ಬಾರ್ಬಡಾಸ್: ವೆಸ್ಟ್ ಇಂಡೀಸ್ ವಿರುದ್ಧದ ಏಕದಿನ ಸರಣಿಯಲ್ಲಿ(India tour of West Indies, 2023) ಸತತ ಎರಡು ಅರ್ಧಶತಕ ಬಾರಿಸಿ ಮಿಂಚಿರುವ ಎಡಗೈ ಆಟಗಾರ ಇಶಾನ್ ಕಿಶನ್(ishan kishan), ಭಾರತ ತಂಡದ ಮಾಜಿ ನಾಯಕ ಮಹೇಂದ್ರ ಸಿಂಗ್ ಧೋನಿ(MS Dhoni) ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಜತೆಗೆ ಸಚಿನ್ ತೆಂಡೂಲ್ಕರ್(Sachin Tendulkar) ಅವರ ದಾಖಲೆಯೊಂದನ್ನು ಕೂಡ ಮುರಿದಿದ್ದಾರೆ.
ಶನಿವಾರ ನಡೆದ ದ್ವಿತೀಯ(West Indies vs India, 2nd ODI) ಪಂದ್ಯದಲ್ಲಿ ಆರಂಭಿನಾಗಿ ಕಣಕ್ಕಿಳಿದ ಇಶಾನ್ ಕಿಶನ್ 6 ಬೌಂಡರಿ ಮತ್ತು 1 ಸಿಕ್ಸರ್ ನೆರವಿನಿಂದ 55 ರನ್ ಬಾರಿಸಿ ಅಧರ್ಶಶಕ ಪೂರ್ತಿಗೊಳಿಸಿದರು. ಇದೇ ವೇಳೆ ವಿಶ್ವಕಪ್ ವಿಜೇತ ಧೋನಿ ಅವರ ದಾಖಲೆಯೊಂದನ್ನು ಸರಿಗಟ್ಟಿದ್ದಾರೆ. ಧೋನಿ ಬಳಿಕ ವೆಸ್ಟ್ ಇಂಡೀಸ್ ನೆಲದಲ್ಲಿ ಸತತ ಎರಡು ಅರ್ಧಶತಕ ಬಾರಿಸಿದ ದ್ವಿತೀಯ ವಿಕೆಟ್ ಕೀಪರ್-ಬ್ಯಾಟರ್ ಎನಿಸಿಕೊಂಡರು. ಧೋನಿ ಅವರು 2017 ವಿಂಡೀಸ್ ಪ್ರವಾಸದಲ್ಲಿ ಮೂರನೇ ಮತ್ತು ನಾಲ್ಕನೇ ಏಕದಿನದಲ್ಲಿ ಪಂದ್ಯದಲ್ಲಿ ಕ್ರಮವಾಗಿ 78 ಮತ್ತು 54 ರನ್ ಪೇರಿಸಿದ್ದರು. ಇದೀಗ ಇಶಾನ್ ಕಿಶನ್ ಮೊದಲ ಪಂದ್ಯದಲ್ಲಿ 52 ಮತ್ತು ದ್ವಿತೀಯ ಪಂದ್ಯದಲ್ಲಿ 55 ರನ್ ಬಾರಿಸುವ ಮೂಲಕ ಧೋನಿ ದಾಖಲೆಯನ್ನು ಸರಿಗಟ್ಟಿದರು. ಅಂತಿಮ ಪಂದ್ಯದಲ್ಲಿ ಇಶಾನ್ ಕಿಶನ್ ಅರ್ಧಶತಕ ಬಾರಿಸಿದರೆ ಧೋನಿ ದಾಖಲೆ ಪತನಗೊಳ್ಳಲಿದೆ.
ಸಚಿನ್ ದಾಖಲೆ ಉಡೀಸ್
ಕ್ರಿಕೆಟ್ ದೇವರು ಎಂದು ಕರೆಯಲ್ಪಡುವ ಸಚಿನ್ ತೆಂಡೂಲ್ಕರ್ ಅವರ ದಾಖಲೆಯೊಂದನ್ನು ಇಶಾನ್ ಕಿಶನ್ ಮುರಿದಿದ್ದಾರೆ. ಐದು ಇನಿಂಗ್ಸ್ಗಳ ಬಳಿಕ ನಂತರ ಭಾರತ ಪರ ಆರಂಭಿನಾಗಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್‌ಗಳ ಪಟ್ಟಿಯಲ್ಲಿ ಮೊದಲ ಇಶಾನ್ ಮೊದಲ ಸ್ಥಾನ ಪಡೆದಿದ್ದಾರೆ. ತೆಂಡೂಲ್ಕರ್ ಅವರು ಆರಂಭಿಕನಾಗಿ ಮೊದಲ ಐದು ಇನಿಂಗ್ಸ್ನಲ್ಲಿ 321 ರನ್ ಬಾರಿಸಿದ್ದರು. ಕಿಶನ್ ಇದೀಗ 348 ರನ್ ಗಳಿಸಿ ಸಚಿನ್ ಅವರನ್ನು ಹಿಂದಿಕ್ಕಿದ್ದಾರೆ.
ಇದನ್ನೂ ಓದಿ Shubman Gill: ಪಾಕ್ ನಾಯಕ ಬಾಬರ್ ಅಜಂ ವಿಶ್ವ ದಾಖಲೆ ಪುಡಿಗಟ್ಟಿದ ಶುಭಮನ್ ಗಿಲ್
Ishan Kishan with a steady FIFTY off 51 deliveries.
— BCCI (@BCCI) July 29, 2023
This is his 5th ODI half-century 👏
Live – https://t.co/hAPUkZJVrp… #WIvIND pic.twitter.com/yjlK4EdBnG
ಬ್ಯಾಟಿಂಗ್ ಬಡ್ತಿ ಪಡೆದು ಉತ್ತಮವಾಗಿ ಆಡುತ್ತಿರುವ ಇಶಾನ್ ಕಿಶನ್ ವಿಶ್ವಕಪ್ ತಂಡದ ರೇಸ್ನಲ್ಲಿ ತಾನು ಕೂಡ ಪ್ರತಿಸ್ಪರ್ಧಿ ಎಂಬ ಸಷ್ಟ ಸಂದೇಶವೊಂದನ್ನು ಇತರ ಆಟಗಾರರಿಗೆ ನೀಡಿದ್ದಾರೆ. ರಿಷಭ್ ಪಂತ್ ಅವರ ಅನುಪಸ್ಥಿತಿಯಲ್ಲಿ ವಿಕೆಟ್ ಕೀಪಿಂಗ್ ಹೊಣೆ ಹೊತ್ತಿರುವ ಅವರು ಮುಂದಿನ ಸರಣಿಯಲ್ಲಿಯೂ ಶ್ರೇಷ್ಠಮಟ್ಟದ ಬ್ಯಾಟಿಂಗ್ ಮತ್ತು ಕೀಪಿಂಗ್ ನಡೆಸಿದರೆ ವಿಶ್ವಕಪ್ಗೆ ಆಯ್ಕೆಯಾಗಬಹುದು. ಏಕದಿನ ಕ್ರಿಕೆಟ್ನಲ್ಲಿ ದ್ವಿಶತಕ ಬಾರಿಸಿದ ಅತಿ ಕಿರಿಯ ಆಟಗಾರ ಎಂಬ ದಾಖಲೆಯೂ ಇಶಾನ್ ಕಿಶನ್ ಹೆಸರಿನಲ್ಲಿದೆ.