ರಾಂಚಿ: ಬಾಂಗ್ಲಾದೇಶ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ದ್ವಿಶತಕ ಬಾರಿಸಿ ಮಿಂಚಿದ್ದ ಇಶಾನ್ ಕಿಶನ್(Ishan Kishan) ಇದೀಗ ರಿಯಲ್ ಎಸ್ಟೇಟ್ ಉದ್ಯಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ರಾಂಚಿಯಲ್ಲಿ ಎಂ.ಎಸ್ ಧೋನಿ ಫಾರ್ಮ್ ಹೌಸ್ ಸಮೀಪದಲ್ಲೇ ಶಗುನ್ ಇಶಾನ್ ಇನ್ಫ್ರಾ ಡೆವಲಪರ್ಸ್ ಪ್ರೈವೇಟ್ ಲಿಮಿಟೆಡ್ ಎಂಬ ರಿಯಲ್ ಎಸ್ಟೇಟ್ ಉದ್ಯಮ ಆರಂಭಿಸಲು ನಿರ್ಧರಿಸಿದ್ದಾರೆ ಎಂದು ತಿಳಿದು ಬಂದಿದೆ.
ಮೂಲತಃ ಬಿಹಾರದವರಾದ ಇಶಾನ್ ಕಿಶನ್ ಪ್ರಥಮ ದರ್ಜೆ ಕ್ರಿಕೆಟ್ನಲ್ಲಿ ಜಾರ್ಖಂಡ್ ತಂಡವನ್ನು ಪ್ರತಿನಿಧಿಸುತ್ತಿದ್ದಾರೆ. ತಂದೆ ಪ್ರಣವ್ ಕುಮಾರ್ ಪಾಂಡೆ ಪ್ರಸಿದ್ಧ ಔಷಧಿ ಪೂರೈಕೆದಾರರು. ಜತೆಗೆ ರಿಯಲ್ ಎಸ್ಟೇಟ್ ಉದ್ಯಮವನ್ನೂ ನಡೆಸುತ್ತಿದ್ದಾರೆ. ಇದೀಗ ಮಗ ಇಶಾನ್ ಕಿಶನ್ ಕೂಡ ಕ್ರಿಕೆಟ್ ಜತೆಗೆ ತಂದೆಯಂತೆ ರಿಯಲ್ ಎಸ್ಟೇಟ್ ಜಗತ್ತಿಗೆ ಕಾಲಿಡಲು ಮುಂದಾಗಿದ್ದಾರೆ.
ಸದ್ಯ ಇಶಾನ್ ಕಿಶನ್ ಬಾಂಗ್ಲಾ ವಿರುದ್ಧದ ಏಕದಿನ ಸರಣಿ ಮುಕ್ತಾಯದ ಬಳಿಕ ತವರಿಗೆ ಆಗಮಿಸಿ ರಣಜಿ ಕ್ರಿಕೆಟ್ ಟೂರ್ನಿಯಲ್ಲಿ ತೊಡಗಿದ್ದಾರೆ. ಅದರಂತೆ ರಾಂಚಿಯ ಜೆಎಸ್ಸಿಎ ಸ್ಟೇಡಿಯಂನಲ್ಲಿ ಕೇರಳ ವಿರುದ್ಧ ಆಡುತ್ತಿದ್ದಾರೆ. ಕಳೆದ ಬಾಂಗ್ಲಾ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ ಇಶಾನ್(210 ರನ್ 131 ಎಸೆತ) ಸಿಡಿಲಬ್ಬರದ ಬ್ಯಾಟಿಂಗ್ ನಡೆಸುವ ಮೂಲಕ ವೇಗವಾಗಿ ದ್ವಿಶತಕ ಬಾರಿಸಿ ವಿಶ್ವ ದಾಖಲೆಯನ್ನು ನಿರ್ಮಿಸಿದ್ದರು.
ಇದನ್ನೂ ಓದಿ | IND VS BAN | ಬೇಲ್ಸ್ ಕೃಪೆಯಿಂದ ಜೀವದಾನ ಪಡೆದ ಶ್ರೇಯಸ್ ಅಯ್ಯರ್: ವಿಡಿಯೊ ವೈರಲ್