನಲ್ಲಿ ಈ ಪ್ರಸಂಗ ನಡೆದಿದೆ. ೯೭ ರನ್ ಬಾರಿಸಿ ಕ್ರೀಸ್‌ನಲ್ಲಿದ್ದರು. ಇವಾನ್ಸ್ ಅವರ ಎಸೆತ ಶುಬ್ಮನ್ ಗಿಲ್ ಅವರ ಪ್ಯಾಡ್‌ಗೆ ಬಡಿದ ಕಾರಣ ಎಲ್‌ಬಿಡಬ್ಲ್ಯುಗೆ ಅಪೀಲ್ ಮಾಡಿದ್ದಾರೆ. ಈ ವೇಳೆ ನಾನ್‌ಸ್ಟ್ರೈಕ್ ಎಂಡ್‌ನಲ್ಲಿದ್ದ ಇಶಾನ್ ಕಿಶನ್ ರನ್‌ಗಾಗಿ ಓಡಿದ್ದಾರೆ. ಜಿಂಬಾಬ್ವೆ ಫೀಲ್ಡರ್ ಚೆಂಡೆತ್ತಿ ನಾನ್‌ಸ್ಟ್ರೈಕ್ ವಿಕೆಟ್ ಕಡೆಗೆ ಎಸೆದಿದ್ದು, ಅದು ನೇರವಾಗಿ ಬೇಲ್ಸ್ ಎಗರಿಸಿದೆ. ಇಶಾನ್ ನಿರಾಸೆಯಿಂದ ಪೆವಿಲಿಯನ್ ಕಡೆಗೆ ಹೊರಟಿದ್ದಾರೆ. ಅದರೆ, ಜಿಂಬಾಬ್ವೆ ಆಟಗಾರರು ಗಿಲ್ ವಿಕೆಟ್‌ಗಾಗಿ ಮರು ಅಂಪೈರ್ ತೀರ್ಪು ಮರು ಪರಿಶೀಲನೆ ಮಾಡಲು ಮುಂದಾಗಿದ್ದಾರೆ. ಅದರಲ್ಲಿ ಗಿಲ್ ಬಚಾವಾಗಿದ್ದಾರೆ. ಹೀಗಾಗಿ ಇಶಾನ್ ಕಿಶನ್ ನಿರಾಸೆಯಿಂದ ತೆರಳಬೇಕಾಯಿತು.
ಎಲ್‌ಬಿಡಬ್ಲ್ಯು ಸಾಧ್ಯತೆಯಿಂದ ಬಚಾವಾದ ಶುಬ್ಮನ್ ಗಿಲ್, ಶತಕ ಬಾರಿಸಿದರಲ್ಲದೆ, ಒಟ್ಟು ೧೩೦ ರನ್ ಗಳಿಸಿದರು. ಈ ಮೂಲಕ ಜಿಂಬಾಬ್ವೆ ನೆಲದಲ್ಲಿ ಆ ತಂಡದ ವಿರುದ್ಧ ಗರಿಷ್ಠ ರನ್ ಬಾರಿಸಿದ ಸಚಿನ್ ತೆಂಡೂಲ್ಕರ್ ಅವರ ದಾಖಲೆ ಮುರಿದರು.
ಇದನ್ನೂ ಓದಿ | IND vs ZIM ODI | ಅಕ್ಷರ್ ಪಟೇಲ್ ಮೈಮೇಲೆ ಚೆಂಡೆಸೆದ ಇಶಾನ್ ಕಿಶನ್! ದುರುಗುಟ್ಟಿ ನೋಡಿದ ಸ್ಪಿನ್ನರ್